ದಾವಣಗೆರೆ ಜೂ.04
ಹರಿಹರ ನಗರಸಭೆ ವ್ಯಾಪ್ತಿಯ ಆಸ್ತಿ ತೆರಿಗೆ ಮೇಲೆ
ಒದಗಿಸಲಾಗುವ ಶೇ.5 ರಷ್ಟು ರಿಯಾಯಿತಿ ಸೌಲಭ್ಯವನ್ನು
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‍ಡೌನ್ ಇರುವ
ಪ್ರಯುಕ್ತ ಏಪ್ರಿಲ್ 30 ರವರೆಗೆ ಇದ್ದ ಅವಧಿಯನ್ನು
ಸರ್ಕರದ ಆದೇಶದಂತೆ ಜುಲೈ 31 ರವರೆಗೆ ವಿಸ್ತರಿಸಲಾಗಿದೆ.
ಸಾರ್ವಜನಿಕರು ಕೊರೊನಾ ಸಂಕಷ್ಟ ಕಾಲದಲ್ಲಿ ತಮ್ಮ
ಅತ್ಯಮೂಲ್ಯವಾದ ಹಣವನ್ನು ದಂಡದ ರೂಪದಲ್ಲಿ ಪಾವತಿಸದೇ
ರಿಯಾಯಿತಿ ಸೌಲಭ್ಯವನ್ನು
ಸದುಪಯೋಗಪಡಿಕೊಳ್ಳಬೇಕೆಂದು ಪೌರಾಯುಕ್ತರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.