ದಾವಣಗೆರೆ ಜೂ.12
   ಮಹಾಮಾರಿ ಕೊರೊನಾ ರೋಗದಿಂದ ದೇಶವೇ ಲಾಕ್‍ಡೌನ್ ಆದ
ಸಂದರ್ಭದಲ್ಲಿ ಆಶಾ ಕಾರ್ಯಕತೆಯರು ತಮ್ಮ ಜೀವ ಲೆಕ್ಕಿಸದೆ
ಪ್ರತಿ ಮನೆ ಮನೆಗಳಿಗೆ ತೆರಳಿ ಸಾಂಕ್ರ್ರಾಮಿಕ ರೋಗವಾದ
ಕೋವಿಡ್-19 ವಿರುದ್ಧ ಜಾಗೃತಿ ಮೂಡಿಸಿದ್ದಾರೆ. ಇದು ಶ್ಲಾಘನೀಯ
ಕಾರ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ ಬಸವರಾಜ
ಹೇಳಿದರು.
   ಶುಕ್ರವಾರ  ಜಿಲ್ಲಾಡಳಿತ ಭವನದ ತುಂಗಭದ್ರಾ
ಸಂಭಾಗಣದಲ್ಲಿ ಜಿಲ್ಲಾಡಳಿತ ಹಾಗೂ ಸಹಕಾರ ಇಲಾಖೆ ಮತ್ತು
ಜಿಲ್ಲೆಯ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ
ಆಯೋಜಿಸಲಾಗಿದ್ದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ
ಚೆಕ್ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು
ಮಾತನಾಡಿದರು.
   ಇದೊಂದು ಹೆಮ್ಮೆ ಪಡುವ ಕಾರ್ಯಕ್ರಮವಾಗಿದೆ. ರೂ.3000
ಪ್ರೋತ್ಸಾಹ ಧನ ನೀಡುವುದು ಮುಖ್ಯವಲ್ಲ. ಗೌರವ
ಸಲ್ಲಿಸುವುದು ಮುಖ್ಯವಾಗಿದೆ. ರಾಜ್ಯದಲ್ಲಿ 42,000
ಕಾರ್ಯಕರ್ತೆಯರು ಇದ್ದಾರೆ. ಮುಖ್ಯಮಂತ್ರಿಗಳ ಸೂಚನೆ
ಮೇರೆಗೆ ಜಿಲ್ಲಾಡಳಿತ ಮತ್ತು ಎಲ್ಲಾ ಸಹಕಾರ ಸಂಘಗಳ
ಸಹಯೋಗದೊಂದಿಗೆ ಪ್ರತಿಯೊಬ್ಬ್ಬ ಕಾರ್ಯಕರ್ತೆಗೆ
 ಪ್ರೋತ್ಸಾಹ ಧನ ನೀಡುತ್ತಿದ್ದೇವೆ ಎಂದರು.

   ಪ್ರೋತ್ಸಾಹಧನದ ಮೊತ್ತ ಕಡಿಮೆ ಇರಬಹುದು. ಆದರೆ
ಅವರಿಗೆÀ ಸಲ್ಲಿಸುತ್ತಿರುವ ಗೌರವ ದೊಡ್ಡದಾಗಿದೆ. ಮನೆ ಮನೆಗೆ
ತೆರೆಳಿ ಆಶಾ ಕಾರ್ಯಕರ್ತೆಯರು ತುಂಬಾ ಶ್ರಮ ವಹಿಸಿ ಕೆಲಸ
ನಿರ್ವಹಿಸಿದ್ದಾರೆ. ಅವರನ್ನು ಇಂದು ಗುರುತಿಸಿ
ಗೌರವಿಸಲಾಗುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು,
ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
    ಸಹಕಾರ ಸಚಿವರಾದ ಎಸ್.ಟಿ ಸೋಮಶೇಖರ ಮಾತನಾಡಿ, ಲಾಕ್‍ಡೌನ್
ಆದ ಸಮಯದಲ್ಲಿ ಸಹಕಾರ ಇಲಾಖೆ ವತಿಯಿಂದ ರೂ. 52 ಕೋಟಿ ಹಣ
ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದೇವೆ.
