ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಹೊನ್ನಾಳಿ ನಗರದಲ್ಲಿ ಸರ್ಕಾರ ಸುಸಜ್ಜಿತ ಆಸ್ಪತ್ರೆ ಇರುವುದಷ್ಟೇ ಸರಿ ಅಷ್ಟೇ ಭ್ರಷ್ಟಾಚಾರ ಕರ್ಮಕಾಂಡ ವಿದೆ.ಸುಮಾರು 26 ಜನ ಹೊರಗುತ್ತಿಗೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು ಶ್ರೀ ಲಕ್ಷ್ಮೀ ಎಂಟರ್ಪ್ರೈಸಸ್ ಬೆಂಗಳೂರು ಎಂಬ ಸಂಸ್ಥೆ ಅಡಿಯಲ್ಲಿ ನಿರ್ವಹಿಸಲು ನಿರ್ವಹಿಸಿದ್ದು ಸುಮಾರು 10 ತಿಂಗಳಿನಿಂದ ನೌಕರರಿಗೆ ವೇತನವನ್ನು ನೀಡಿಲ್ಲ. ಆದರೆ ಹೊನ್ನಾಳಿ ಆಡಳಿತಾಧಿಕಾರಿಗಳಿಗೆ ಈ ವಿಚಾರ ಅವರ ಗಮನಕ್ಕೆ ಬಂದಾಗ ಅವರು ಸಂಸ್ಥೆಗೆ ಬಿಲ್ ಮಾಡಿರುತ್ತಾರೆ. ಬಿಲ್ ತೆಗೆದುಕೊಂಡ ಸಂಸ್ಥೆ ನೌಕರರಿಗೆ ವೇತನ ಪಾವತಿಸಿಲ್ಲ. ಈ ವಿಷಯದಲ್ಲಿ ಆಡಳಿತಾಧಿಕಾರಿಗಳು ನೌಕರರಿಗೆ ವೇತನವನ್ನು ಪಾವತಿಸಿದ್ದಾರೆ ಎಂಬುದನ್ನು ಪರಿಶೀಲಿಸಿ: ಜಿಲ್ ಮಾಡಬೇಕು ಮತ್ತು 2 ವರ್ಷಗಳಿಂದ ಪಿ.ಎಫ್ ಹಾಗು ಇಎಸ್.ಐ.ಸಹ ಇವರಿಗೆ ಇರುವುದಿಲ್ಲ .ಮಧ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರು ಬಿಟ್ಟು ಹೋದಲ್ಲಿ ಅವರ ವೇತನವನ್ನು ಸಹ ಬಿಡುಗಡೆ ಮಾಡಿರುತ್ತಾರೆ.ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ಆಸ್ಪತ್ರೆ ಪ್ರಾರಂಭಿಸಿದ್ದು ತಿಂಡಿಗಳ ಬೆಲೆ ದರದ ವಿವರವನ್ನು ನಮೂದಿಸಿರುವುದಿಲ್ಲ.
ಗುತ್ತಿಗೆದಾರರಿಗೆ ಟೆಂಟ್‌ನಲ್ಲಿ ಒಬ್ಬ ನೌಕರರಿಗೆ 1400000 ನಂತೆ ಚೆಂಡರ್ ಆಗಿದ್ದರೆ, ನೌಕರರಿಗೆ 8,650-00 ರೂ.ಗಳ ವೇತನ ನೀಡುತ್ತಾರೆ.ಹೀಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಭಷ್ಟಾಚಾರ ಮಿತಿಮೀರಿದ್ದು ಯಾವುದೇ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಸಹ ಈ ಬಗ್ಗೆ ಮೌನವಾಗಿರುವುದರಿಂದ ಈ ಅಧಿಕಾರಿಗಳು ಸಹ ಫಲಾನುಭವಿಗಳು ಆಗಿರಬಹುದೆಂದು ಏಕೆ ಭಾವಿಸಬಾರದು. ಸರ್ಕಾರ ಹಣವನ್ನು ದುರುಪಯೋಗ ಭ್ರಷ್ಟಾಚಾರದಲ್ಲಿ ಬಾಗಿದಾರರಾದ ಅಧಿಕಾರಿಗಳನ್ನು ಅಮಾನತ್ತುಪಡಿಸಿ,ತನಿಖೆ ಕೈಗೊಳ್ಳಬೇಕು.ಗುತ್ತಿಗೆ ನೌಕರರಿಗೆ ವೇತನ ಪಾವತಿಸುವಂತೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ 25-06-2020ರಂದು ತಹಶೀಲ್ದಾರ್‌ರವರ ಕಛೇರಿ ಎದುರು ಬೇಡಿಕೆ ಈಡೇರುವವರೆಗೂ ಅನಿರ್ಧಿಷ್ಟ ಪ್ರತಿಭಟನಾ ಧರಣಿ ಮಾಡಲಾಗುವುದು ಎಂದು ಸಮಿತಿಯೂ
ಎಚ್ಚರಿಸುತ್ತದೆ. 1] ಶ್ರೀ ಲಕ್ಷ್ಮೀ ಎಂಟರ್‌ಪ್ರೈಸ್‌ಸ್ಟ್ ಗೆ ಯಾವುದೇ ಟಂಡರ್ ಸಿಗದಂತೆ ಕಪ್ಪು ಪಟ್ಟಿಗೆ ಸೇರಿಸಬೇಕು. 2) ಈಸಂಸ್ಥೆಗೆ 2. ವರ್ಷದಿಂದ ಪಿ.ಎಫ್ ಇ.ಎಸ್.ಐ.ದುರುಪಯೋಗಪಡಿಸಿಕೊಂಡಿರುವುದರಿಂದ ಈ ಸಂಸ್ಥೆಯ ಮಾಲೀಕರ ಮೇಲೆ ಕ್ರಿಮಿನಲ್
ಮೊಕದ್ದಮೆ ದಾಖಲಿಸಬೇಕು. 3] ಸರ್ಕಾರಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರದಲ್ಲಿ ಭಾಗೀದಾರರಾದ ಆಡಳಿತಾಧಿಕಾರಿ, ಸೂಪರ್ ವೈಜರ್, ಅವರನ್ನು ಅಮಾನತು ಪಡಿಸಬೇಕು. 4] ಕ್ಯಾಂಟಿನಲ್ಲಿ ಸಾರ್ವಜನಿಕರಿಗೆ ತಿಳಿಯುವಂತೆ [ತಿಂಡಿ/ಊಟ/ಟಿ]ಗೆ ದರ ಪಟ್ಟಿ ಹಾಕಬೇಕು.
5] ಆಸ್ಪತ್ರೆಯ ಕರ್ಮಕಾಂಡಗಳು ಬಗ್ಗೆ ತನಿಖೆ ಮಾಡಬೇಕು. ಈ ಎಲ್ಲಾ ಬೇಡಿಕೆಗಳನ್ನು ತುರ್ತಾಗಿ ಈಡೇರಿಸದಿದ್ದಲ್ಲಿ 25-06-2020 ರಂದು ಅನಿರ್ಧಿಷ್ಟ ಅವಧಿಯವರೆಗೆ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.