ದಾವಣಗೆರೆ ಜೂ.2
   ದಾವಣಗೆರೆಯಲ್ಲಿ ಇಂದು 3 ಕೊರೊನಾ ಪಾಸಿಟಿವ್ ಪ್ರಕರಣಗಳು
ವರದಿಯಾಗಿದ್ದು, ಒಂದು ಸಾವು ಸಂಭವಿಸಿದೆ. ಹಾಗೂ ಇಂದು 13 ಜನ
ಕೊರೊನಾದಿಂದ ಗುಣಮುಖರಾದವರನ್ನು ಆಸ್ವತ್ರೆಯಿಂದ
ಬಿಡುಗಡೆ ಮಾಡಲಾಗಿದೆ
ಇದುವರೆಗೆ ಒಟ್ಟು 166 ಪ್ರಕರಣಗಳು ವರದಿಯಾಗಿದ್ದು, 134
ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಒಟ್ಟು 5 ಸಾವು ಸಂಭವಿಸಿದ್ದು, 27 ಸಕ್ರಿಯ ಪ್ರಕರಣಗಳು ಚಿಕಿತ್ಸೆ
ಪಡೆಯುತ್ತಿವೆ.
ಇಂದು 286 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ
ಪರೀಕ್ಷೆಗೆ ಕಳುಹಿಸಲಾಗಿದೆ. ಇಂದು ಒಟ್ಟು 383 ನೆಗೆಟಿವ್ ಎಂದು
ವರದಿ ಬಂದಿದೆ. 286 ಜನರ ಪರೀಕ್ಷೆಯ ಫಲಿತಾಂಶ ನಿರೀಕ್ಷೆಯಲ್ಲಿದೆ.
ಇದುವರೆಗೆ ಒಟ್ಟು 9268 ಜನರ ಗಂಟಲುದ್ರವ ಮಾದರಿಯನ್ನು
ಪರೀಕ್ಷೆಗೆ ಕಳುಹಿಸಲಾಗಿದ್ದು 8644 ನೆಗೆಟಿವ್ ಎಂದು ವರದಿ ಬಂದಿದೆ.
16 ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಪ್ರತಿ ದಿನ ಜ್ವರ/ಐಎಲ್‍ಐ/ಸಾರಿ
ಸಮೀಕ್ಷೆ ನಡೆಸಲಾಗುತ್ತಿದೆ. 3 ದಿನಗಳಿಗೊಮ್ಮೆ ಬಫರ್
ಝೋನ್‍ನಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ತೀವ್ರ ಉಸಿರಾಟದ
ತೊಂದರೆಗೆ(ಎಸ್‍ಎಆರ್‍ಐ)ಸಂಬಂಧಿಸಿದಂತೆ ಇದುವರೆಗೆ 338 ಪರೀಕ್ಷೆ
ನಡೆಸಲಾಗಿದ್ದು ಈ ಪೈಕಿ 3 ಪಾಸಿಟಿವ್ ಬಂದಿದ್ದು, 331 ನೆಗೆಟಿರ್ ಎಂದು
ವರದಿ ಬಂದಿದೆ. 3 ರ ಫಲಿತಾಂಶ ನಿರೀಕ್ಷೆಯಲ್ಲಿದೆ. ಶೀತ ಕೆಮ್ಮು ಜ್ವರ
(ಐಎಲ್‍ಐ)ಕ್ಕೆ ಸಂಬಂಧಿಸಿದಂತೆ 652 ಪರೀಕ್ಷೆ ನಡೆಸಲಾಗಿದ್ದು, 619
ನೆಗೆಟಿವ್ ಎಂದು ವರದಿ ಬಂದಿದ್ದು, 7 ಪಾಸಿಟಿವ್ ವರದಿ ಬಂದಿದೆ ಮತ್ತು 26
ಜನರ ಪರೀಕ್ಷೆ ಫಲಿತಾಂಶ ನಿರೀಕ್ಷೆಯಲ್ಲಿದೆ ಇಂದು 13 ಜನರ
ಡಿಸ್ಚಾರ್ಜ್ ಆಗಿದ್ದಾರೆ.

Leave a Reply

Your email address will not be published. Required fields are marked *