ದಾವಣಗೆರೆ ಜೂ.23 
     ದಾವಣಗೆರೆ ಜಿಲ್ಲೆಯಲ್ಲಿ ಇಂದು 2 ಕೊರೊನಾ ಪಾಸಿಟಿವ್
ಪ್ರಕರಣಗಳು ವರದಿಯಾಗಿದ್ದು, 06 ಜನರು ಕೋವಿಡ್‍ನಿಂದ
ಸಂಪೂರ್ಣರಾಗಿ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್
ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.  
  ರೋಗಿ ಸಂಖ್ಯೆ-9420 34 ವರ್ಷದ ಪುರುಷ ಆವರಗೆರೆಗೆ
ಸಂಬಂಧಿಸಿದ್ದು ಇವರ 8 ಪ್ರಾಥಮಿಕ ಸಂಪರ್ಕಿತರ ಸ್ವಾಬ್
ಸಂಗ್ರಹಿಸಲಾಗಿದೆ. ರೋಗಿ ಸಂಖ್ಯೆ-9421 68 ವರ್ಷದ ವೃದ್ಧ ಇವರು
ಮಹಾರಾಜಪೇಟೆಗೆ ಸಂಬಂಧಿಸಿದ್ದು ಇವರ 12 ಜನ ಪ್ರಾಥಮಿಕ
ಸಂಪರ್ಕಿತರ ಸ್ವಾಬ್ ಸಂಗ್ರಹ ಮಾಡಲಾಗಿದೆ. ಇವರಿಬ್ಬರೂ ಎಸ್‍ಎಆರ್‍ಐ
(ತೀವ್ರ ಉಸಿರಾಟದ ತೊಂದರೆ) ಕೇಸ್ ಹಿನ್ನೆಲೆ ಹೊಂದಿದವರಾಗಿದ್ದಾರೆ.
ರೋಗಿ ಸಂಖ್ಯೆಗಳಾದ-7804, 7805, 8066, 8067, 8068, 8069
ಇವರೆಲ್ಲರೂ ಗುಣಮುಖರಾಗಿದ್ದು ಜಲ್ಲಾ ನಿಗದಿತ ಕೋವಿಡ್
ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 267
ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 226 ಜನರು ಸಂಪೂರ್ಣ
ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 07 ಸಾವು
ಸಂಭವಿಸಿದ್ದು, ಪ್ರಸ್ತುತ 34 ಸಕ್ರಿಯ ಪ್ರಕರಗಣಗಳು ಇವೆ.
06 ಪಾಸಿಟಿವ್ ಪ್ರಕರಣ ಬಂದಿದ್ದವರ ವರದಿ ನೆಗೆಟಿವ್ : ಜೂನ್ 18 ರಂದು
ದೊಡ್ಡಬಾತಿ, ಶ್ಯಾಗಲೆ, ಬಸವನಹಳ್ಳಿ, ಮಾದನಬಾವಿಗೆ ಸಂಬಂಧಿಸಿದ
7804, 7805, 8066, 8067, 8068, 8069 ಇವರ ಗಂಟಲುದ್ರವ
ಮಾದರಿಯನ್ನು ನಗರದ ಖಾಸಗಿ ಲ್ಯಾಬ್‍ಗೆ ಪರೀಕ್ಷೆ ಕಳುಹಿಸಿದಾಗ
ಪಾಸಿಟಿವ್ ಎಂದು ವರದಿ ಬಂದಿತ್ತು. ಆದರೆ ಇವರು ಯಾವುದೇ
ಕಂಟೈನ್‍ಮೆಂಟ್ ಝೋನ್ ಅಥವಾ ಸೋಂಕಿತರ ಸಂಪರ್ಕಕ್ಕೆ
ಬಾರದೇ ಇರುವುದು ಗಮನಕ್ಕೆ ಬಂದ ಕಾರಣ ಇವರ
ಗಂಟಲುದ್ರವ ಮಾದರಿಯನ್ನು ಮತ್ತೊಮ್ಮೆ ಜೂನ್ 20 ರಂದು
ಮತ್ತೊಂದು ಖಾಸಗಿ ಲ್ಯಾಬ್‍ಗೆ ಕಳುಹಿಸಿದಾಗ ನೆಗೆಟಿವ್ ಎಂದು ವರದಿ
ಬಂದಿದೆ. ಇದನ್ನು ಮತ್ತೊಮ್ಮೆ ದೃಢಪಡಿಸಲು ಬೆಂಗಳೂರಿನ

ಲ್ಯಾಬ್‍ಗೆ ಕಳುಹಿಸದಾಗಲೂ ನೆಗೆಟಿವ್ ಎಂದು ಬಂದ ಕಾರಣ ಈ
ವಿಷಯವನ್ನು ಸರ್ಕಾರಕ್ಕೆ ತಿಳಿಸಿ ನಿಯಮಾನುಸಾರ ಇಂದು
ಆಸ್ಪತ್ರೆಯಿಂದ ಇವರನ್ನು ಬಿಡುಗಡೆಗೊಳಿಸಲಾಗಿದೆ. ಹಾಗೂ
ದೊಡ್ಡಬಾತಿ, ಶ್ಯಾಗಲೆ, ಬಸವನಹಳ್ಳಿ, ಮಾದನಬಾವಿ
ಗ್ರಾಮಗಳನ್ನು ಡಿನೋಟಿಫೈ ಮಾಡಲಾಗುತ್ತಿದೆ.
ಈ ಆರು ಜನರಲ್ಲ್ಲಿ ಇಬ್ಬರು ಐಎಲ್‍ಐ ಹಿನ್ನೆಲೆ ಮತ್ತು 4 ಜನರು
ಗರ್ಭಿಣಿಯರು ಇದ್ದು ಇವರೆಲ್ಲರ ವರದಿ ನೆಗೆಟಿವ್ ಬಂದಿದೆ.
ಆದರೂ ಮುಂಜಾಗ್ರತಾ ಕ್ರಮವಾಗಿ 2 ವಾರಗಳ ಕಾಲ ಹೋಂ
ಕ್ವಾರಂಟೈನ್ ಆಗಲು ತಿಳಿಸಲಾಗಿದೆ. ಜೊತೆಗೆ ಮತ್ತೊಮ್ಮೆ ಇವರ
ಸ್ವಾಬ್ ಪರೀಕ್ಷೆ ಮಾಡಲಾಗುವುದು ಎಂದರು. ಕೊರೊನಾ ಪರೀಕ್ಷೆ
ಮಾಡುವ ಕಿಟ್ಸ್‍ಗಳ ಸಮಸ್ಯೆ ಅಥವಾ ಕಂಟಾಮಿನೇಟ್ ಆದ
ಕಾರಣಕ್ಕೆ ತಪ್ಪು ವರದಿ ಬಂದಿರಬಹುದು. ಆ ಖಾಸಗಿ ಆಸ್ಪತ್ರೆಗೆ ಈ
ಬಗ್ಗೆ ವರದಿ ನೀಡುವಂತೆ ಪತ್ರ ಬರೆಯಲಾಗಿದೆ ಎಂದರು.
ಫ್ರಂಟ್‍ಲೈನ್ ವರ್ಕರ್ಸ್ ಆತಂಕಪಡುವ ಅವಶ್ಯಕತೆ ಇಲ್ಲ :
ಕೋವಿಡ್ ಹಿನ್ನೆಲೆಯಲ್ಲಿ ಫ್ರಂಟ್‍ಲೈನ್ ವರ್ಕರ್‍ಗಳಾದ
ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಪೊಲೀಸರು
ಸೇರಿದಂತೆ ಕೋವಿಡ್ ವಾರಿಯರ್ಸ್ ತಮಗೆಲ್ಲಿ ಕೊರೊನಾ ಸೋಂಕು
ತಗಲೀತೆಂದು ಭಯ ಪಡುವ, ಆತಂಕ್ಕೀಡಾಗಿ ಏನಾದರೂ
ಅವಘಡಕ್ಕೆ ಒಳಗಾಗಬಾರದು. ಎಂತೆಂತಹ ಗಂಭೀರ
ಆರೋಗ್ಯ ಸಮಸ್ಯೆವುಳ್ಳ ಕೊರೊನಾ ಸೋಂಕಿತರನ್ನು
ಗುಣಪಡಿಸಿ ಆಸ್ಪತೆಯಿಂದ ಬಿಡುಗಡೆಗೊಳಿಸಲಾಗಿದೆ. ಆದ್ದರಿಂದ
ಯಾರೂ ಭಯಪಡುವ ಅವಶ್ಯಕತೆ ಇಲ್ಲವೆಂದು ಅಭಯ
ನೀಡಿದರು.
ಕೊರೊನಾ ಚಿಕಿತ್ಸೆಗೆ ಜಿಲ್ಲೆಯಲ್ಲಿ 5122 ಬೆಡ್ ಸಿದ್ದ : ಕೊರೊನಾವನ್ನು
ಎದುರಿಸಲು ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು
ಸೇರಿದಂತೆ ಒಟ್ಟು 5122 ಕೋವಿಡ್ ಬೆಡ್‍ಗಳನ್ನು
ಸಿದ್ದಪಡಿಸಿಕೊಳ್ಳಲಾಗಿದ್ದು, ಯಾರೂ ಆತಂಕ್ಕೀಡಾಗುವ
ಅವಶ್ಯಕತೆ ಇಲ್ಲ. ಸಾಮಾಜಿಕ ಅಂತರ, ವೈಯಕ್ತಿಕ ಎಚ್ಚರಿಕೆಯಿಂದ
ಇರಬೇಕೆಂದರು
ದುರ್ಬಲ ವರ್ಗದವರು, ಸ್ಲಂ, ಕೆಪಿಎಂಇ ಕಾಯ್ದೆಯಡಿ ಖಾಸಗಿ
ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್‍ಗಳಲ್ಲಿ ಔಷಧಿಗಳನ್ನು
ತೆಗೆದುಕೊಂಡವರ ಸ್ಯಾಂಪಲ್‍ಗಳು ಸೇರಿದಂತೆ ಇಂದು ಒಟ್ಟು
1075 ಜನರ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ತಾಲ್ಲೂಕುಗಳಲ್ಲೂ ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ
ಕಳುಹಿಸಲಾಗುತ್ತಿದೆ.
ಪತ್ರಿಕಾಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ
ವೀರಮಲ್ಲಪ್ಪ, ಡಿಹೆಚ್‍ಓ ಡಾ.ರಾಘವೇಂದ್ರ, ಡಿಎಸ್‍ಓ ಡಾ.ರಾಘವನ್
ಇದ್ದರು.

Leave a Reply

Your email address will not be published. Required fields are marked *