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ರಾಜ್ಯದ ಎಲ್ಲಾ ಆಶಾ
ಕಾರ್ಯಕರ್ತೆಯರ ಪ್ರಾಮಾಣಿಕ ಸೇವೆಗೆ ತಲಾ ರೂ. 3 ಸಾವಿರ
ಪ್ರೋತ್ಸಾಹ ಧನವನ್ನು ಸಹಕಾರ ಇಲಾಖೆಯಿಂದ ನೀಡುವ
ಮೂಲಕ ಗೌರವ ಸಲ್ಲಿಸಲಾಗುತ್ತಿದೆ ಎಂದರು.
   ಆಶಾ ಕಾರ್ಯಕರ್ತೆಯರಿಗೆ ಅವರಿರುವ ಜಿಲ್ಲೆಯಲ್ಲಿಯೇ ಡಿಸಿಸಿ
ಬ್ಯಾಂಕ್‍ನಿಂದ ಅತೀ ಕಡಿಮೆ ಬಡ್ಡಿಗೆ ಸಾಲ ನೀಡುವ ಬಗ್ಗೆ ಚಿಂತನೆ
ಮಾಡಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ರೂ.10 ಸಾವಿರ ಪ್ರೋತ್ಸಾಹ
ಧನ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ಸ್ತ್ರೀ ಶಕ್ತಿ
ಸಂಘ ಹಾಗೂ ಸ್ವಸಹಾಯ ಸಂಘಗಳಿಗೆ ಸಹಕಾರ ಇಲಾಖೆಯಿಂದ
ಹಲವು ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ
ವೈದ್ಯರು ಮತ್ತು ನರ್ಸ್‍ಗಳಿಗೆ ಮುಂದಿನ ದಿನಗಳಲ್ಲಿ
ಸರ್ಕಾರದಿಂದ ಉತ್ತಮ ಸೌಕರ್ಯ ಒದಗಿಸಲಾಗುವುದು
ಎಂದರು.
  ಜಿಲ್ಲೆಗೆ ಒಳ್ಳೆಯ ಉಸ್ತುವಾರಿ ಸಚಿವರು ಸಿಕ್ಕಿದ್ದಾರೆ.  ಅವರು
ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಪಕ್ಷಬೇಧ ಮರೆತು
ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರ
ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಉತ್ತಮ
ಕೆಲಸವಾಗಲಿದೆ ಎಂದು ಪ್ರಶಂಸಿಸಿದರು.
   ಸಂಸದರಾದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಆಶಾ
ಕಾರ್ಯಕರ್ತೆಯರು ತಮ್ಮ ಸಂಸಾರದ ಜಂಜಾಟ ತೊರೆದು
ಕೊರೊನಾ ಸಂದರ್ಭದಲ್ಲಿ ಪ್ರತಿ ಮನೆಗೆ ತೆರಳಿ ಜನರ
ಆರೋಗ್ಯ ವಿಚಾರಿಸುವ ಕೆಲಸ ಮಾಡಿದ್ದಾರೆ. ಇದು ಎಲ್ಲರೂ ಹೆಮ್ಮೆ
ಪಡುವ ವಿಷಯವಾಗಿದೆ. ಜಿಲ್ಲೆಯಲ್ಲಿ ಕೊರೊನಾ ನಿರ್ಮೂಲನೆ
ಮಾಡಲು ಜಿಲ್ಲಾಡಳಿತ, ಆರೋಗ್ಯ ಇಲಾಖೆಯೊಂದಿಗೆ ಆಶಾ
ಕಾರ್ಯಕರ್ತೆಯರು ಜೊತೆಗೂಡಿ ಇನ್ನೂ ಹೆಚ್ಚಿನ ಶ್ರಮ
ವಹಿಸಬೇಕು ಎಂದರು.
   ಜಿಲ್ಲೆಯಲ್ಲಿ 200 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳಿದ್ದು
ಅದರಲ್ಲಿ 165 ಮಂದಿ ಗುಣಮುಖರಾಗಿದ್ದಾರೆ. ಇನ್ನುಳಿದಂತೆ 49
ಕೇಸ್‍ಗಳು ಸಕ್ರಿಯವಾಗಿದೆ.  ಜಿಲ್ಲಾಡಳಿತದಿಂದ ಚಿಗಟೇರಿ
ಆಸ್ಪತ್ರೆಯಲ್ಲಿ ಕೋವಿಡ್-19 ಲ್ಯಾಬ್ ಉದ್ಘಾಟನೆಯಾಗಿದ್ದು, ಇದರಿಂದ
ಇನ್ನೂ ಹೆಚ್ಚಿನ ಅನುಕೂಲವಾಗಿದೆ ಎಂದ ಅವರು, ಮಹಾಮಾರಿ
ಕೊರೊನಾ ರೋಗದ ವಿರುದ್ದ ರಾಜ್ಯಾದ್ಯಂತ ಹೋರಾಡಿದ
ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ರೂ.12.7 ಕೋಟಿ

ಹಣವನ್ನು ಪ್ರೋತ್ಸಾಹಧನದ ರೂಪದಲ್ಲಿ
ಮುಖ್ಯಮಂತ್ರಿಗಳು ನೀಡುತ್ತಿರುವುದು ಅಭಿನಂದನಾರ್ಹ
ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಷಣ್ಮುಖಪ್ಪ ಮಾತನಾಡಿ, ಕೊರೊನಾ ಒಂದು
ಹೆಮ್ಮಾರಿ ರೋಗ. ಈ ರೋಗಕ್ಕೆ ಇನ್ನೂ ಔಷಧಿ ಕಂಡು ಹಿಡಿದಿಲ್ಲ.
ಇಂತಹ ಸಂದರ್ಭದಲ್ಲಿ ತಮ್ಮ ಜೀವನ ಮುಡುಪಾಗಿಟ್ಟು ಸೇವೆ
ಸಲ್ಲಿಸಿರುವ ಆಶಾ ಕಾರ್ಯಕರ್ತೆಯರ ಕಾರ್ಯ ಮೆಚ್ಚುಗೆ
ಪಡುವಂತಹದ್ದು. ಜಿಲ್ಲೆಯ 1224 ಆಶಾ ಕಾರ್ಯಕರ್ತೆಯರಿಗೆ
ತಲಾ ರೂ. 3 ಸಾವಿರ ನೀಡಲಾಗುತ್ತಿದ್ದು, ರಾಜ್ಯದ ಎಲ್ಲೆಡೆ ಈ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮ
ಹಮ್ಮಿಕೊಂಡ ಸಹಕಾರ ಸಚಿವರಿಗೆ ಅಭಿನಂದನೆ ಸಲ್ಲಿಸಲು
ಇಷ್ಟಪಡುತ್ತೇನೆ ಎಂದರು.
   ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಪಿ.ರೇಣುಕಾಚಾರ್ಯ,
ಮಾಡಾಳ್ ವಿರೂಪಾಕ್ಷಪ್ಪ, ಪ್ರೊ.ಲಿಂಗಣ್ಣ, ಎಸ್.ರಾಮಪ್ಪ,
ಮಹಾಪೌರರಾದ ಬಿ.ಜೆ.ಅಜಯ್ ಕುಮಾರ್, ಜಿಲ್ಲಾ ಪಂಚಾಯತ್
ಅಧ್ಯಕ್ಷೆ ದೀಪಾ ಜಗದೀಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ
ಪೊಲೀಸ್ ವರಿಷ್ಟಾಧಿಕಾರಿಗಳಾದ ಹನುಮಂತರಾಯ, ದೂಡಾ
ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ ಮತ್ತಿತರರು
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *