ದಾವಣಗೆರೆ ಜಿಲ್ಲೆ ಜೂ 16 ಹೊನ್ನಾಳಿ ತಾಲೂಕು ಸಾಸ್ವೇಹಳ್ಳಿಯಲ್ಲಿ ಸನ್ಮನ್ಯಾ ಶ್ರೀ ಡಾ// ಶಾಮನೂರು ಶಿವಶಂಕರಪ್ಪನವರು 90ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನಲೆಯಲ್ಲಿ ಅವರುಗಳ ಹುಟ್ಟು ಹಬ್ಬದ ಪ್ರಯುಕ್ತ ಸಾಸ್ವೇಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದರು.
ಆ ಶಿಬಿರದಲ್ಲಿ 30 ಜನ ರಕ್ತದಾನ ಮಾಡಿದರು. ಇದರ ವಿಶೇಷ ಏನೆಂದರೆ ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಿ.ಎಸ್ ಪ್ರದೀಪ್ ಗೌಡ್ರುರವರು ಸ್ವಯಂ ಪ್ರೇರಿತವಾಗಿ ಸಾಸ್ವೇಹಳ್ಳಿ ಸರ್ಕಾರಿ ಆಸ್ಪತ್ರೆಗೆ ಬಂದು ರಕ್ತದಾನ ಮಾಡಿರುವುದು ವಿಶೇಷವಾಗಿತ್ತು.
ನಂತರ ತಾಲೂಕು ಪಂಚಾಯಿತಿ ಸದಸ್ಯರಾದ ಅಬೀದ್ ಅಲಿ ಖಾನ್ ಮತ್ತು ಅವರ ಸಹಪಾಟಿಗಳು ಸೇರಿ ರಕ್ತದಾನ ಮಾಡಿದವರಿಗೆ ಸೇಬು ಹಣ್ಣು, ಬ್ರೆಡ್, ಜ್ಯೂಸ್ ಕಿಟ್ಟುಗಳನ್ನು ವಿತರಣೆ ಮಾಡಿದರು.
ಈ ಕಾರ್ಯಕ್ರಮಕ್ಕೆ ಭಾಗಿಯಾದವರು;- ಡಿ.ಎಸ್ ಪ್ರದೀಪ್ ಗೌಡ್ರು, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಗದ್ದಿಗೇಶಣ್ಣ, ತಾಲೂಕು ಪಂಚಾಯಿತಿ ಸದಸ್ಯರಾದ ಅಬೀದ್ ಅಲಿ ಖಾನ್, ಹಾಲೇಶ್ ಕುಮಾರ್, ಕುಶಾಲ್ ಪಟೇಲ್, ಅಮೀತ್, ಸಂತೋಷ್ ಟಿ, ಯುವ ಅಧ್ಯಕ್ಷ ಮಧುಗೌಡ, ಪ್ರವೀಣ್ ಮುಂತಾದವರು ಸಹ ಭಾಗಿಯಾಗಿದ್ದರು.