ದಾವಣಗೆರೆ ಜೂ.12
ವಸತಿ ಸಚಿವರಾದ ವಿ ಸೋಮಣ್ಣ ಇವರು ಜೂನ್ 15 ರಂದು ಜಿಲ್ಲಾ
ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 8.30 ಕ್ಕೆ
ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 11.30ಕ್ಕೆ ದಾವಣಗೆÉರೆಗೆ ಆಗಮಿಸಿ
ಇಲಾಖಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು ಹಾಗೂ
ಸಾರ್ವಜನಿಕರನ್ನು ಭೇಟಿ ಮಾಡುವರು.
ಮಧ್ಯಾಹ್ನ 12 ಗಂಟೆಗೆ ದಾವಣಗೆರೆಯಿಂದ ರಸ್ತೆ ಮೂಲಕ
ಹೊರಟು 12.15 ಗಂಟೆಗೆ ಖಾಸಗಿ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ಮಧ್ಯಾಹ್ನ 1 ಗಂಟೆಗೆ ಹರಿಹರದಲ್ಲಿ ಇಲಾಖಾ
ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಾರ್ವಜನಿಕರನ್ನು ಭೇಟಿ ಮಾಡಿ
ನಂತರ ವಸತಿ ಇಲಾಖೆಯ ವ್ಯಾಪ್ತಿಯ ಕರ್ನಾಟಕ ಗೃಹ
ಮಂಡಳಿಯ ವಶದಲ್ಲಿರುವ ಶೋರಾಪುರ ಗ್ರಾಮದ ಜಮೀನಿನ
ಸ್ಥಳ ಪರಿವೀಕ್ಷಣೆ ನಡೆಸುವರು. ಹಾಗೂ ಹರಿಹರದಲ್ಲಿ ಕರ್ನಾಟಕ
ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ
ನಿರ್ಮಿಸಲಾಗುತ್ತಿರುವ ಮನೆಗಳ ಕಾಮಗಾರಿ ಸ್ಥಳ ಪರಿವೀಕ್ಷಣೆ
ನಡೆಸಿ ಇಲಾಖಾಧಿಕಾರಿಗಳೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳುವರು.
ಮಧ್ಯಾಹ್ನ 2 ಗಂಟೆಗೆ ಹರಿಹರದಿಂದ ಹೊರಟು 2.20 ಕ್ಕೆ
ದಾವಣಗೆರೆಗೆ ಆಗಮಿಸಿ. 3.30 ಕ್ಕೆ ದಾವಣಗೆರೆಯಿಂದ ರಸ್ತೆ ಮೂಲಕ
ಹೊರಟು ಸಂಜೆ 6.30 ಕ್ಕೆ ಬೆಂಗಳೂರು ತಲುಪುವರು ಎಂದು
ಪ್ರಕಟಣೆ ತಿಳಿಸಿದೆ.