ದಾವಣಗೆರೆ ಜೂ.16
  ಸಾಲ ಪಡೆದ ಫಲಾನುಭವಿಗಳು ಸಮಾಜ ಕಟ್ಟುವ ಕೆಲಸ
ಮಾಡಬೇಕು. ಇದು ಅಲ್ಪ ಮೊತ್ತವಾದರೂ ಅದರ
ಸದುಪಯೋಗ ಪಡೆದು ಒಳ್ಳೆಯ ಕೆಲಸ ಕೈಗೊಳ್ಳುವ
ಮೂಲಕ ಅಭಿವೃದ್ಧಿ ಹೊಂದಬೇಕು ಎಂದು ಆರ್ಯವೈಶ್ಯ
ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಿಎಸ್.ಅರುಣ್
ಕುಮಾರ್ ಹೇಳಿದರು.
   ಮಂಗಳವಾರ ಜಿಲ್ಲಾ ಕುರುಬರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ
ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ
ಅಯೋಜಿಸಲಾಗಿದ್ದ ಸಾಲ ಮಂಜೂರಾತಿ ಪತ್ರ ವಿತರಣೆ

ಸಂದರ್ಭದಲ್ಲಿ ಸಮುದಾಯದ ಫಲಾನುಭವಿಗಳಿಗೆ
ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದ ಅವರು, ನೀವು ಪಡೆದ
ಸಾಲವನ್ನು ಸಕಾಲದಲ್ಲಿ ಹಿಂತಿರುಗಿಸಿ ನಿಮ್ಮಿಂದ ಇನ್ನೊಂದಿಷ್ಟು ಜನರು
ಹಾಗೂ ಕುಟುಂಬಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಶುಭ
ಹಾರೈಸಿದರು.
   ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿಯಲ್ಲಿ
ಆರ್ಯವೈಶ್ಯ ಸಮುದಾಯಕ್ಕೆ ಸೇರಿದ ಅರ್ಜಿದಾರರಿಗೆ ಸ್ವಯಂ
ಉದ್ಯೋಗ ಕೈಗೊಳ್ಳಲು ಗರಿಷ್ಠ 1 ಲಕ್ಷ ಆರ್ಥಿಕ ನೆರವು
ಒದಗಿಸಲಾಗುತ್ತಿದೆ. ಈ ಮೊತ್ತದಲ್ಲಿ ಶೇ. 20 ರಷ್ಟು
ಸಹಾಯಧನವಾಗಿ ಉಳಿದ ಮೊತ್ತವನ್ನು ಸಾಲದ ರೂಪದಲ್ಲಿ ಶೇ.
4ರ ಬಡ್ಡಿದರದಲ್ಲಿ ನೀಡಲಾಗುವುದು. ಸಾಂಪ್ರದಾಯಿಕ
ವೃತ್ತಿಗಳಲ್ಲದೇ ಇನ್ನಿತರ ಚಟುವಟಿಕೆಗಳಿಗೆ ಸಹ ಈ ನೆರವು
ಬಳಸಿಕೊಳ್ಳಬಹುದು ಎಂದರು.
    ರಾಜ್ಯದಲ್ಲಿ 10 ಲಕ್ಷದಷ್ಟು ಆರ್ಯವೈಶ್ಯ
ಸಮುದಾಯದವರಿದ್ದು, ಕರ್ನಾಟಕ ಆರ್ಯ ವೈಶ್ಯ ಸಮುದಾಯ
ಆಭಿವೃದ್ಧಿ ನಿಗಮವನ್ನು ಜಾರಿಗೆ ತರಲಾಗಿದೆ. ನಿಗಮದ
ಯೋಜನೆಯ ನೆರವು ಸುಲಭವಾಗಿ ಪಡೆಯುವಂತಾಗಲು ಜಾತಿ
ಮತ್ತು ಆದಾಯ ಪ್ರಮಾಣ ಪತ್ರ ಸಿಗುವಂತೆ ಸರ್ಕಾರ
ಈಗಾಗಲೇ ಕ್ರಮ ಕೈಗೊಂಡಿದ್ದೆ. ಈ ಮೊದಲು ಜಾತಿ ಪ್ರಮಾಣ
ಪತ್ರ ನೀಡುತ್ತಿರಲಿಲ್ಲ. ಕ್ಯಾಬಿನೆಟ್‍ನಲ್ಲಿ ಅನುಮತಿ ಪಡೆದು ಡಿಸೆಂಬರ್
16 ರಿಂದ ನೀಡಲಾಗುತ್ತಿದೆ. ಇದರಿಂದ ಸಮುದಾಯದವರಿಗೆ
ಉಪಯೋಗವಾಗಿದ್ದು, ಸರ್ಕಾರಿ ಸಂಸ್ಥೆಗಳಿಂದ ಸಾಲ, ಸಹಾಯಧನ
ಮತ್ತು ತರಬೇತಿ ಪಡೆಯಲು ಅನುಕೂಲವಾಗಿದೆ ಎಂದರು.
    ಹಿಂದೂ ಸಮಾಜದಲ್ಲಿ ಆರ್ಯ ವೈಶ್ಯ ಸಮಾಜ ವಿಶೇಷ ರೀತಿಯಲ್ಲಿ
ಕೆಲಸ ಮಾಡಿಕೊಂಡು ಬಂದಿದೆ. ಹಲವು ಕಾರ್ಯ, ದಾನ ಹಾಗೂ ಸಂಸ್ಥೆ
ಸ್ಥಾಪಿಸಿ ಹಲವರಿಗೆ ಕೆಲಸ ಕೊಟ್ಟಿದೆ. ಇಂತಹ ಸಮಾಜವನ್ನು ಇಂದು
ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮ ಸರ್ಕಾರ ಗುರುತಿಸಿ
ಅನುದಾನ ಬಿಡುಗಡೆ ಮಾಡಿದ್ದು, ಇದೊಂದು ಒಳ್ಳೆಯ ದಿನವಾಗಿದೆ.
