ದಾವಣಗೆರೆ ಜೂ. 10    
ದಾವಣಗೆರೆ ಜಿಲ್ಲೆಯಲ್ಲಿ ಇಂದು 3 ಕೊರೊನಾ ಪಾಸಿಟಿವ್ ಪ್ರಕರಣ
ದಾಖಲಾಗಿದ್ದು, 08 ಜನ ಸೋಂಕಿತರು ಗುಣಮುಖರಾಗಿ ಜಿಲ್ಲಾ ನಿಗದಿತ
ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ರೋಗಿ ಸಂಖ್ಯೆ 6039 25 ವರ್ಷದ ಮಹಿಳೆ ಇವರು ಮಹಾರಾಷ್ಟ್ರ
ರಾಜ್ಯದಿಂದ ಹಿಂದಿರುಗಿದವರು. ರೋಗಿ ಸಂಖ್ಯೆ 6040 39 ವರ್ಷದ
ಪುರುಷ ಇವರು ರೋಗಿ ಸಂಖ್ಯೆ-1485 ರ ಸಂಪರ್ಕಿತರಾಗಿದ್ದಾರೆ.
ಹಾಗೂ ರೋಗಿ ಸಂಖ್ಯೆ 6041 40 ವರ್ಷದ ಮಹಿಳೆ ಇವರ ಸಂಪರ್ಕ
ಪತ್ತೆ ಹಚ್ಚಲಾಗುತ್ತಿದೆ.
08 ಜನರ ಬಿಡುಗಡೆ : ರೋಗಿ ಸಂಖ್ಯೆ 4083, 4084, 4087, 4088, 4090,
4019, 4092 ಮತ್ತು 3977 ಇವರು ಸಂಪೂರ್ಣರಾಗಿ ಗುಣಮುಖರಾಗಿ
ಇಂದು ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ
ಹೊಂದಿದ್ದಾರೆ.
ಇದುವರೆಗೆ ಒಟ್ಟು 214 ಕೊರೊನಾ ಪಾಸಿಟಿವ್ ಪ್ರಕರಣ
ದಾಖಲಾಗಿದ್ದು, ಈ ಪೈಕಿ 165 ಜನರು ಗುಣಮುಖರಾಗಿ ಆಸ್ಪತ್ರೆಯಿಂದ
ಬಿಡುಗಡೆ ಹೊಂದಿದ್ದಾರೆ. ಒಟ್ಟು 06 ಸಾವು ಸಂಭವಿಸಿದ್ದು, ಪ್ರಸ್ತುತ
43 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *