ದಾವಣಗೆರೆ ಜೂ.20
       ಜೂ.21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ
ಆಚರಿಸುವುದು ವಾಡಿಕೆಯಾಗಿರುತ್ತದೆ. ಆದರೆ ಪ್ರಸ್ತುತ್ತ
ಸಾಲಿನಲ್ಲಿ ಕೋವಿಡ್-19 ಮಹಾಮಾರಿ ಕಾರಣದಿಂದ ಸಾಮಾಜಿಕ ಅಂತರ
ಕಾಯ್ದುಕೊಳ್ಳುವ ದೃಷ್ಠಿಯಿಂದ ಈ ಸಾಲಿನಲ್ಲಿ ಯೋಗ ಫ್ರಮ್
ಹೋಮ್(ಥಿoug ಜಿಡಿom home)  ಎಂಬ ಘೋಷ ವಾಕ್ಯದೊಂದಿಗೆ
ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು
ಭಾರತ ಸರ್ಕಾರದ ಆಯುಷ್ ಮಂತ್ರಾಲಯವು ಸೂಚಿಸಿರುತ್ತದೆ.
     ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಗೈಡ್‍ಲೈನ್ಸ್ ಫಾರ್
ನ್ಯಾಚುರೋಪತಿ ಪ್ರಾಕ್ಟಿಷ್‍ನರ್ಸ್ ಫಾರ್ ಕೋವಿಡ್-19 ಸೂಚಿಯಲ್ಲಿ “
ಸ್ಟ್ರೆಸ್ ಅಂಡ್ ಆಂಗ್ಸೈಟಿ ಡಿಪ್ರೆಷನ್ ನಿವಾರಣೆಗಾಗಿ ಯೋಗ ಥೆರಫಿ
ಮಾಡಲ್‍ಗಳನ್ನು ಅನುಸರಿಸಲು ಆಯುಷ್ ಮಂತ್ರಾಲಯವು
ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಯೋಗಾಸಕ್ತರು,
ಯೋಗ ಒಕ್ಕೂಟ, ಸಂಘ ಸಂಸ್ಥೆಗಳು ಸಾರ್ವಜನಿಕರ ಗಮನಕ್ಕೆ
ಈ ವಿಷಯವನ್ನು ತರುತ್ತಾ ಮನೆಯಿಂದಲೇ ಯೋಗ
ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು
ಆಚರಿಸಲು ಮತ್ತು ಯಶಸ್ವಿಗೊಳಿಸಲು ಜಿಲ್ಲಾಡಳಿತ, ಜಿಲ್ಲಾ
ಪಂಚಾಯತ್, ಆಯುಷ್ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ ದಾವಣಗೆರೆ
ಹಾಗೂ ಇನ್ನಿತರೆ ಯೋಗಸಕ್ತ ಸಂಘ ಸಂಸ್ಥೆಗಳ ಪರವಾಗಿ
ಸಾರ್ವಜನಿಕರಲ್ಲಿ ಕೇಳಿಕೊಳ್ಳಲಾಗುವುದೆಂದು ಜಿಲ್ಲಾ ಆಯುಷ್
ಕಚೇರಿಯ ಡಾ.ಶಂಕರಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *