ದಾವಣಗೆರೆ ಜೂ 5
ಇಂದು ಜಿಲ್ಲೆಯಲ್ಲಿ ಒಂದು ಕೊರೊನಾ ಪಾಸಿಟಿವ್ ಪ್ರಕರಣ
ವರದಿಯಾಗಿದ್ದು, ಗುಣಮುಖರಾದ ಆರು ಜನರನ್ನು ಜಿಲ್ಲಾ ನಿಗದಿತ
ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ರೋಗಿ ಸಂಖ್ಯೆ 4339 27 ವರ್ಷದ ಪುರುಷ ಇವರು ರೋಗಿ
ಸಂಖ್ಯೆ 3862 ರ ಸಂಪರ್ಕಿತರಾಗಿದ್ದಾರೆ. ಇಂದು ದಾವಣಗೆರೆ ಜಿಲ್ಲಾ
ಕೋವಿಡ್ ಆಸ್ಪತ್ರೆಯಿಂದ ರೋಗಿ ಸಂಖ್ಯೆಗಳಾದ 3217, 3216, 3073,
3071, 3070, 3072 ಇವರು ಬಿಡುಗಡೆ ಹೊಂದಿದರು. ಒಟ್ಟು 180
ಸೋಂಕಿತರ ಪೈಕಿ ಇದುವರೆಗೆ 147 ಜನರು ಬಿಡುಗಡೆ
ಹೊಂದಿದ್ದಾರೆ. ಸಕ್ರಿಯ 27 ಪ್ರಕರಣಗಳಿದ್ದು, ಈವರೆಗೆ 06
ಮರಣ ಸಂಭವಿಸಿದೆ.