ದಾವಣಗೆರೆ ಜೂ.22
ಕೋವಿಡ್ 19 ಒಂದು ಸಾಂಕ್ರಾಮಿಕ ಪಿಡುಗಾಗಿದ್ದು, ಈ ವೈರಸ್
ಬಯೋಮೆಟ್ರಿಕ್ ಉಪಕರಣಗಳು ಸೇರಿದಂತೆ ಮೇಲ್ಮೈಗಳ
ಮೂಲಕ ಹರಡುವುದರಿಂದ ಎಬಿ-ಎಆರ್ಕೆ ಕಾರ್ಡ್ಗಳ(ಆಯುಷ್ಮಾನ್
ಭಾರತ್ ಆರೋಗ್ಯ ಕರ್ನಾಟಕ) ವಿತರಣೆಯನ್ನು ನಿಲ್ಲಿಸಲಾಗಿದ್ದು
ಎಬಿ-ಎಆರ್ಕೆ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಏನಾದರೂ
ಸಮಸ್ಯೆಗಳಿದ್ದಲ್ಲಿ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್
ಮತ್ತು ಪಡಿತರ ಚೀಟಿಗಳನ್ನು ತೋರಿಸಿ ಆರೋಗ್ಯ
ಸೇವೆಗಳನ್ನು ಪಡೆಯಬಹುದೆಂದು ಪ್ರಕಟಣೆ ತಿಳಿಸಿದೆ.