ದಾವಣಗೆರೆ ಜೂ 10
ಜಿಲ್ಲಾ ಮಹಿಳಾ ಅಭಿವೃದ್ಧಿ ನಿಗಮದ 2019-20ನೇ ಸಾಲಿನ ಉದ್ಯೋಗಿನಿ
ಯೋಜನೆಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ
ಉಪಯೋಜನೆಯಡಿ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ
ಪಂಗಡದ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿಯ 17 ಹಾಗೂ ಪರಿಶಿಷ್ಟ ಪಂಗಡದ 12
ಮಹಿಳೆಯರಿಗೆ ಸೌಲಭ್ಯದ ಅವಕಾಶವಿದ್ದು, ಜಿಲ್ಲೆಗೆ ಒಟ್ಟು 29
ಗುರಿಯನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯಡಿ
ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು
ಬ್ಯಾಂಕುಗಳ ಸಹಯೋಗದೊಂದಿಗೆ ಸಾಲದ ವ್ಯವಸ್ಥೆ ಹಾಗೂ
ನಿಗಮದಿಂದ ಸಹಾಯಧನ ನೀಡಲಾಗುವುದು.
ಫಲಾನುಭವಿಗಳಿಗೆ ಇರಬೇಕಾದ ಅರ್ಹತೆಗಳು: 18 ರಿಂದ 55
ವರ್ಷ ವಯೋಮಿತಿ ಹೊಂದಿರಬೇಕು. ಅರ್ಜಿದಾರರು ರಾಜ್ಯದ
ಖಾಯಂ ನಿವಾಸಿಯಾಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ
ಪಂಗಡದ ಮಹಿಳೆಯರಾಗಿದ್ದು, ಕುಟುಂಬದ ವಾರ್ಷಿಕ ಆದಾಯ
ರೂ.2 ಲಕ್ಷ ಮೀರಿರಬಾರದು. ಈ ಯೋಜನೆಯಡಿಯಲ್ಲಿ ಸೌಲಭ್ಯ
ಪಡೆಯಲು ಇಚ್ಛಿಸುವವರು ಈ ಹಿಂದೆ ಬೇರೆ ಇಲಾಖೆಗಳಲ್ಲಿ
ಯಾವುದೇ ಯೋಜನೆಗಳಡಿಯಲ್ಲೂ ಸಾಲ ಸೌಲಭ್ಯ
ಪಡೆದಿರಬಾರದು. ಇಡಿಪಿ ತರಬೇತಿಯು ಕಡ್ಡಾಯವಾಗಿದ್ದು, ಸಾಲ
ಮಂಜೂರಾದ ಫಲಾನುಭವಿಗಳಿಗೆ ಇಡಿಪಿ ತರಬೇತಿ ಪಡೆದ
ನಂತರವೇ ಸಹಾಯಧನ ಬಿಡುಗಡೆ ಮಾಡಲಾಗುವುದು.
ಸಾಲದ ಮೊತ್ತ, ಯೋಜನಾ ಘಟಕ ವೆಚ್ಚ ಕನಿಷ್ಠ ರೂ. 1 ಲಕ್ಷದಿಂದ
ಗರಿಷ್ಠ ರೂ. 5 ಲಕ್ಷಗಳಾಗಿರಬೇಕು. ಘಟಕ ವೆಚ್ಚದ ಕನಿಷ್ಠ
ಶೇ. 70 ಅಥವಾ ಗರಿಷ್ಠ ರೂ. 3.50 ಲಕ್ಷಗಳ ಸಹಾಯಧನ
ನೀಡಲಾಗುವುದು.
ಅರ್ಜಿ ಸಲ್ಲಿಸುವ ಆಸಕ್ತ ಮಹಿಳೆಯರು ಆಯಾ ತಾಲ್ಲೂಕಿನ ಶಿಶು
ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ
ಮಾಡಿದ ಅರ್ಜಿಗಳನ್ನು ಎಲ್ಲಾ ದಾಖಲಾತಿಗಳೊಂದಿಗೆ ಜೂ.25ರ ಸಂಜೆ
5.30 ರೊಳಗಾಗಿ ಸಂಬಂಧಪಟ್ಟ ಶಿಶು ಅಭಿವೃದ್ಧಿ
ಯೋಜನಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸತಕ್ಕದ್ದು.
ಕೊನೆಯ ದಿನಾಂಕದ ನಂತರ ಬಂದಂತಹ ಹಾಗೂ ಅಪೂರ್ಣ
ಮಾಹಿತಿ ಇರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ
ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08192-296268
ಸಂಪರ್ಕಿಸಬಹುದೆಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.