Aravind S Aravind S, [07.06.20 20:34]
[Forwarded from Ravi Miraskar DIPR-Kalaburagi]
ಜೂನ್ 25 ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ:
ಮಕ್ಕಳ ಸುರಕ್ಷತೆ ನಮ್ಮ ಮೊದಲ ಆಧ್ಯತೆ
-ಎಸ್.ಸುರೇಶ ಕುಮಾರ
ಕಲಬುರಗಿ.ಜೂನ್.07.(ಕ.ವಾ)-ಶಿಕ್ಷಣ ತಜ್ಞರ ಮತ್ತು ರಾಜಕೀಯ ನಾಯಕರ ಸಲಹೆ ಮತ್ತು ಕೇಂದ್ರ ಗೃಹ ಸಚಿವಾಲಯದ ಎಸ್.ಓ.ಪಿ. ಮಾರ್ಗಸೂಚಿಯಂತೆ ಜೂನ್ 25 ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯಲಿದ್ದು, ರಾಜ್ಯದಾದ್ಯಂತ 848203 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೊರೋನಾ ಸಂಕಷ್ಠದ ಈ ಕಾಲದಲ್ಲಿ ಮಕ್ಕಳ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶ ಕುಮಾರ ಹೇಳಿದರು.
ರವಿವಾರ ಎಸ್.ಎಸ್.ಎಲ್.ಸಿ. ಪರೀಕ್ಷೆ ಕುರಿತಂತೆ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಲಬುರಗಿ, ಬೀದರ ಮತ್ತು ಯಾದಗಿರಿ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಸಿ.ಇ.ಓ. ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಪರೀಕ್ಷೆಯ ಮುಖ್ಯ ಭಾಗವಾಗಿದೆ. ಕೆಲವು ಶಾಲೆಗಳನ್ನು ಕೋವಿಡ್-19 ಸರ್ಕಾರಿ ಕ್ವಾರಂಟೈನ್ ಕೇಂದ್ರಗಳನ್ನಾಗಿ ಪರಿವರ್ತಿಸಿದ್ದರಿಂದ ಆ ಎಲ್ಲಾ ಶಾಲೆಗಳನ್ನು ಸ್ಯಾನಿಟೈಸ್ ಮಾಡಿ ಪರೀಕ್ಷೆಗೆ ಸಿದ್ಧವಾಗಿಟ್ಟುಕೊಳ್ಳಬೇಕು ಎಂದ ಸಚಿವ ಎಸ್.ಸುರೇಶ ಕುಮಾರ ಕೋವಿಡ್-19 ಸೋಂಕು ಹರಡದಂತೆ ತೆಗೆದುಕೊಂಡ ಸುರಕ್ಷಾ ಕ್ರಮದೊಂದಿಗೆ ಮಾದರಿ ಪರೀಕ್ಷಾ ಕೇಂದ್ರಗಳ ವಿಡಿಯೋ ಕ್ಲಿಪ್ ಮಾಡಿ ಕಳುಹಿಸುವಂತೆ ಡಿ.ಡಿ.ಪಿ.ಐ.ಗಳಿಗೆ ಸೂಚನೆ ನೀಡಿದರು.
ಮಾಸ್ಕ್ ಧರಿಸಿಕೊಂಡು ಪರೀಕ್ಷೆ ಬರೆಯಲು ಮಕ್ಕಳು ರೂಢಿ ಮಾಡಿಕೊಳ್ಳಲು ಎಲ್ಲಾ ಮಕ್ಕಳಿಗೆ ಪರೀಕ್ಷೆಯ ಎರಡು ದಿನಗಳ ಮುಂಚೆಯ ಮಾಸ್ಕ್ ವಿತರಿಸಿಬೇಕು ಹಾಗೂ ಮಕ್ಕಳು ಮನೆಯಲ್ಲಿ ಇಂದಿನಿಂದಲೆ ಮಾಸ್ಕ್ ಧರಿಸುವ ಅಭ್ಯಾಸ ಮಾಡಿಕೊಳ್ಳುವಂತೆ ತಿಳಿಸಬೇಕು. ಮಕ್ಕಳನ್ನು ಥರ್ಮಲ್ ಸ್ಕ್ಯಾನ್ ಮಾಡಿಯೆ ಪರೀಕ್ಷಾ ಕೊಠಡಿಗೆ ಕಳುಹಿಸಬೇಕು ಮತ್ತು ಕೊಠಡಿಯಲ್ಲಿ ಕನಿಷ್ಠ ಮೂರುವರೆ ಅಡಿ ಅಂತರದಲ್ಲಿ ಮೇಜು ಹಾಕುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನಿಡಿದರು.
ಮಕ್ಕಳ ಆರೋಗ್ಯದ ದೃಷ್ಠಿಯಿಂದ ಮಕ್ಕಳೆ ಮನೆಯಿಂದ ಕುಡಿಯುವ ನೀರು ತರುವುದು ಆರೋಗ್ಯ ದೃಷ್ಠಿಯಿಂದ ಒಳ್ಳೆಯದು ಎಂದು ಸಲಹೆ ನೀಡಿದ ಸಚಿವ ಎಸ್.ಸುರೇಶ ಕುಮಾರ ಅವರು ಪರೀಕ್ಷಾ ಕೇಂದ್ರದಲ್ಲಿನ ಶೌಚಾಲಯ ಪ್ರತಿ ದಿನ ಎರಡು ಬಾರಿ ಸ್ವಚ್ಛಗೊಳಿಸಬೇಕು ಎಂದರು.
ಕೊರೋನಾ ನಡುವೆ ಪರೀಕ್ಷೆ, ಅವಕಾಶ ಎಂದು ಭಾವಿಸಿ: ಮಹಾಮಾರಿ ಕೊರೋನಾ ಸೋಂಕು ನಡುವೆ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಬರೀ ಸವಾಲಾಗಿ ಸ್ವೀಕರಿಸುವುದಲ್ಲ ಇಂತಹ ಕ್ಲಿಷ್ಟಕರ ಸಮಯದಲ್ಲಿಯೂ ಸೇವೆಗೆ ಸಿಕ್ಕ ಅವಕಾಶ ಎಂದು ಅಧಿಕಾರಿಗಳು ಭಾವಿಸಬೇಕು ಎಂದು ಗುಜರಾತಿನ ಅಧಿಕಾರಿಯೊಬ್ಬರು 1994ರಲ್ಲಿ ಮಹಾಮಾರಿ ಪ್ಲೇಗ್ ಸೊಂಕಿನ ಸಂದರ್ಭದಲ್ಲಿನ ಆ ಅಧಿಕಾರಿಯ ಸೇವೆಯನ್ನು ಉದಾಹರಣೆಯಾಗಿ ತೆಗೆದುಕೊಂಡರು. ಕೊರೋನಾ ಹೊಸ ರೀತಿಯ ಅಸ್ಪøಶ್ಯತೆಂiÀನ್ನು ಸೃಷ್ಠಿಸಿದೆ. ಕೊರೋನಾಗೆ ಭಯ ಪಡಬೇಕಿಲ್ಲ, ಮುನ್ನೆಚ್ಚರಿಕೆ ವಹಿಸಿದರೆ ಸಾಕು ಎಂದು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ ಅವರು ನಿಸ್ಸಂದೇಹವಾಗಿ ಪರೀಕ್ಷೆ ಬರೆಯಲು ಪೂರಕ ವಾತಾವರಣ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸಚಿವ ಎಸ್.ಸುರೇಶ ಕುಮಾರ ಕರೆ ನೀಡಿದರು.
ಪರೀಕ್ಷೆಯ ಗಾಂಭೀರ್ಯತೆ ಕಾಪಾಡಿಕೊಳ್ಳಿ: ಕೊರೋನಾ ಸಂಕಷ್ಠದ ಸಮಯದಲ್ಲಿಯೂ ಪರೀಕ್ಷೆ ಗಾಂಭೀರ್ಯಕ್ಕೆ ಧಕ್ಕೆಯಾಗದಂತೆ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪರೀಕ್ಷೆ ಸಮಯದಲ್ಲಿ ಹಾಲ್ ಟಿಕೆಟ್ ಸಮಸ್ಯೆಯಿಂದ ಯಾವುದೇ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತರಾಗದಂತೆ ಹಾಗೂ ಯಾವುದೇ ಅವಘಡಕ್ಕೆ ಅಸ್ಪದ ನೀಡದೆ ಪರೀಕ್ಷಾ ಸುಲಲಿತವಾಗಿ ಜರುಗುವಂತೆ ಎಲ್ಲಾ ಡಿ.ಡಿ.ಪಿ.ಐ ಮತ್ತು ಬಿ.ಇ.ಓಗಳು ಈ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ವಹಿಸಬೇಕು ಎಂದರು.
ಜೂನ್ 10 ರಿಂದ ಪುನರ್‍ಮನನ ಪಾಠ: ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಿಡಿಸುವ ಸೇರಿದಂತೆ ಪರೀಕ್ಷಾ ವಿಷಯಕ್ಕೆ ಸಂಬಂಧಿಸಿದಂತೆ ಜೂನ್ 10 ರಿಂದ 20ರ ವರೆಗೆ ಚಂದನ ವಾಹಿನಿ ಮುಖಾಂತರ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪುನರ್ ಮನನ ಪಾಠ ನಡೆಯಲಿದೆ ಎಂದರು.
ಸಭೆಯಲ್ಲಿ ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ಎಂ.ಎಲ್.ಸಿ. ಬಿ.ಜಿ.ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಳೀನ್ ಅತುಲ್, ಕಲಬುರಗಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ, ಯಾದಗಿರಿ ಜಿಲ್ಲಾ ಪಂಚಯತ್ ಸಿ.ಇ.ಓ. ಶಿಲ್ಪಾ ಶರ್ಮಾ ಸೇರಿದಂತೆ ಯಾದಗಿರಿ, ಕಲಬುರಗಿ ಮತ್ತು ಬೀದರ ಜಿಲ್ಲೆಗಳ ಶಿಕ್ಷಣಾಧಿಕಾರಿಗಳು ಭಾಗವಹಿಸಿದರು. ಕಲಬುರಗಿ ಡಿಡಿಪಿಐ ಶಾಂತಗೌಡ ಪಾಟೀಲ, ಯಾದಗಿರಿ ಡಿಡಿಪಿಐ ಶ್ರೀನಿವಾಸರೆಡ್ಡಿ ಹಾಗೂ ಬೀದರ ಡಿಡಿಪಿಯ ಚಂದ್ರಶೇಖರ್ ಅವರು ಜಿಲ್ಲೆಯಲ್ಲಿ ಪರೀಕ್ಷಾ ಪೂರ್ವ ಕೈಗೊಂಡ ಸಿದ್ಧತೆಗಳನ್ನು ಸಭೆಗೆ ವಿವರಿಸಿದರು.