ದಾವಣಗೆರೆ ಜೂ.05
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ
ಏರ್ಪಡಿಸಲಾಗಿದ್ದ ಜಿಲ್ಲಾ ಅಂಕಿ ಅಂಶಗಳ ನೋಟ 2018-19 ಪುಸ್ತಕ
ಬಿಡುಗಡೆ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಪುಸ್ತಕ ಬಿಡುಗಡೆ ಮಾಡಿ ಮಾತಾನಾಡಿದರು.
ಇಲಾಖಾವಾರು ಯೋಜನೆಗಳ ವಿವರ ಮತ್ತು ಸಾಮಾಜಿಕ ಹಾಗೂ
ಆರ್ಥಿಕ ಚಟುವಟಿಕೆಗಳ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿಯನ್ನು
ಒಳಗೊಂಡ ಜಿಲ್ಲಾ ಅಂಕಿ ಅಂಶಗಳ ನೋಟ ಸಂಚಿಕೆಯನ್ನು
ಬಿಡುಗಡೆ ಮಾಡಲಾಗಿದ್ದು, ಇದು ಸಾರ್ವಜನಿಕರಿಗೆ, ವಿವಿಧ
ಇಲಾಖೆಗಳಿಗೆ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ
ಉಪಯೋಗವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್À ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಪದ್ಮಬಸವಂತಪ್ಪ ಮಾತನಾಡಿ, ಜಿಲ್ಲೆಯ ಅಂಕಿ ಅಂಶಗಳ ನೋಟ
2018-19ನೇ ಸಾಲಿನ ಹೊತ್ತಿಗೆಯು ಜಿಲ್ಲೆಯ ಆರ್ಥಿಕ ಅಭಿವೃದ್ದಿ
ಮತ್ತು ಸಾಮಾಜಿಕ ಚಟುವಟಿಕೆ, ವಿವಿಧ ಇಲಾಖೆಗಳ ಯೋಜನೆಗಳ
ಮಾಹಿತಿ ಒಳಗೊಂಡಿರುವ ಪುಸ್ತಕವಾಗಿದೆ. ಇದನ್ನು ಹೊರ
ತರಲು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಮತ್ತು ಸಿಬ್ಬಂದಿ
ವರ್ಗ ಹೆಚ್ಚು ಶ್ರಮಿಸಿದ್ದಾರೆ ಎಂದರು.
ಮಹಾನಗರ ಪಾಲಿಕೆ ಆಯುಕ್ತರು ವಿಶ್ವನಾಥ ಪಿ ಮುದ್ದಜ್ಜಿ,
ದೂಡಾ ಆಯುಕ್ತರು ಬಿ. ಟಿ ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರಸ್ವಾಮಿ,
ಪ್ರಮೋದ ನಾಯ್ಕ ಐ.ಆರ್.ಸಿ, ಜಿಲ್ಲಾ ಸಾಂಖ್ಯಿಕ ಅಧಿಕಾರಿ(ಪ್ರ) ನೀಲಾ ಎಸ್.
ಸಹಾಯಕ ಸಾಂಖ್ಯಿಕ ಅಧಿಕಾರಿ ವಿಜಯ ಬಡಿಗೇರ ಹಾಗೂ ಸಾಂಖ್ಯಿಕ
ಇಲಾಖೆಯ ಇತರೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.