ದಾವಣಗೆರೆ ಜೂ.17
   ಭಾರತೀಯ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಪೇಮೆಂಟ್ಸ್
ಬ್ಯಾಂಕ್ (ಐಪಿಪಿಬಿ) ವ್ಯವಸ್ಥೆಯ  ಡಿಜಿಟಲ್, ಆನ್‍ಲೈನ್ ಬ್ಯಾಂಕಿಂಗ್ ಸೌಲಭ್ಯವನ್ನು
ಮನೆ ಮನೆಗೆ ತಲುಪಿಸಲು ಮುಂದಾಗಿದ್ದು, ಜೂ. 20 ರಂದು ಐಪಿಪಿಬಿ
ಮಹಾ ಲಾಗಿನ್ ಶೆಡ್ಯೂಲ್ ಹಮ್ಮಿಕೊಂಡಿದೆ.

  ಇತರ ಬ್ಯಾಂಕ್ ಖಾತೆಗಳಿಂದ ತಮ್ಮ ಹಣ ಶುಲ್ಕವಿಲ್ಲದೇ ಎಇಪಿಎಸ್
ಮೂಲಕ ಬಿಡಿಸಿಕೊಳ್ಳುವುದರ ಜೊತೆಗೆ ಖಾತೆಗಳಿಂದ ಹಣ
ವರ್ಗಾವಣೆ, ನೆಫ್ಟ್ ಮೊಬೈಲ್ ರಿಚಾರ್ಜ್, ಡಿಜಿಟಲ್ ರಿಚಾರ್ಜ್ ಹಾಗೂ ಆನ್‍ಲೈನ್
ಮೂಲಕ ಅಂಚೆ ಕಚೇರಿಯ ಆರ್‍ಡಿಪಿಪಿಎಫ್, ಸುಕನ್ಯಾ ಸಮೃದ್ಧಿ
ಖಾತೆಗಳಿಗೆ ಹಣ ಜಮೆ ಮಾಡಬಹುದಾಗಿದ್ದು ಇತರೆ ಮುಂತಾದ
ಸೌಲಭ್ಯಗಳಿವೆ.
  ವಿಧವಾ ವೇತನ, ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ,
ವಿಕಲಚೇತನ, ಸರ್ಕಾರದ ಸ್ಕಾಲರ್‍ಶಿಪ್, ಕಿಸಾನ್ ಸಮ್ಮಾನ್, ಗ್ಯಾಸ್ ಸಬ್ಸಿಡಿ
ಹೀಗೆ ಸರ್ಕಾರದ ಹಲವು ಯೋಜನೆಗಳ ಪ್ರಯೋಜನವನ್ನು
ಪಡೆಯಲು ಈ ಖಾತೆ ಬಳಸಬಹುದು.
ಖಾತೆ ಮಾಡಿಸುವುದು ಹೇಗೆ: ಐಪಿಪಿಬಿ ಖಾತೆ ಮಾಡಿಸಲು ಸಾರ್ವಜನಿಕರು
ಆಧಾರ್ ಸಂಖ್ಯೆ, ಮೊಬೈಲ್ ಹಾಗೂ ರೂ. 100 ಹಣದೊಂದಿಗೆ ಸಮೀಪದ
ಯಾವುದೇ ಅಂಚೆ ಕಚೇರಿ ಅಥವಾ ಪೋಸ್ಟ್‍ಮ್ಯಾನ್ ಅವರನ್ನು
ಭೇಟಿಯಾಗಬಹುದು.
  ಚಿತ್ರದುರ್ಗದ ವಿಭಾಗದ, ಚಿತ್ರದುರ್ಗ ಮತ್ತು ದಾವಣಗೆರೆ
ಜಿಲ್ಲೆಯ ಸಾರ್ವಜನಿಕರು ಜೂ. 20 ರಂದು ವಿಶೇಷವಾಗಿ ಈ
ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಚಿತ್ರದುರ್ಗ
ವಿಭಾಗದ ಅಂಚೆ ಅಧೀಕ್ಷಕರಾದ ಓ.ವಿರೂಪಾಕ್ಷಪ್ಪ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *