ದಾವಣಗೆರೆ ಜಿಲ್ಲೆ ಜೂ 18 ಹೊನ್ನಾಳಿ ತಾಲೂಕು ಬಸವನಹಳ್ಳಿ ಗ್ರಾಮದ 32 ವರ್ಷದ ಮಹಿಳೆ ತನ್ನ ಗಂಡನ ಮನೆಯವರು ಇವಳಿಗೆ ಜ್ವರ ಬಂದಿದೆ ಎಂದು ಅತ್ತೆ ಮಾವನವರು ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ದಿನಾಂಕ 15/16/06/2020 ಎರಡು ದಿನಗಳ ಕಾಲ ಚಿಕಿತ್ಸೆಗೆ ಒಳಪಟ್ಟು
ಅಲ್ಲಿ ಉಷಾರ್ ಆಗದ ಕಾರಣ ಅಲ್ಲಿಂದ ನಿರ್ಗಮಿಸಿ ಹೊನ್ನಾಳಿಯ ಕೋರಿ ಕಾಂಪ್ಲೆಕ್ಸ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೋಂಡು
ಹೊನ್ನಾಳಿ ಗಾಯಿತ್ರಿ ಕಾಂಪ್ಲೆಕ್ಸ್ ನಲ್ಲಿರುವ ರಕ್ತ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿ ಅಲ್ಲಿಂದ ವಾಸವಿ ಮೆಡಿಕಲ್ ಶಾಪ್ ಗೆ ಹೋಗಿ ಮಾತ್ರೆಯನ್ನು ತೆಗೆದುಕೊಂಡು ತನ್ನ ಗಂಡನ ಮನೆಗೆ ತೆರಳಿ ಆ ಮನೆಯಲ್ಲಿರುವ 7 ಜನ ಸಂಪರ್ಕ ಹೊಂದಿ, ನಂತರ ತನ್ನ ತಾಯಿಯ
ಮನೆಯಾದ ಮಾದನಬಾವಿ ಗ್ರಾಮಕ್ಕೆ ತೆರಳಿ ತಾಯಿಯ ಮನೆಯವರ 20 ಜನರ ಸಂಪರ್ಕ ಹೊಂದಿದ ನಂತರ ಅವಳಿಗೆ ಆಗ ಕೊರೋನಾ ಪಾಸಿಟಿವ್ ಬಂದಿರುವು ವೈದ್ಯರಿಗೆ ಮಾಹಿತಿ ತಿಳಿದು ಆ ಮಹಿಳೆಯನ್ನ ತಾಲೂಕಿನ ವೈದ್ಯರು ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಚಿಕಿತ್ಸೆಗೆ
ಒಳಪಡಿಸಿರುತ್ತಾರೆ. ನಂತರ ಆ ಮಹಿಳೆಯ ಸಂಪರ್ಕದಲ್ಲಿದ್ದ 27 ಜನರನ್ನು ಮಾದನಬಾವಿ ಮೂರಾರ್ಜಿ ಶಾಲೆಯಲ್ಲಿ ಇಸ್ಟೂಟ್ ಕ್ವಾರೈಂಟೈನ್
ತಪಾಸಣೆಗೆ ಕಳಿಸಲಾಗಿದೆ ಎಂದು ಹೊನ್ನಾಳಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಕೆಂಚಪ್ಪ ಬಂತಿಯವರು ತಿಳಿಸಿದರು.
ತದಾದನಂತರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾದ ಹೆಚ್.ಎಂ ವೀರಭದ್ರಯ್ಯ ಮತ್ತು ಅವರ ಸಿಬ್ಬಂದಿ ವರ್ಗದವರು ಸೇರಿ ಕೋರಿ
ಕಾಂಪ್ಲಕ್ಸ್ ಮತ್ತು ಗಾಯಿತ್ರಿ ಮೆಡಿಕಲ್ ಕಾಂಪ್ಲಕ್ಸ್ ಗಳಿಗೆ ಯಾರು ಹೋಗದಂತೆ ಸೀಲ್ ಡೌನ್ ಮಾಡಿಸಿದರು..