ದಾವಣಗೆರೆ ಜೂ.12
ಎರಡೂವರೆ ತಿಂಗಳ ಮಗು ರೋಗಿ ಸಂಖ್ಯೆ 3638 ಸಂಪೂರ್ಣ
ಗುಣಮುಖ ಹೊಂದಿ ಇಂದು ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ
ಬಿಡುಗಡೆ ಹೊಂದಿದ್ದು ಒಟ್ಟು ಇಂದು ಮೂವರು ಗುಣಮುಖರಾಗಿ
ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ರೋಗಿ ಸಂಖ್ಯೆಗಳಾದ ಎರಡೂವರೆ ತಿಂಗಳಿನ ಮಗು 3638,
3640 ಹಾಗೂ 4339 ಇವರು ಗುಣಮುಖರಾಗಿ ಆಸ್ಪತ್ರೆಯಿಂದ
ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 223
ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 171
ರೋಗಿಗಳು ಸಂಪೂರ್ಣರಾಗಿ ಗುಣಮುಖರಾಗಿ ಬಿಡುಗಡೆ
ಹೊಂದಿದ್ದಾರೆ. 6 ಸಾವು ಸಂಭವಿಸಿದ್ದು, ಒಟ್ಟು 46 ಸಕ್ರಿಯ
ಪ್ರಕರಣಗಳು ಇವೆ.