ದಾವಣಗೆರೆ ಜೂ. 09
ದಾವಣಗೆರೆ ಜಿಲ್ಲೆಯಲ್ಲಿ ಇಂದು 8 ಕೊರೊನಾ ಪಾಸಿಟಿವ್ ಪ್ರಕರಣ
ದಾಖಲಾಗಿದ್ದು, 07 ಜನ ಸೋಂಕಿತರು ಗುಣಮುಖರಾಗಿ ಜಿಲ್ಲಾ ನಿಗದಿತ
ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ರೋಗಿ ಸಂಖ್ಯೆ 5816 34 ವರ್ಷದ ಮಹಿಳೆ ಇವರು
ಕಂಟೈನ್‍ಮೆಂಟ್ ಝೋನ್‍ನ ಸಂಪರ್ಕಿತರಾಗಿದ್ದಾರೆ. ರೋಗಿ
ಸಂಖ್ಯೆ 5817 40 ವರ್ಷದ ಪುರುಷ ಹಾಗೂ ರೋಗಿ ಸಂಖ್ಯೆ 5818 62
ವರ್ಷದ ಪುರುಷ ಇವರ ಸಂಪರ್ಕಿತರಾಗಿದ್ದಾರೆ. ರೋಗಿ ಸಂಖ್ಯೆ
5819 58 ವರ್ಷದ ಪುರುಷ ಮತ್ತು ರೋಗಿ ಸಂಖ್ಯೆ 5820 48
ವರ್ಷದ ಮಹಿಳೆ ಇವರು ರೋಗಿ ಸಂಖ್ಯೆ 3857 ರ ಸಂಪರ್ಕಿತರು.
ರೋಗಿ ಸಂಖ್ಯೆ 5821 66 ವರ್ಷದ ಮಹಿಳೆ ಹಾಗೂ ರೋಗಿ 5822 36
ವರ್ಷದ ಮಹಿಳೆ ಇವರು ರೋಗಿ ಸಂಖ್ಯೆ 3635 ರ
ಸಂಪರ್ಕಿತರಾಗಿದ್ದಾರೆ.
07 ಜನರ ಬಿಡುಗಡೆ : ರೋಗಿ ಸಂಖ್ಯೆ 3635, 3636, 3637, 3639, 3657,
3862 ಮತ್ತು 1485 ಇವರು ಸಂಪೂರ್ಣರಾಗಿ ಗುಣಮುಖರಾಗಿ ಇಂದು
ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇದುವರೆಗೆ ಒಟ್ಟು 211 ಕೊರೊನಾ ಪಾಸಿಟಿವ್ ಪ್ರಕರಣ
ದಾಖಲಾಗಿದ್ದು, ಈ ಪೈಕಿ 157 ಜನರು ಗುಣಮುಖರಾಗಿ ಆಸ್ಪತ್ರೆಯಿಂದ
ಬಿಡುಗಡೆ ಹೊಂದಿದ್ದಾರೆ. ಒಟ್ಟು 06 ಸಾವು ಸಂಭವಿಸಿದ್ದು, ಪ್ರಸ್ತುತ
48 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.