ದಾವಣಗೆರೆ ಜೂ.03
ಹರಿಹರ ನಗರಸಭೆ ಕಚೇರಿ ಜವಾನ ಎಚ್.ಮಲ್ಲೇಶಪ್ಪ ಇವರು
ಜನವರಿ 6 ರಿಂದ ಯಾವುದೇ ಪೂರ್ವಾನುಮತಿ ಇಲ್ಲದೆ ಕಚೇರಿಗೆ
ಗೈರು ಹಾಜರಾಗಿರುತ್ತಾರೆ. ಕರ್ತವ್ಯಕ್ಕೆ ಹಾಜರಾಗಲು ಹಲವಾರು
ನೋಟೀಸ್‍ಗಳನ್ನು ನೀಡಿದ್ದರೂ ಸಹ ಲಿಖಿತ
ಸಮಜಾಯಿಷಿಯನ್ನಾಗಲಿ ಅಥವಾ ಕರ್ತವ್ಯಕ್ಕೆ ಹಾಜರಾಗಿ ವರದಿ
ಮಾಡಿಕೊಂಡಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಇನ್ನು 7 ದಿನಗಳಲ್ಲಿ ಹಾಜರಾಗಲು
ಸೂಚಿಸಿದೆ. ತಪ್ಪಿದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ
ಪ್ರಕಾರ ಕರ್ತವ್ಯ ನಿರ್ಲಕ್ಷತೆ ಆರೋಪದ ಮೇರೆಗೆ ಇಲಾಖಾ
ಶಿಸ್ತು ಕ್ರಮ ಕೈಗೊಳ್ಳಲು ಮಾನ್ಯ ಜಿಲ್ಲಾಧಿಕಾರಿಗಳು ಇವರಿಗೆ
ವರದಿ ಸಲ್ಲಿಸಲಾಗುವುದು ಎಂದು ಹರಿಹರ ನಗರಸಭೆ
ಪೌರಾಯುಕ್ತರಾದ ಎಸ್.ಲಕ್ಷ್ಮೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.