ದಾವಣಗೆರೆ ಜೂ.11
ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾಗಿ ಹೊನ್ನಾಳಿ ತಾಲ್ಲೂಕಿನ
ಕುಂದೂರು ಕ್ಷೇತ್ರದ ಸದಸ್ಯರಾದ ದೀಪಾ ಜಗದೀಶ
ಅವಿರೋಧವಾಗಿ ಆಯ್ಕೆಯಾದರು.
ಜಿಲ್ಲಾ ಪಂಚಾಯತ್‍ನ ಎಸ್.ಎಸ್.ಮಲ್ಲಿಕಾರ್ಜುನ್ ಸಭಾಂಗಣದಲ್ಲಿ
ಗುರುವಾರ ಜಿ.ಪಂ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಗೆ
ಬೆಳಿಗ್ಗೆ 9.30 ರಿಂದ 10.30 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ
ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ ದೀಪಾ ಜಗದೀಶ ಒಬ್ಬರೇ 2
ನಾಮಪತ್ರ ಸಲ್ಲಿಸಿದ್ದರು. ಸೂಚಕರಾಗಿ ಜಿ.ಪಂ ಸದಸ್ಯೆ
ಶಾಂತಕುಮಾರಿ ಸಹಿ ಹಾಕಿದ್ದರು.
ಪ್ರಾದೇಶಿಕ ಆಯುಕ್ತರಾದ ವಿ.ಪಿ.ಇಕ್ಕೇರಿ ಇವರ ಅಧ್ಯಕ್ಷತೆಯಲ್ಲಿ
ಚುನಾವಣೆ ಪ್ರಕ್ರಿಯೆ ನಡೆಯಿತು. ಒಟ್ಟು 29 ಸದಸ್ಯರಲ್ಲಿ 22
ಮಂದಿ ಭಾಗವಹಿಸಿದ್ದರು. ಚುನಾವಣಾ ಕಾರ್ಯಸೂಚಿಯಂತೆ
ಆಯುಕ್ತರು ನಾಮಪತ್ರ ಸಲ್ಲಿಸಲಾದ ಏಕೈಕ ಸದಸ್ಯ
ಸಾಮಾನ್ಯ ಮಹಿಳೆ ವರ್ಗದ ಮೀಸಲಾತಿ ಪ್ರಕಾರ ದೀಪಾ ಜಗದೀಶ
ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ
ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ
ಅಧ್ಯಕ್ಷೆ ದೀಪಾ ಜಗದೀಶ, ಗ್ರಾಮ ಪಂಚಾಯಿತಿ ಮಟ್ಟದಿಂದ
ಜಿಲ್ಲಾಮಟ್ಟದವರೆಗೆ ಎಲ್ಲಾ ಅಧಿಕಾರಿಗಳೊಂದಿಗೆ ಹಾಗೂ
ಜಿಲ್ಲಾಡಳಿತದೊಂದಿಗೆ ಸೇರಿಕೊಂಡು ಜನಪರ ಕೆಲಸ ಮಾಡುವೆ.
ಮುಂಗಾರು ಸಂದರ್ಭ ಇದಾಗಿದ್ದು, ರೈತರಿಗೆ ಬಿತ್ತನೆ ಬೀಜ ಹಾಗೂ
ರಸಗೊಬ್ಬರ ವಿತರಣೆಯಲ್ಲಿ ಲೋಪ ಆಗದಂತೆ
ನೋಡಿಕೊಳ್ಳುವ ಭರವಸೆ ನೀಡಿದರು.
ಉತ್ತಮ ಭವಿಷ್ಯಕ್ಕೆ ಶಿಕ್ಷಣ ಅತೀ ಮುಖ್ಯವಾಗಿದ್ದು, ನನ್ನ
ಅವಧಿಯಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟ ವಿಷಯಗಳಿಗೆ ಹೆಚ್ಚಿನ
ಆದ್ಯತೆ ನೀಡುತ್ತೇನೆ. ಕೊರೊನಾ ಸಂದರ್ಭ ಇದಾಗಿದ್ದು,
ಕೊರೊನಾ ಮಾಹಾಮಾರಿ ವಿರುದ್ಧ ಹೋರಾಡುತ್ತೇನೆ.
ಜಿಲ್ಲೆಯಲ್ಲಿರುವ 195 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ
ಗ್ರಾಮದ ಜನರಲ್ಲಿ ಕೋವಿಡ್-19 ನಿಯಂತ್ರಣದ ಕುರಿತು ಜಾಗೃತಿ
ಮೂಡಿಸುವ ಮೂಲಕ ಪುನಃ ಗ್ರೀನ್ ಜೋನ್ ಜಿಲ್ಲೆಯಾಗಿಸಲು
ಶ್ರಮಿಸುತ್ತೇನೆ ಎಂದರು.
ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸುವೆ.
ಶಾಸಕರೊಂದಿಗೆ ಸೇರಿಕೊಂಡು ಒಗ್ಗೂಡಿ ಕೆಲಸ ಮಾಡುವೆ ಎಂದ
ಅವರು, ಅಧ್ಯಕ್ಷೆಯಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲರಿಗೂ
ಅಭಿನಂದನೆ ಸಲ್ಲಿಸುತ್ತೇನೆ. ಜೊತೆಗೆ ಜಿಲ್ಲೆಯಲ್ಲಿ ಉತ್ತಮ
ಆಡಳಿತ ನೀಡಲು ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಈ ಸಂದÀರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷರಾದ ಲೋಕೇಶ್ವರ್,
ಯಶೋಧಮ್ಮ ಮರುಳಪ್ಪ, ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ, ಜಿಲ್ಲಾ ಪಂಚಾಯತ್ ಸಿಇಓ ಪದ್ಮಾ ಬಸವಂತಪ್ಪ, ಅಪರ
ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಇದ್ದರು.