ದಾವಣಗೆರೆ ಜೂ.04
ಕೋವಿಡ್-19 ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ವಿಧಿಸಿದ್ದರಿಂದ
ಜಿಲ್ಲೆಯ ಹಣ್ಣು ಮತ್ತು ತರಕಾರಿ ಬೆಳೆಗಾರರು ತೀವ್ರ ನಷ್ಟಕ್ಕೆ
ಒಳಗಾಗಿರುವ ಕಾರಣ ಪರಿಹಾರ ಧನ ನೀಡಲು ಅರ್ಹ
ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
2019-20 ನೇ ಸಾಲಿನ ಹಣ್ಣು ಮತ್ತು ತರಕಾರಿ ಬೆಳಗಳ ಹಿಂಗಾರು
ಬೆಳೆ ಸಮೀಕ್ಷೆಯನ್ನು ಆಧಾರವಾಗಿರಿಸಿಕೊಂಡು ಹಾಗೂ
ಬಹುವಾರ್ಷಿಕ ಹಣ್ಣಿನ ಬೆಳೆಗಳಿಗೆ 2019-20ನೇ ಸಾಲಿನ ಮುಂಗಾರು
ಬೆಳೆ ಸಮೀಕ್ಷೆಯನ್ನು ಆಧಾರಗಿಟ್ಟುಕೊಂಡು
ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
ಸರ್ಕಾರದ ಆದೇಶದಂತೆ ಪ್ರತಿ ಹೆಕ್ಟೇರ್‍ಗೆ ಗರಿಷ್ಠ ರೂ. 15
ಸಾವಿರ ಹಾಗೂ ರೂ. 2 ಸಾವಿರಗಳ ಕನಿಷ್ಠÀ ಪರಿಹಾರ
ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ
ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಅಥವಾ
ತಾಲ್ಲೂಕಿನ ಹಿರಿಯ ಸಹಾಯಕ ನಿರ್ದೇಶಕರನ್ನು
ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಕರ ಲಕ್ಷ್ಮೀಕಾಂತ್
ಬೊಮ್ಮನ್ನಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.