ದಾವಣಗೆರೆ ಜೂ.08
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ದಿ ಸಚಿವರಾದ
ಬಿ.ಎ ಬಸವರಾಜ ಇವರು ಜೂ.9 ರಂದು ಕೈಗೊಳ್ಳಲಾಗಿರುವ ಜಿಲ್ಲಾ
ಪ್ರವಾಸ ರದ್ದುಗೊಂಡಿದೆ. ಬದಲಾಗಿ ಜೂ. 12 ರಂದು ಜಿಲ್ಲಾ ಪ್ರವಾಸ
ಕೈಗೊಳ್ಳಲಿದ್ದಾರೆ.
ಅಂದು ಬೆಳಿಗ್ಗೆ 8 ಗಂಟೆಗೆ ಹಿರಿಯೂರು ನಿಂದ ರಸ್ತೆ ಮೂಲಕ
ಹೊರಟು ಬೆಳಿಗ್ಗೆ 9.30 ಕ್ಕೆ ದಾವಣಗೆರೆಗೆ ಆಗಮಿಸಿ ಸಹಕಾರ
ಸಚಿವರೊಂದಿಗೆ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ
ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆಳಿಗ್ಗೆ 10
ಗಂಟೆಗೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್-19
ಪ್ರಯೋಗಾಲಯದ ಉದ್ಘಾಟನೆ ಕಾರ್ಯಕ್ರಮ ಹಾಗೂ ಹಿರಿಯ
ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ಬೆಳಿಗ್ಗೆ 11 ಗಂಟೆಗೆ
ದಾವಣಗೆರೆಯಿಂದ ರಸ್ತೆ ಮೂಲಕ ಹೊರಟು 12 ಗಂಟೆಗೆ
ಚಿತ್ರದುರ್ಗ ತಲುಪುವರು ಎಂದು ಪ್ರಕಟಣೆ ತಿಳಿಸಿದೆ.