ಸರ್ಕಾರ ನಮ್ಮ ಸಮುದಾಯವನ್ನು ಗುರುತಿಸಿ, ಅಧ್ಯಕ್ಷರ
ನೇಮಕ ಮಾಡಿದೆ. ಅವರ ಮೂಲಕ ಫಲಾನುಭವಿಗಳಿಗೆ ಹಾಗೂ
ಸಮಾಜದಲ್ಲಿನ ಕುಟುಂಬ ವರ್ಗದ ಜನರಿಗೆ ಯಾವ ರೀತಿ ಸಹಾಯ
ಮಾಡಬಹುದು ಎನ್ನುವ ದೃಷ್ಟಿಕೋನದಿಂದ ಕಾರ್ಯ
ಕೈಗೊಂಡಿದೆ ಎಂದು ತಿಳಿಸಿದರು.
   ಕೇಂದ್ರ ಮತ್ತು ರಾಜ್ಯ ಸರ್ಕಾರ ಬಹಳ ಒಳ್ಳೆಯ ಕೆಲಸ
ಮಾಡುತ್ತಿದೆ. ಕೊರೊನಾ ವೈರಸ್ ತಡೆಗಟ್ಟುವಲ್ಲಿ
ಹೋರಾಡುತ್ತಿದೆ. ಆನರಲ್ಲಿ ಜಾಗೃತಿ, ಅರಿವು ಮೂಡಿಸಲಾಗುತ್ತಿದ್ದು,
ಹಗಲಿರುಳು ಶ್ರಮಿಸಲಾಗುತ್ತಿದೆ. ಸರ್ಕಾರದ ಹಲವು
ನಿರ್ಧಾರದಿಂದ ಶೇ. 50 ರಷ್ಟು ಕೇಸ್ ಗುಣಮುಖರಾಗಿದ್ದಾರೆ. ಇದು
ಒಳ್ಳೆಯ ಬೆಳವಣಿಗೆ ಎಂದು ಶ್ಲಾಘೀಸಿದರು.
   ಕೋವಿಡ್-19 ವೈರಸ್‍ನಿಂದ ದೇಶವೆ ಲಾಕ್‍ಡೌನ್ ಆಗಿದ್ದು, ಆನೇಕ
ಜನರು ಕಷ್ಟ ಅನುಭವಿಸಿದ್ದಾರೆ. ಈ ಸಂದರ್ಭದಲ್ಲಿ ಆರ್ಯ ವೈಶ್ಯ
ಸಮುದಾಯದವರು ವ್ಯಾಪರ ವಹಿವಾಟು ಇಲ್ಲದೆ ತುಂಬಾ
ತೊಂದರೆಗೆ ಒಳಗಾಗಿದ್ದರು. ಆರ್ಯ ವೈಶ್ಯ ಸಮಾಜವು

ವ್ಯಾಪರ, ವ್ಯವಹಾರಗಳಿಗೆ ಪ್ರಸಿದ್ಧಿ ಆಗಿರುವಂತವರು. ನಮ್ಮದು
ಪುಟ್ಟ ಸಮಾಜ ರಾಜ್ಯದಲ್ಲಿ ಕಡಿಮೆ ಜನಸಂಖ್ಯೆಯನ್ನು
ಹೊಂದಿದವರು. ಈ ಸಮಾಜಕ್ಕೆ ಒಂದು ನಿಗಮ ಸ್ಥಾಪಿಸಬೇಕು ಎಂದು
ಮುಖ್ಯಮಂತ್ರಿಗಳು ಹಾಗೂ ಹಿಂದುಳಿದ ಕಲ್ಯಾಣ ಇಲಾಖೆ
ಸಚಿವರಾದ ಶ್ರೀರಾಮುಲು ಅವರಿಗೆ ಮನವಿ ಮಾಡಿದಾಗ, ನಿಗಮ ಸ್ಥಾಪಿಸಿ
ಜೊತೆಗೆ ಆರ್ಯ ವೈಶ್ಯ ಸಮಾಜವನ್ನು ಗುರುತಿಸಿ ಅನುದಾನ
ನೀಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು,
ಶೈಕ್ಷಣಿಕ ಸಾಲದೊಂದಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು
ನೇರ ಉದ್ಯೋಗ ಸಾಲ ನೀಡಿದೆ. ಹಾಗಾಗಿ ನಾವು ಅವರಿಗೆ ಅಭಿನಂದನೆ
ಸಲ್ಲಿಸಬೇಕು ಎಂದರು.
    ಸಭೆಯಲ್ಲಿ ಆರ್ಯ ವೈಶ್ಯ ಸಮಾಜದ ಅಭಿವೃದ್ಧಿ ನಿಗಮದ ಜಿಲ್ಲಾ
ವ್ಯವಸ್ಥಾಪಕರಾದ ಗುಣೇಶ್,  ಪ್ರಭಾಕರ್, ಶ್ರೀನಿವಾಸಮೂರ್ತಿ
 ಅನಂತರಾಮ್ ಶೆಟ್ರು, ಅಶ್ವತ್ಥ್‍ರಾಜ್ ಹಾಗೂ ಫಲಾನುಭವಿಗಳು
ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *