ದಾವಣಗೆರೆ ಜೂ.20
ಜಿಲ್ಲಾ ಪಂಚಾಯತ್ ಸಿಇಓ ಪದ್ಮಾ ಬಸವಂತಪ್ಪ ಇಂದು ಚನ್ನಗಿರಿ
ತಾಲ್ಲೂಕಿನ ಕರಿಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ,
ಕೆರೆಬಿಳಚಿ ಸಮುದಾಯ ಆರೋಗ್ಯ ಕೇಂದ್ರ, ಚನ್ನಗಿರಿ
ತಾಲ್ಲೂಕು ಆರೋಗ್ಯ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ,
ಆರೋಗ್ಯ ಕೇಂದ್ರಗಳಿಗೆ ಬರುವ ರೋಗಿಗಳಿಗೆ
ನೀಡಲಾಗುತ್ತಿರುವ ಚಿಕಿತ್ಸೆ ಹಾಗೂ ಐಎಲ್ಐ ಮತ್ತು ಎಸ್ಎಆರ್ಐ
ಪ್ರಕರಣಗಳ ಕುರಿತು ತಾಲ್ಲೂಕು ವೈದ್ಯಾಧಿಕಾರಿಗಳಿಂದ ಮಾಹಿತಿ
ಪಡೆದು ಪರಿಶೀಲನೆ ನಡೆಸಿದರು.