ದಾವಣಗೆರೆ ಜೂ.17
   ಇಂದು ದಾವಣಗೆರೆ ಜಿಲ್ಲೆಯಲ್ಲಿ 03 ಕೊರೊನಾ ಪಾಸಿಟಿವ್ ಪ್ರಕರಣ
ದಾಖಲಾಗಿದ್ದು, ಇಬ್ಬರು ಸಂಪೂರ್ಣ ಗುಣಮುಖರಾಗಿ ಜಿಲ್ಲಾ ಕೋವಿಡ್
ನಿಗದಿತ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ರೋಗಿ ಸಂಖ್ಯೆ 7575 45 ವರ್ಷದ ಪುರುಷ ಇವರು ರೋಗಿ
ಸಂಖ್ಯೆ 6575 ರ ಸಂಪರ್ಕಿತರು. ರೋಗಿ ಸಂಖ್ಯೆ 7576 50 ವರ್ಷದ
ಪುರುಷ ಇವರು ಶೀತ ಜ್ವರದ(ಇನ್‍ಪ್ಲುಯೆಂಜಾ ಲೈಕ್ ಇಲ್‍ನೆಸ್)
ಹಿನ್ನೆಲೆ ಹೊಂದಿದ್ದಾರೆ. ರೋಗಿ ಸಂಖ್ಯೆ 7577 20 ವರ್ಷದ ಯುವತಿ
ಇವರು ಮಹಾರಾಷ್ಟ್ರ ರಾಜ್ಯದ ಹಿಂದಿರುಗಿರುವ ಹಿನ್ನೆಲೆ
ಹೊಂದಿದ್ದಾರೆ.
ಇಂದು ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಯಿಂದ ರೋಗಿ ಸಂಖ್ಯೆ
6039 ಹಾಗೂ 6041 ಇವರು ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆ
ಹೊಂದಿದ್ದಾರೆ.
ಒಟ್ಟು ಇದುವರೆಗೆ 230 ಕೊರೊನಾ ಪಾಸಿಟಿವ್ ಪ್ರಕರಣ
ದಾಖಲಾಗಿದ್ದು ಈ ಪೈಕಿ ಇದುವರೆಗೆ 207 ಜನರು ಗುಣಮುಖರಾಗಿ
ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 6 ಸಾವು ಸಂಭವಿಸಿದ್ದು
ಪ್ರಸ್ತುತ 17 ಸಕ್ರಿಯ ಪ್ರಕರಣಗಳು ಇವೆ.

Leave a Reply

Your email address will not be published. Required fields are marked *