ದಾವಣಗೆರೆ ಜೂ.22
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್ ಇವರ
ಅಧ್ಯಕ್ಷತೆಯಲ್ಲಿ ಇಂದು ಹೊನ್ನಾಳಿ ತಾಲ್ಲೂಕು ಪಂಚಾಯ್ತಿ
ಕಚೇರಿಯಲ್ಲಿ ತಾಲ್ಲೂಕಿನ ಜಿಲ್ಲಾ ಪಂಚಾಯತ್ ಸದಸ್ಯರು,
ತಾಲ್ಲೂಕು ಪಂಚಾಯತ್ ಸದಸ್ಯರು, ಪಿಡಿಒ ಗಳಿಗೆ ಅವರ
ವ್ಯಾಪ್ತಿಯಲ್ಲಿ ಕೋವಿಡ್-19 ರೋಗ ನಿಯಂತ್ರಣ ಮಾಡುವ ಕುರಿತು
ನಿರ್ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು
ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ
ಸಂದರ್ಭದಲ್ಲಿ ಜಿ.ಪಂ, ತಾ.ಪಂ ಸದಸ್ಯರುಗಳು, ಜಿ.ಪಂ. ಸಿಇಓ ಪದ್ಮಾ
ಬಸವಂತಪ್ಪ, ಇತರೆ ಅಧಿಕಾರಿಗಳು ಹಾಜರಿದ್ದರು.