ಭಾರತದ ವೇಟ್‌ಲಿಫ್ಟರ್‌ ಸಂಜಿತಾ ಚಾನು[ಮಣಿಪುರ] ಅವರ ಮೇಲಿದ್ದ ಉದ್ದೀಪನ ಮದ್ದು ಸೇವನೆ ಪ್ರಕರಣವನ್ನು ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ (ಐಡಬ್ಲ್ಯುಎಫ್‌) ‘ದೃಢೀಕೃತವಲ್ಲ’ ಎಂದು ಕೈಬಿಟ್ಟಿದೆ. ಆದರೆ ಸಂಜಿತಾ ಅವರು ಪ್ರಕರಣದ ಕಾರಣ ತಾವು ಅನುಭವಿಸಿದ ನೋವಿಗೆ ಕ್ಷಮೆ ಹಾಗೂ ಪರಿಹಾರದ ಬೇಡಿಕೆ ಇಟ್ಟಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನನ್ನ ಅವಕಾಶವನ್ನು ಐಡಬ್ಲ್ಯುಎಫ್‌ ಕಸಿದುಕೊಂಡಿತು ಎಂದು ಅವರು ಕಿಡಿಕಾರಿದ್ದಾರೆ.

ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಘಟಕದ (ವಾಡಾ) ಶಿಫಾರಸಿನ ಆಧಾರದ ಮೇಲೆ ಐಡಬ್ಲ್ಯುಎಫ್‌ ಈ ನಿರ್ಧಾರಕ್ಕೆ ಬಂದಿದೆ.

2017ರ ನವೆಂಬರ್‌ನಲ್ಲಿ ಸಂಜಿತಾ ಅವರಿಂದ ಪರೀಕ್ಷೆಗಾಗಿ ಮಾದರಿಯನ್ನು ಸಂಗ್ರಹಿಸಲಾಗಿತ್ತು.

2018ರ ಮೇ 15ರಿಂದ 2019ರ ಜನವರಿ 22ರವರೆಗೆ ಸಂಜಿತಾ ಅವರನ್ನು ಅಮಾನತುಗೊಳಿಸಲಾಗಿತ್ತು. ನಂತರ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. 2014 ಮತ್ತು 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಾನು
ಚಿನ್ನ ಗಳಿಸಿದ್ದರು.

???????????

Leave a Reply

Your email address will not be published. Required fields are marked *