ದಾವಣಗೆರೆ ಜೂ.2
   2019-20 ನೇ ಮುಂಗಾರು ಮಳೆ ಋತು ಹಾಗೂ 2020-21 ನೇ
ಸಾಲಿನ ಹಿಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ
ರೈತರಿಂದ ಭತ್ತ ಖರೀದಿಸುವ ಪ್ರಕ್ರಿಯೆಯನ್ನು ಜೂನ್ 30
ರವರೆಗೆ ವಿಸ್ತರಿಸಲಾಗಿದೆ.
ಈ ಹಿನ್ನೆಲೆಯಲ್ಲಿ 2019-20 ರ ಮುಂಗಾರು ಋತು ಹಾಗೂ 2020-21
ನೇ ಸಾಲಿನ ಹಿಂಗಾರು ಋತುವಿನ ಭತ್ತ ಖರೀದಿ ಪ್ರಕ್ರಿಯೆಯನ್ನು
ಷರತ್ತುಗಳಿಗೆ ಒಳಪಟ್ಟು ಜೂನ್ 30 ರವರೆಗೆ
ಮುಂದುವರೆಸುವಂತೆ ಎಲ್ಲಾ ಸಂಗ್ರಹಣಾ ಏಜೆನ್ಸಿಗಳಿಗೆ
ತಿಳಿಸಲಾಗಿದೆ.
ಷರತ್ತುಗಳು : 2019-20 ನೇ ಸಾಲಿನ ಮುಂಗಾರು ಋತುವಿನಲ್ಲಿ
ಖರೀದಿಸಲಾಗುವ ಭತ್ತವನ್ನು ಹಲ್ಲಿಂಗ್ ಮಾಡಿ ಅಕ್ಕಿಯನ್ನು
ಸರಬರಾಜು ಮಾಡುವ ಅವಧಿಯು 30-08-2020 ಹಾಗೂ 2020-21 ನೇ
ಸಾಲಿನ ಹಿಂಗಾರು ಋತುವಿನಲ್ಲಿ ಖರೀದಿಸಲಾಗುವ ಭತ್ತವನ್ನು ಹಲ್ಲಿಂಗ್
ಮಾಡಿ ಅಕ್ಕಿಯನ್ನು ಸರಬರಾಜು ಮಾಡುವ ಅವಧಿಯು 30-09-2020
ಆಗಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಕೋವಿಡ್ 19 ಹರಡುವಿಕೆ ಹಿನ್ನೆಲೆಯಲ್ಲಿನ ಲಾಕ್‍ಡೌನ್
ನಿಯಮಗಳುನುಸಾರ ಸಾಮಾಜಿಕ ಅಂತರ ಹಾಗೂ ನೈರ್ಮಲ್ಯ
ಕಾಪಾಡುವುದು. ಸಂಗ್ರಹಣಾ ಕೇಂದ್ರದಲ್ಲಿ ಜನಜಂಗುಳಿ
ಉಂಟಾಗದಂತೆ ನೋಡಿಕೊಳ್ಳಲು ನಿರ್ದಿಷ್ಟ ಸಂಖ್ಯೆಯ ರೈತರಿಗೆ
ಮಾತ್ರ ಅವಕಾಶ ನೀಡುವುದು. ಸಂಗ್ರಹಣಾ ಕೇಂದ್ರದಿಂದ
ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಕೈಗಳನ್ನು
ಸ್ಯಾನಿಟೈಸರ್‍ನಿಂದ ಸ್ವಚ್ಚಗೊಳಿಸತಕ್ಕದ್ದು ಮತ್ತು
ಕಡ್ಡಾಯವಾಗಿ ಮಾಸ್ಕ್‍ನ್ನು ಧರಿಸತಕ್ಕದ್ದು. ಕೋವಿಡ್ 19
ಹರಡುವಿಕೆಯನ್ನು ತಡೆಗಟ್ಟುವ ಬಗ್ಗೆ ಕೇಂದ್ರ/ರಾಜ್ಯ
ಸರ್ಕಾರವು ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ
ಪಾಲಿಸಬೇಕೆಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *