ದಾವಣಗೆರೆ ಜೂ.16
ಜೂ.18 ರಂದು ದ್ವೀತಿಯ ಪಿ.ಯು.ಸಿ ಇಂಗ್ಲೀಷ್ ವಿಷಯದ ಪರೀಕ್ಷೆ
ನಡೆಯಲ್ಲಿದ್ದು. ಪರೀಕ್ಷೆಗೆ ಜಿಲ್ಲೆಯಾದ್ಯಂತ 16.018 ಒಟ್ಟು
ವಿದ್ಯಾರ್ಥಿಗಳು ಹಾಜರಗಲಿದ್ದಾರೆ. ಒಟ್ಟು 31 ಪರೀಕ್ಷಾ
ಕೇಂದ್ರಗಳನ್ನು ಹಾಗೂ ಸಾಮಾಜಿಕ ಅಂತರ ಕಾಯ್ದಿರಿಸುವ
ಸಂಬಂಧದಿಂದ ಹೆಚ್ಚುವರಿಯಾಗಿ 15 ಬ್ಲಾಕ್ ಪರೀಕ್ಷಾ
ಕೇಂದ್ರಗಳನ್ನು ನಿಗದಿಪಡಿಸಲಾಗಿದೆ.
ವಿದ್ಯಾರ್ರ್ಥಿಗಳ ಕ್ಷೇಮಕ್ಕಾಗಿ : ಎಲ್ಲಾ ಪರೀಕ್ಷಾ ಕೇಂದ್ರಗಳನ್ನು
ಜಿಲ್ಲಾಡಳಿತ ಸಹಕಾರದಿಂದ ಸ್ವಚ್ಛತೆ ಮತ್ತು ಸ್ಯಾನಿಟೇಷನ್
ಮಾಡಲಾಗಿದೆ, ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಯ್ದಿರಿಸಲು 1
ಮೀಟರ್ ಅಂತರದಲ್ಲಿ ಆಸನ ವ್ಯವಸ್ಥೆಯನ್ನು, ವಿದ್ಯಾರ್ಥಿಗಳು
ಪರೀಕ್ಷೆಯಿಂದ ವಂಚಿತರಾಗದೆಂಬ ಉದ್ದೇಶದಿಂದ ಎಲ್ಲಾ ಗ್ರಾಮೀಣ
ಪ್ರದೇಶಗಳಿಂದ ಸಾರಿಗೆ ವ್ಯವಸ್ಥೆಯನ್ನು 14 ಮಾರ್ಗವಾಗಿ
ಕಲ್ಪಿಸಲಾಗಿದೆ, ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು,
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು
ಸಿಬ್ಬಂದಿಗಳಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ತಪಾಸಣೆ ವ್ಯವಸ್ಥೆ
ಮತ್ತು ಸ್ವಚ್ಛತೆಗಾಗಿ ಸೋಪು ನೀರಿನ ವ್ಯವಸ್ಥೆ ಮಾಡಲಾಗಿದೆ,
ವಿದ್ಯಾರ್ಥಿಗಳು ಗುಂಪು ಗುಂಪುಗಾಗಿ ಒಳಗೆ ಬಾರದ ರೀತಿಯಲ್ಲಿ
ಸಾಮಾಜಿಕ ಅಂತರ ಕಾಯ್ದಿಕೊಂಡು ಒಳಗೆ ಹೋಗುವ ರೀತಿಯಲ್ಲಿ
ಬಾಕ್ಸ್‍ಗಳನ್ನು ಹಾಕಿ ಒಬ್ಬೊಬ್ಬರಾಗಿ ಪರೀಕ್ಷಾ ಕೊಠಡಿಗೆ ಹೋಗುವ
ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ
ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.