ದಾವಣಗೆರೆ ಜೂ.11
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕರ್ನಾಟಕ
ಸರ್ಕಾರವು ಜಿಲ್ಲೆಗೆ ಕರ್ನಾಟಕ ಆಹಾರ ಮತ್ತು ನಾಗರಿಕ
ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಿ
ಆದೇಶಿಸಿದೆ. 2019-20ನೇ ಸಾಲಿನ ಮುಂಗಾರಿನಲ್ಲಿ ಹಾಗೂ 2020-21ನೇ ಸಾಲಿನ
ಹಿಂಗಾರಿನಲ್ಲಿ ಜಿಲ್ಲೆಯ ರೈತರು ಬೆಳೆದಂತಹ ಉತ್ತಮ
ಗುಣಮಟ್ಟದ (ಎಫ್.ಎ.ಕ್ಯೂ) ಭತ್ತವನ್ನು ರೈತರಿಂದ ನೇರವಾಗಿ
ನೊಂದಾಯಿತ ಅಕ್ಕಿ ಗಿರಣಿಗಳ ಮೂಲಕ ಖರೀದಿಸಲು ತಿರ್ಮಾನಿಸಿದೆ.
ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿಯ
ತಿರ್ಮಾನದಂತೆ ಉತ್ತಮ ಗುಣಮಟ್ಟದ ಭತ್ತವನ್ನು ರೈತರಿಂದ
ನೇರವಾಗಿ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ
ಆವರಣದಲ್ಲಿನ ಖರೀದಿ ಕೇಂದ್ರಗಳಲ್ಲಿ ಗುಣಮಟ್ಟ ಪರಿಶೀಲಿಸಿ ನಂತರ
ರೈತರಿಗೆ ಸಮೀಪವಿರುವ ಅಕ್ಕಿಗಿರಣಿಗಳಲ್ಲಿ ಖರೀದಿಸಲಾಗುವುದು.
ಖರೀದಿ ಪ್ರಕ್ರಿಯೆಯು ಮೇ 31 ರಂದು ಅಂತ್ಯಗೊಂಡಿದ್ದು,
ಆದರೆ ಸರ್ಕಾರದ ಆದೇಶದ ಅನ್ವಯ ಜೂನ್ 15 ರವರೆಗೆ ಅರ್ಹ
ರೈತರ ನೋಂದಣಿ ಕಾರ್ಯ ಹಾಗೂ ಜೂನ್ 30 ರವರೆಗೆ ಖರೀದಿ
ಪ್ರಕ್ರಿಯೆಯನ್ನು ಮುಂದುವರೆಸಲಾಗುವುದು ಹಾಗೂ
ಬಿಳಿಜೋಳ ಮತ್ತು ರಾಗಿ ಖರೀದಿ ಪ್ರಕ್ರಿಯೆಯನ್ನು ಸಹ ಜೂನ್ 30
ರವರೆಗೆ ಮುಂದುವರೆಸಲಾಗುವುದು.
ದಾವಣಗೆರೆ ತಾಲ್ಲೂಕಿನ ರೈತರು ದಾವಣಗೆರ ಕೃಷಿ ಉತ್ಪನ್ನ
ಮಾರುಕಟ್ಟೆ ಆವರಣದಲ್ಲಿ, ಹರಿಹರ ತಾಲ್ಲೂಕಿನ ರೈತರು ಹರಿಹರ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ, ಹೊನ್ನಾಳಿ
ತಾಲ್ಲೂಕಿನ ರೈತರು ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಖರಿದೀಸಬಹುದಾಗಿದ್ದು,
ಜಿಲ್ಲೆಯ ರೈತರು ಈ ಯೋಜನೆಯನ್ನು ಸದುಪಯೋಗ
ಪಡಿಸಿಕೊಳ್ಳಬೇಕೆಂದು ಆಹಾರ ನಾಗರಿಕ ಸರಬರಾಜು ಮತ್ತು
ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.