ಟೋಕಿಯೊ ಮಹಾನಗರ ಸೇರಿದಂತೆ ನಾಲ್ಕು ನಗರಗಳ ತುರ್ತು ಪರಿಸ್ಥಿತಿಯನ್ನು ಹಿಂಪಡೆದಿರುವುದಾಗಿ ಪ್ರಧಾನಿ ಶಿಂಜೋ ಅಬೆ ಘೋಷಿಸುತ್ತಿದ್ದಂತೆ ಇಡೀ ಜಗತ್ತೇ ಒಮ್ಮೆ ಜಪಾನ್ ಕಡೆಗೆ ಹಿಂತಿರುಗಿ ನೋಡುವಂತಾಗಿದೆ. ಲಾಕ್ಡೌನ್, ಸಾಮೂಹಿಕ ಸೋಂಕು ಪರೀಕ್ಷೆ ವಿಧಾನ ಅನುಸರಿಸದೇ ತನ್ನದೇ ಹಾದಿಯಲ್ಲಿ ಕೊವಿಡ್ 19 ವಿರುದ್ಧ ಜಯ ಸಾಧಿಸಿದೆ.
?ಸರಳ ಸೂತ್ರವನ್ನು ಜನರು ತಮ್ಮದಾಗಿಸಿಕೊಂಡರು
3C ಎಂದರೆ closed spaces, crowded places and close contact ಪಾಲಿಸದಿರುವುದು. ಇಕ್ಕಟ್ಟಾದ ಜಾಗದಲ್ಲಿ ಇರದಿರುವುದು, ಜನನಿಬಿಡ ಪ್ರದೇಶದಲ್ಲಿರದಿರುವುದು, ಪರಸ್ಪರ ಸಂಪರ್ಕ ಹೊಂದದೆ ಇರುವುದು ಇವೇ ಸರಳ ಸೂತ್ರವನ್ನು ಜಪಾನ್ ದೇಶದ ಜನತೆ ಪಾಲಿಸಿ, ಯಶ ಕಂಡಿದ್ದಾರೆ.