ಕೋರೋನಾ ಕೋವಿಡ್ 19 ಇರುವ ಕಾರಣ ಶಾಲೆಯನ್ನು ತೆರೆಯುವ ಬಗ್ಗೆ ಹಿಂದಿನ ವಿದ್ಯಾರ್ಥಿಗಳ ಪೋಷಕರನ್ನು ಕರೆದು ಅಭಿಪ್ರಾಯವನ್ನು ಸಂಗ್ರಹಿಸಿದರು, ಈ ಎಲ್ಲಾ ಪೋಷಕರ ಅಭಿಪ್ರಾಯ ಕೂಡ ಆಗಸ್ಟ್ 15ರ ನಂತರ ಪ್ರಾರಂಭ ಮಾಡಿ ಆದರೆ ಶಾಲೆಯಿಂದ ಬರುವ ಬುಕ್ಸುಗಳು ಇದ್ದರೆ ನಮಗೆ ಕೊಡಿ ನಮ್ಮ ಮಕ್ಕಳಿಗೆ ನಮ್ಮ ಮನೆಯಲ್ಲಿಯೇ ಹೇಳಿಕೊಡುತ್ತೆವೆ ಎಂದು ಹೇಳಿದರು.
ನಂತರ ಶಾಲೆಯ ಮುಖ್ಯೋಪಾದ್ಯಾಯರಾದ ರತ್ನಮ್ಮನವರು ಮಾತನಾಡಿ ಈ ಶಾಲೆಯು ಪ್ರಾರಂಭಗೊಂಡು 134 ವರ್ಷವಾಯಿತು. ಆದರೆ ಶಾಲೆಯ ರೂಂಗಳು ಶೀಥಿಲ ವ್ಯವಸ್ಥೆಯಲ್ಲಿವೆ, ನೆಲಕ್ಕೆ ಕಲ್ಲುಗಳು ಇವೆ ಆ ಸಂದಿಯಿಂದ ಇರುವೆಗಳು ಮೆಲಕ್ಕೆ ಬರುತ್ತಿವೆ ಆದರಲ್ಲಿಯೆ ಮಕ್ಕಳು ಪಾಠವನ್ನು ಆಲಿಸುತ್ತಾರೆ, ಸುಣ್ಣ ಬಣ್ಣ ಕಾಣದ ಅನಾಥವಾಗಿರುವ ಗೋಡೆಗಳು ನಮ್ಮ ಶಾಲೆಯಲ್ಲಿವೆ, ಈ ಎಲ್ಲಾ ವ್ಯವಸ್ಥೆಯನ್ನು ನೋಡಿ ನಮ್ಮ ಶಾಲೆಗೆ ತಮ್ಮ ತಮ್ಮ ಮಕ್ಕಳನ್ನು ಸೇರಿಸಲಿಕ್ಕೆ ಪೋಷಕರು ಹಿಂದೇಟು ಮಾಡುತ್ತಿದ್ದಾರೆ ಎಂದು ಎ.ಬಿ.ಸಿ ನ್ಯೂಸ್ ಚಾನಲ್ ಗೆ ಅವರು
ಅಳಲನ್ನು ತೋಡಿಕೊಂಡರು. ಈ ಹಿಂದೆ ನಮ್ಮ ಶಾಲೆಯಲ್ಲಿ 500ರಿಂದ 600 ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದರು, ಆದರೆ ಈಗ ಬೆರಳೆಣಿಕೆಯಸ್ಟು ಮಕ್ಕಳು ಬರುತ್ತಿದ್ದಾರೆ, ನಮ್ಮ ಸರ್ಕಾರಿ ಶಾಲೆಗಳಲ್ಲಿ ಉನ್ನತ ಮಟ್ಟದ ಶಿಕ್ಷಣವನ್ನು ಪಡೆದ ನುರಿತ ಶಿಕ್ಷಕಿಯರು ಇದ್ದಾರೆ ಆದರೆ ಖಾಸಗಿ ಶಾಲೆಯವರಗಿಂತ ಸರ್ಕಾರಿ ಶಾಲೆಯಲ್ಲಿ ಉನ್ನತ ಮಟ್ಟದ ಶಿಕ್ಷಣ ನೀಡುತ್ತಿದ್ದು ಇದನ್ನು ಎಲ್ಲಾ ಪೋಷಕರು ಸರ್ಕಾರಿ ಶಾಲೆಯಲ್ಲಿ ನಿಮ್ಮ ಮಕ್ಕಳನ್ನು ಓದಿಸಿ ಎಂದರು.
ರಾಷ್ಟಕವಿ ಡಾ// ಜಿ.ಎಸ್ ಶಿವರುದ್ರಪ್ಪನವರು ಇದೆ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪಡೆದರು, ಅವರು ಈ ಶಾಲೆಯಲ್ಲಿ ಓದಿರುವುದು ನಮಗೆ ಸಂತೋಷದ ವಿಷಯ ಹಾಗೂ ದುಖ:ದ ಸಂಗತಿಯು ಕೂಡ, ಏಕೆ ಈ ಮಾತನ್ನು ಹೇಳುತ್ತಿದೇವೆ ಎಂದರೆ ನಮ್ಮ ಶಾಲೆಯ ವ್ಯವಸ್ಥೆಯನ್ನು ನೋಡಿ ಮನಸ್ಸಿಗೆ ತುಂಬ ನೋವು ಆಗುತ್ತದೆ ಎಂದರು.
ನಂತರ ಪಟ್ಟಣ ಪಂಚಾಯಿತಿಯ ಸದಸ್ಯರುಗಳು ಮಾತನಾಡಿ 18 ಸದಸ್ಯರು ನಾವು ಒಗ್ಗಟ್ಟಾಗಿ ಮೀಟಿಂಗ್ ಮಾಡಿ ಸುಣ್ಣ ಬಣ್ಣ ಈ ಶಾಲೆಯ ದುರಸ್ಥಿಯ ಬಗ್ಗೆ ಮಾತನಾಡಿ ನಮ್ಮಿಂದ ಆದ ಸಹಾಯ ಮಾಡುತ್ತೆವೆ ಎಂದು ಹೇಳಿದರು.
ಇವರುಗಳ ಉಪಸ್ಥಿತಿಯಲ್ಲಿ;- ಅದ್ಯಕ್ಷತೆಯಲ್ಲಿ ಬಾವಿಮನೆ ರಾಜಪ್ಪ, ಪಟ್ಟಣ ಪಂಚಾಯಿತಿಯ ಸದಸ್ಯರುಗಳಾದ ಕೆ.ವಿ ಶ್ರೀಧರ್ ಓಬಳದರ್‍ಬಾಬು, ವಿಜೇಂದ್ರಪ್ಪ, ಮತ್ತು ಶಾಲೆಯ ಮುಖ್ಯೋಪಾದ್ಯಾಯರಾದ ರತ್ನಮ್ಮ, ಶೀಕ್ಷಕಿಯರಾದ ವೀರಾ ಟೀಚರ್, ಸುಮಾ ಹೆಚ್.ಕೆ,
ಪ್ರಮೀಳಾ, ಚಂದ್ರಮ್ಮ, ಸತ್ಯಶೀಲ, ಪುಷ್ಪಲತ, ಮತ್ತು ಪೋಷಕರು ಮುಂತಾದವರು ಸಹ ಭಾಗಿಯಾಗಿದ್ದ