ದಾವಣಗೆರೆ ಜೂ.4
ಇಂದು ಜಿಲ್ಲೆಯಲ್ಲಿ 13 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು,
ಒಂದು ಸಾವು ಸಂಭವಿಸಿದೆ. ಹಾಗೂ 7 ಜನರು ಗುಣಮುಖರಾಗಿ ಜಿಲ್ಲಾ
ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ
ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ರೋಗಿ ಸಂಖ್ಯೆ
4083 ರಿಂದ 4095 ರವರೆಗೆ ಒಟ್ಟು 13 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಇವರಲ್ಲಿ ಬಹುತೇಕರು ರೋಗಿ ಸಂಖ್ಯೆ 2819 ಮತ್ತು 2415 ರ
ಸಂಪರ್ಕಿತರಾಗಿದ್ದಾರೆ.
ರೋಗಿ ಸಂಖ್ಯೆ 4094 ಪುರುಷ 37 ವರ್ಷ ಹಾಗೂ ರೋಗಿ ಸಂಖ್ಯೆ
4095 ಮಹಿಳೆ 35 ವರ್ಷ ಇವರು ನಗರದ ಪಿ.ಜೆ.ಬಡಾವಣೆಯ ಖಾಸಗಿ
ಕ್ಲಿನಿಕ್‍ನ ನೇತ್ರ ತಜ್ಞರಾಗಿದ್ದಾರೆ. ಇವರ ಪ್ರಾಥಮಿಕ ಮತ್ತು
ದ್ವಿತೀಯ ಸಂಪರ್ಕಿತರನ್ನು ಹಾಗೂ ಸೋಂಕಿನ ಪತ್ತೆ
ಹಚ್ಚಲಾಗುತ್ತಿದೆ. ಹೊಸದಾಗಿ ಸೇರ್ಪಡೆಯಾದ ಎಸ್‍ಸ್ಕ್ವೇರ್
ಅಪಾರ್ಟ್‍ಮೆಂಟ್ ಎಸ್‍ಎಸ್ ಬಡಾವಣೆ, ಕೆಟಿಜೆ ನಗರ ಪೊಲೀಸ್ ಕ್ವಾಟ್ರಸ್
ಮತ್ತು ದೇವರಾಜನಗರ ಬೇತೂರು ರಸ್ತೆ ಸೇರಿದಂತೆ ಇಂದಿನ
ಪ್ರಕರಣಗಳಿಗೆ ಸಂಬಂಧಿಸಿದ ಕಂಟೈನ್‍ಮೆಂಟ್ ಏರಿಯಾವನ್ನು
ಹೊಸ ಮಾರ್ಗಸೂಚಿಯಂತೆ ನಿರ್ವಹಿಸಲಾಗುವುದು.
ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಯಾವುದೇ ಐಎಲ್‍ಐ ಮತ್ತು
ತೀವ್ರ ಉಸಿರಾಟದ ತೊಂದರೆಗಳಿಂದ ಬಳಲುವ ಪ್ರಕರಣಗಳು
ಕಣ್ ತಪ್ಪಿ ಹೋಗದಂತೆ ಕಟ್ಟುನಿಟ್ಟಿನ ಸರ್ವೆಲೆನ್ಸ್
ಮಾಡಲಾಗುವುದು ಎಂದರು.
ಇದುವರೆಗೆ 141 ಜನರು ಗುಣಮುಖರಾಗಿದ್ದು, ಇಂದು 8
ತಿಂಗಳ ಮಗು ಕೂಡ ಗುಣಮುಖವಾಗಿ ಆಸ್ಪತೆಯಿಂದ ಬಿಡುಗಡೆ
ಹೊಂದಿದ್ದು ವೈದ್ಯರು/ಆರೋಗ್ಯ ಸಿಬ್ಬಂದಿಗಳ ಶುಶ್ರೂಷೆ, ಚಿಕಿತ್ಸೆ
ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಅಭಿನಂದಿಸಿದರು.
ಹಾಗೂ ಜಾಲಿನಗರ ಕಂಟೈನ್‍ಮೆಂಟ್ ಝೋನ್‍ನಲ್ಲೇ ಅತಿ
ಹೆಚ್ಚು ಪ್ರಕರಣಗಳಿದ್ದು, ರೋಗಿ ಸ್ಥಿತಿ ಉಲ್ಬಣವಾಗುವವರೆಗೆ
ರೋಗದ ಮಾಹಿತಿಯನ್ನು ನೀಡದೇ ಇರಬಾರದು. ಚಿಕ್ಕ
ಮಕ್ಕಳ ಮತ್ತು 60 ವರ್ಷ ಮೇಲ್ಪಟ್ಟವರ ರೋಗದ ಬಗ್ಗೆ
ಮಾಹಿತಿ ನೀಡಬೇಕು. ರೋಗ ಲಕ್ಷಣ ಕಂಡು ಬಂದ ತಕ್ಷಣ ಜಿಲ್ಲಾ

ಕೋವಿಡ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು. ಹಾಗೂ ಆಶಾ
ಕಾರ್ಯಕರ್ತೆಯರು ಸಕ್ರಿಯ ಸರ್ವೇಕ್ಷಣಾ ಕಾರ್ಯಕ್ಕೆ
ಬಂದಾಗ ಸರಿಯಾದ ಮಾಹಿತಿ ನೀಡಿ ಸಹಕರಿಸಿದಲ್ಲಿ ರೋಗ ನಿಯಂತ್ರಣ
ಸಾಧ್ಯವಾಗುತ್ತದೆ ಎಂದರು.
ಇಂದು ರೋಗಿ ಸಂಖ್ಯೆ 629, 2416, 2558, 2559 (8 ತಿಂಗಳ ಮಗು),
2557, 2560, 2416 ಈ ಏಳು ಜನರು ಗುಣಮುಖರಾಗಿ ಇಂದು ಜಿಲ್ಲಾ
ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಒಟ್ಟು 243 ಜನರು ಆಗಮಿಸಿದ್ದಾರೆ.
ಇವರಲ್ಲಿ 6 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಹಾಗೂ
68 ಜನರನ್ನು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಮಾಹಿತಿ
ಇಲ್ಲದೇ ಬಂದಿರುವ 147 ಜನರನ್ನು ಪತ್ತೆ ಹಚ್ಚಲಾಗಿದ್ದು
ನಿಯಮಾನುಸಾರ ಕ್ವಾರಂಟೈನ್ ಮಾಡಲಾಗಿದೆ.
ಮರಣ : ರೋಗಿ ಸಂಖ್ಯೆ 4093 83 ವರ್ಷದ ಮಹಿಳೆ ಇವರು ಮರಣ
ಹೊಂದಿದ್ದು, ಇವರಿಗೆ ಕೋವಿಡ್ ಇರುವುದು ಇಂದು ವರದಿಯಾಗಿದೆ.
ಈ ವೃದ್ದೆ ದೇವರಬೆಳೆಕೆರೆಯಲ್ಲಿ ಎರಡು ತಿಂಗಳು ತಮ್ಮ
ಮಗನ ಮನೆಯಲ್ಲಿದ್ದು ಈ ವೇಳೆ ಅನಾರೋಗ್ಯದ ಕಾರಣ
ದೇವರಬೆಳೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ
ಪಡೆದು, ಆಸ್ಪತ್ರೆಯವರು ಸಿ.ಜಿ ಆಸ್ಪತ್ರೆಗೆ ತೆರಳುವಂತೆ
ಸೂಚಿಸಿದ ಮೇಲೆ ತಮ್ಮ ಇನ್ನೊಬ್ಬ ಮಗನ ಮನೆ ದಾವಣಗೆರೆ
ನಗರದ ಬಸವರಾಜಪೇಟೆಯಯಲ್ಲಿ ಎರಡು ದಿನ ಇದ್ದು
ನಂತರ ಮೇ 31 ರ ಮಧ್ಯಾಹ್ನ 3 ಗಂಟೆಗೆ ಸಿ.ಜಿ ಆಸ್ಪತ್ರೆಗೆ
ದಾಖಲಾಗಿರುತ್ತಾರೆ. ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 11 ಕ್ಕೆ ಮರಣ
ಹೊಂದಿರುತ್ತಾರೆ. ಅವರಿಗೆ ಇಂದು ಕೊವಿಡ್ ಪಾಸಿಟಿವ್ ಇರುವುದು
ಪತ್ತೆಯಾಗಿದೆ.
ವೈದ್ಯರಿಗೆ ಕಾರಣ ಕೇಳಿ ನೋಟಿಸ್ ಜಾರಿ : ಜಾಲಿನಗರದ 80 ವರ್ಷದ
ವೃದ್ದೆ ಹಾಗೂ ದೇವರಬೆಳೆಕೆರೆಯ 83 ವರ್ಷದ ವೃದ್ದೆಯ
ಸಾವಿಗೆ ಸಂಬಂಧಿಸಿದಂತೆ ನಿಗದಿತ ಜಿಲ್ಲಾ ಕೋವಿಡ್ ಆಸ್ಪತ್ರೆಗೆ
ರೋಗಿಗಳು ತಲುಪುವವರೆಗೆ ಸಮರ್ಪಕವಾಗಿ ಕರ್ತವ್ಯ
ನಿರ್ವಹಿಸದೇ ಲೋಪವೆಸಗಿರುವ ವೈದ್ಯರಿಗೆ ಕಾರಣ ಕೇಳಿ ನೋಟಿಸ್
ನೀಡಲಾಗಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾಸ್ಕ್ ಧರಿಸುವ ಅಭಿಯಾನ : ಜನನಿಭಿಡ ಪ್ರದೇಶದಲ್ಲಿ ಮಾಸ್ಕ್
ಧರಿಸುವ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಉಗುಳಬಾರದೆಂಬ ಬಗ್ಗೆ
ಎಸ್‍ಪಿ ಯವರ ನೇತೃತ್ವದಲ್ಲಿ ವಿಶೇಷ ಅಭಿಯಾನವನ್ನು
ಏರ್ಪಡಿಸಲಾಗುವುದು. ನಗರ ಮತ್ತು ತಾಲ್ಲೂಕು
ಪ್ರದೇಶಗಳಲ್ಲಿ ಜನರು ಮಾಸ್ಕ್ ಧರಿಸಬೇಕು ಮತ್ತು
ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಈ
ನಿಯಮಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು
ಎಂದರು.
ಪತ್ರಿಕಾಗೋಷ್ಟಿಯಲ್ಲಿ ಎಸ್‍ಪಿ ಹನುಮಂತರಾಯ, ಎಡಿಸಿ ಪೂಜಾರ
ವೀರಮಲ್ಲಪ್ಪ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್
ನಾಯಕ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಿಎಸ್‍ಓ ಡಾ.ರಾಘವನ್
ಹಾಜರಿದ್ದರು.

Leave a Reply

Your email address will not be published. Required fields are marked *