ದಾವಣಗೆರೆ ಜೂ.16
ಜೂ.18 ರಂದು ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಮತ್ತು
ಜೂ.25 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಪ್ರಾರಂಭವಾಗಲಿರುವ
ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಪರೀಕ್ಷಾ ಕೇಂದ್ರಗಳಿಗೆ
ಪೂರ್ವಭಾವಿಯಾಗಿ ಸಿಇಓ ಪದ್ಮಾ ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ
ನಡೆಸಿದರು.
ಈ ಸಂದರ್ಭದಲ್ಲಿ ಪರೀಕ್ಷೆ ಕೇಂದ್ರಗಳನ್ನು ಪರೀಕ್ಷೆ
ಪ್ರಾರಂಭವಾಗುವ ಮೂರು ದಿನಗಳ ಮೊದಲು ಹಾಗೂ ಪ್ರತಿ
ದಿನ ಪರೀಕ್ಷೆಯ ನಂತರ ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿ
ಹಾಗೂ ಪೀಠೋಪಕರಣಗಳನ್ನು ಸೋಂಕು ನಿವಾರಕ ದ್ರಾವಣ
ಸಿಂಪಡಿಸಿ ಸ್ವಚ್ಛಗೊಳಿಸಲು ಸೂಚಿಸಲಾಯಿತು. ಜೊತೆಗೆ ಪರೀಕ್ಷಾ
ಕೇಂದ್ರದಲ್ಲಿರುವÀ ಶೌಚಾಲಯಗಳನ್ನು ಸಹ ಸೋಂಕು
ನಿವಾರಕ ದ್ರಾವಣದಿಂದ ಸ್ವಚ್ಛಗೊಳಿಸಬೇಕು. ಪ್ರತಿ ಬಾರಿ
ಶೌಚಾಲಯಗಳನ್ನು ಬಳಸಿದ ನಂತರ ಸ್ಯಾನಿಟೈಸರ್ ಮಾಡಿ
ವಿದ್ಯಾರ್ಥಿಗಳು ಬಳಸಲು ಕ್ರಮ ವಹಿಸುವಂತೆ ಪಿಡಿಓ ಹಾಗೂ
ಶಾಲೆಯ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದರು.