ದಾವಣಗೆರೆ ಜಿಲ್ಲೆ ಜೂ 22 ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ದಾವಣಗೆರೆ ಜಿಲ್ಲಾ ಸಹಕಾರ ಬ್ಯಾಂಕ್ ಮತ್ತು ಹಾಲು ಉತ್ಪಾದಕ ಸಹಕಾರ ಸಂಘ ಹಾಗೂ
ಪ್ರಾಥಮೀಕ ಕೃಷಿ ಪತ್ತಿನ ಸಹಕಾರ ಸಂಘ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಇಂದು ಅವಳಿ ತಾಲೂಕಿನ 237 ಆಶಾಕಾರ್ಯಕರ್ತೆಯವರಿಗೆ ತಾಲೂಕಿನ ಸಹಕಾರ ಸಂಘಗಳ ವತಿಯಿಂದ ಪ್ರತಿಯೋಬ್ಬರಿಗೂ 3000 ರೂನಂತೆ ಗೌರವ
ಧನ ಚಕ್ ವಿತರಣೆ ಸಮಾರಂಭದ ಅಧ್ಯಕ್ಷತೆಯನ್ನು ಎಂ.ಪಿ ರೇಣುಕಚಾರ್ಯರವರು ದೀಪ ಬೆಳಗಿಸುವುದರ ಜೊತೆಗೆ ಚೆಕ್ ವಿತರಣೆ ಮಾಡಿದರು.
ನಂತರ ಮಾತನಾಡಿದ ಎಂ.ಪಿ ರೇಣುಕಚಾರ್ಯರವರು ಆಶಾಕರ್ಯಕರ್ತಯರು ಪ್ರತಿಯೊಂದು ಮನೆ ಮನೆಗೆ ತೆರಳಿ ಕೊರೋನಾ ಕಷ್ಟದ
ದಿನಗಳ ಸಮಯದಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಗನೀಯ ಎಂದರು.
ಹೊನ್ನಾಳಿ ಡಿ.ಸಿ.ಸಿ ಬ್ಯಾಂಕಿನ ಮಾಜಿ ನಿರ್ದೇಶಕರಾದ ಡಿ.ಎಸ್ ಸುರೇಂದ್ರರವರು ಮಾತನಾಡಿ ಆಶಾಕಾರ್ಯಕರ್ತಯರುಗಳಿಗೆ ಮತ್ತು ಪೋಲಿಸ್ ನವರಿಗೆ, ವೈದ್ಯರಿಗೆ, ದಾದಿಯರಿಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಪರವಾಗಿ ಅವರುಗಳಿಗೆ ಧನ್ಯಾವಾದಗಳನ್ನು ತಿಳಿಸಿದರು. ನಂತರ ಮಾತನಾಡಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಕೊರೋನಾ ಇರುವುದರಿಂದ ಮನೆಯಿಂದ ಯಾರು ಬರಬಾರದೆಂದು ಆದೇಶ ಇರುವ ಹಿನ್ನಲೆಯಲ್ಲಿ ನಮ್ಮ ತಂದೆಯವರಾದ ಡಿ.ಜಿ ಶಾಂತನಗೌಡ್ರು, ಮತ್ತು ನಮ್ಮ ಕುಟುಂಬದಲ್ಲಿ ಚಿಕ್ಕ ಮಕ್ಕಳು ಇರುವ ಕಾರಣ ನಾವು ಯಾರು ಕೂಡ ಹೊರಗೆ ಬರಲಿಲ್ಲ ಇದನ್ನು ಯಾರು ಕೂಡ ಅನ್ಯತ ಬಾವಿಸ ಬಾರದು ಎಂದರು.
ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರು ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಆಶಾಕಾರ್ಯಕರ್ತೆಯರಿಗೆ ವಯಕ್ತಿಕವಾಗಿ ಪ್ರತಿಯೊಬ್ಬರಿಗೆ 500 ರೂಗಳಂತೆ 237 ಆಶಾಕಾರ್ಯಕರ್ತೆಯರಿಗೆ ಕೊಯಾಡಿನೇಟರ್ ಮೂಲಕ ಚೆಕ್ ಕೊಡುತ್ತಾರೆ ಎಂದು ಡಿ.ಎಸ್ ಸುರೇಂದ್ರರವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿ;- ಶಾಸಕ ಎಂ.ಪಿ ರೇಣುಕಚಾರ್ಯ,ಸಿ.ಹಿ.ಒ ಪದ್ಮ ಬಸವಂತಪ್ಪ, ಎ.ಸಿ ಮಮತಾ ಹೊಸ ಗೌಡ್ರ್, ದಂಡಾಧಿಕಾರಿಗಳಾದ ತುಷಾರ್ ಬಿ ಹೊಸುರಾ, ಶ್ರೀಮತಿ ತನುಜಾ ಮೇಡಂ, ಡಿ.ಎಸ್ ಸುರೇಂದ್ರ ಮಾಜಿ ಡಿ.ಸಿ.ಸಿ ನಿರ್ದೇಶಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ದೀಪಾ ಜಗದೀಶ್, ಡಿ.ಸಿ.ಸಿ ನಿರ್ದೇಶಕರಾದ ಕೆ. ಷಣ್ಮುಕಪ್ಪ, ಹನುಮನಳ್ಳಿ ಬಸವರಾಜಪ್ಪ, ಸಹಕಾರ ಸಂಘದ ಕಾರ್ಯದರ್ಶೀಗಳು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರುಗಳು ಮತ್ತು ಆಶಾಕರ್ಯಕರ್ತರುಗಳು ಸಹ ಭಾಗಿಯಾಗಿದ್ದರು.