ದಾವಣಗೆರೆ ಜೂ.16
 ಕೋವಿಡ್-19 ಲಾಕ್‍ಡೌನ್ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ
ಅಗಸ/ಕ್ಷೌರಿಕ ವೃತ್ತಿಯ ಅಸಂಘಟಿತ ಕಾರ್ಮಿಕರಿಗೆ ಪರಿಹಾರ
ರೂ.5000 ಘೋಷಣೆ ಮಾಡಿದ್ದು, ಆಸಕ್ತ ಫಲಾನುಭವಿಗಳು
ಪರಿಹಾರವನ್ನು ಪಡೆಯಲು ಸೇವಾ  ಸಿಂಧು ಆನ್‍ಲೈನ್‍ನಲ್ಲಿ ಅರ್ಜಿ
ಸಲ್ಲಿಸಬಹುದು.
ಜೂ.30 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದ್ದು ಅರ್ಜಿಯೊಂದಿಗೆ
ಮೂಲ ದಾಖಲೆಗಳಾದ, ನಿಗದಿಪಡಿಸಿದ ನಮೂಲನೆಯಲ್ಲಿ
ಕ್ಷೌರಿಕ/ಅಗಸ ವೃತ್ತಿ ನಿರ್ವಹಿಸುತ್ತಿರುವ ಬಗ್ಗೆ ಅಧಿಕಾರಿಗಳಿಂದ
ಉದ್ಯೋಗ ದೃಢೀಕರಣ ಪತ್ತ, ನಿಗದಿತ ನಮೂನೆಯಲ್ಲಿ
ಸ್ವಯಂ ಘೋಷಣೆ, ಬಿ.ಪಿ.ಎಲ್ ಕಾರ್ಡ್, ಜನ್ಮ ದಿನಾಂಕ ದಾಖಲೆ ಮತ್ತು
ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ (ಎಲ್ಲಾ
ದಾಖಲೆಗಳನ್ನು ಸೇವಾಸಿಂಧುವಿನಲ್ಲಿ ಅಪ್‍ಲೋಡ್ ಮಾಡುವುದು)
ಸಲ್ಲಿಸಬೇಕು.
ಷರುತ್ತುಗಳು : ಫಲಾನುಭವಿಯು ಕಡ್ಡಾಯವಾಗಿ
ಕ್ಷೌರಿಕ/ಅಗಸ ವೃತ್ತಿಯಲ್ಲಿ ತೊಡಗಿರಬೇಕು. ಅರ್ಜಿದಾರರ
ವಯೋಮಿತಿಯು 18 ರಿಂದ 65 ವರ್ಷಗಳಿಗೆ ಸೀಮಿತವಾಗಿದೆ. ಈ
ಯೋಜನೆಯಲ್ಲಿ ಸೌಲಭ್ಯವನ್ನು ಬಡತನ ರೇಖೆಗಿಂತ

ಕೆಳಗಿರುವ ಕುಟುಂಬಗಳಿಗೆ ಮಾತ್ರ ಸೀಮಿತಗೊಳಿಸಿದೆ. ಒಂದು
ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ವೃತ್ತಿಯಲ್ಲಿ
ತೊಡಗಿದ್ದಲ್ಲಿ, ಒಬ್ಬರು ಮಾತ್ರ ಪರಿಹಾರ ಧನಸಹಾಯವನ್ನು
ಪಡೆಯಲು ಅರ್ಹತೆಯನ್ನು ಹೊಂದಿರುತ್ತಾರೆ.
ಪರವಾನಿಗೆಯನ್ನು ಪಡೆದಿರುವ ಸಂಸ್ಥೆಯಲ್ಲಿ 4 ಕ್ಕಿಂತ ಹೆಚ್ಚು
ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು ಅವರು ಅರ್ಜಿ ಸಲ್ಲಿಸಿದ್ದಲ್ಲಿ
ಕಡ್ಡಾಯವಾಗಿ ತಪಾಸಣೆಯನ್ನು ಕೈಗೊಳ್ಳುವುದು.
ಪರವಾನಿಗೆಯನ್ನು ಪಡೆಯದೇ ಕಾರ್ಯನಿರ್ವಹಿಸುತ್ತಿರುವ
ಸಂಸ್ಥೆಯಿಂದ 2 ಕ್ಕಿಂತ ಹೆಚ್ಚು ಫಲಾನುಭವಿಗಳು ಅರ್ಜಿ ಸಲ್ಲಿಸಿದಲ್ಲಿ
ತಪಾಸಣೆಗೆ ಸ್ಥಳ ಪರೀಶಿಲನೆ ನಡೆಸಿ ಪಾವತಿಗೆ
ಪರಿಗಣಿಸಲಾಗುವುದು. ಕರ್ನಾಟಕದಲ್ಲಿ ಅಗಸ/ಕ್ಷೌರಿಕ ವೃತ್ತಿ
ನಿರ್ವಹಿಸುತ್ತಿರುವ ಬೇರೆ ರಾಜ್ಯದ ಕಾರ್ಮಿಕರು ಸಹ
ಪರಿಹಾರವನ್ನು ಪಡೆಯಲು ಅರ್ಹರು (ಕರ್ನಾಟಕ ರಾಜ್ಯದ ಬಿ.ಪಿ.ಎಲ್
ಕಾರ್ಡ್ ಹೊಂದಿದ್ದಲ್ಲಿ). ಫಲಾನುಭವಿಗಳು ಸಲ್ಲಿಸುವ
ಅರ್ಜಿಗಳನ್ನು ಸೇವಾ ಸಿಂಧು ಪೊರ್ಟಲ್ ಮೂಲಕವೇ
ಸ್ವೀಕೃತವಾಗತಕ್ಕದ್ದು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ
ವೀರಮಲ್ಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *