ದಾವಣಗೆರೆ ಜೂ.15
ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿರುವ ಎಲ್ಲಾ
ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ವಾಸವಿರುವ ದ್ವಿತೀಯ
ಪಿಯುಸಿ ವಿದ್ಯಾರ್ಥಿಗಳಿಗೆ ಜೂ.18 ರಂದು ನಡೆಯಲಿರುವ
ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆಯಲು ತಮಗೆ
ಸಂಬಂಧಿಸಿದ ಮಾಹಿತಿಯನ್ನು ಪಾಲಿಕೆಯ
ಆರೋಗ್ಯಾಧಿಕಾರಿಗಳಿಗೆ ನೀಡಬೇಕು.
ಪರೀಕ್ಷೆಗೆ ಹಾಜರಾಗಬೇಕಿರುವ ಎಲ್ಲಾ ವಿದ್ಯಾರ್ಥಿಗಳು ತಮ್ಮ
ರಿಜಿಸ್ಟರ್ ನಂಬರ್, ವಿಳಾಸ, ಮೊಬೈಲ್ ನಂಬರ್ ಹಾಗೂ ಪರೀಕ್ಷಾ
ಕೇಂದ್ರದ ಮಾಹಿತಿಯನ್ನು ಜೂ.16 ರಂದು ಮಧ್ಯಾಹ್ನ 1
ಗಂಟೆಯೊಳಗೆ ತಮ್ಮ ಕಂಟೈನ್‍ಮೆಂಟ್ ಜೋನ್‍ನ
ತಾತ್ಕಾಲಿಕ ಆರೋಗ್ಯ ಕೇಂದ್ರದಲ್ಲಿ ಹಾಜರಿರುವ
ಮಹಾನಗರಪಾಲಿಕೆಯ ಹೆಲ್ತ್ ಇನ್ಸಪೆಕ್ಟರ್ ರವರಿಗೆ
ಒದಗಿಸಬೇಕೆಂದು ಮಹಾನಗರಪಾಲಿಕೆಯ ಆರೋಗ್ಯಾಧಿಕಾರಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.