ದಾವಣಗೆರೆ ಜೂ.23
ದಾವಣಗೆರೆ ಜಿಲ್ಲೆಯಲ್ಲಿ 79 ಮುಖ್ಯ ಪರೀಕ್ಷಾ ಕೇಂದ್ರಗಳು
ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವವ ದೃಷ್ಟಿಯಿಂದ
ಹೆಚ್ಚುವರಿಯಾಗಿ 14 ಪರೀಕ್ಷಾ ಕೇಂದ್ರಗಳನ್ನು
ಮಾಡಿಕೊಳ್ಳಲಾಗಿದೆ. ಒಟ್ಟು 93 ಪರೀಕ್ಷಾ ಕೇಂದ್ರಗಳು.
ಜಿಲ್ಲೆಯಲ್ಲಿ ಒಟ್ಟು 21683 ವಿದ್ಯಾರ್ಥಿಗಳು ಪರೀಕ್ಷೆಯನ್ನು
ಬರೆಯುತ್ತಿದ್ದಾರೆ. ಒಟ್ಟು ಕೊಠಡಿಗಳ ಸಂಕ್ಯೆ 1242. ಈ ಎಲ್ಲಾ
ಕೊಠಡಿಗಳು ಹಾಗೂ ಹೆಚ್ಚು ಸಂಪರ್ಕಕ್ಕೆ ಒಳಪಡುವ
ಪೀಠೋಪಕರಣಗಳನ್ನು ಒಟ್ಟು 7 ಬಾರಿ ಪರೀಕ್ಷೆಗೆ ಮೊದಲು
ಹಾಗೂ ಪರೀಕ್ಷಾ ದಿನಾಂಕಗಳಂದು ಜೂ. 25, 27, 29 ಹಾಗೂ ಜುಲೈ 1,
2, 3 ರಂದು ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲು
ಕ್ರಮವಹಿಸಲಾಗಿದೆ.
ಸ್ಯಾನಿಟೈಸರ್ ವ್ಯವಸ್ಥೆ ಬಗ್ಗೆ: ಮಂಡಳಿಯಿಂದ ಈಗಾಗಲೇ
ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ 3 ಲೀಟರ್‍ನ ಬಾಟಲ್‍ಗಳನ್ನು
ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸರಬರಾಜು
ಮಾಡಲಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳವರ ಆದೇಶದಂತೆ
ಜಿಲ್ಲಾ ಆರೋಗ್ಯಾಧಿಕಾರಿಗಳವರಿಂದ ಜಿಲ್ಲೆಯ ಎಲ್ಲಾ ಪರೀಕ್ಷಾ
ಕೇಂದ್ರಗಳಿಗೆ 100 ಎಂ.ಎಲ್‍ಗಳ 1500 ಬಾಟಲ್‍ಗಳನ್ನು
ಸರಬರಾಜು ಮಾಡಿರುತ್ತಾರೆ.
ಧರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಬಗ್ಗೆ: ಥರ್ಮಲ್
ಸ್ಕ್ಯಾನರ್‍ಗಳನ್ನು 200 ಮಕ್ಕಳಿಗೆ ಒಂದರಂತೆ
ಮಂಡಳಿಯಿಂದ ಪೂರೈಸಲಾಗಿದೆ. ಈಗಾಗಲೇ ಪರೀಕ್ಷಾ
ಕೇಂದ್ರಗಳಿಗೆ ವಿತರಿಸಲಾಗಿದೆ. ಹೆಚ್ಚುವರಿ 14 ಬ್ಲಾಕ್
ಕೇಂದ್ರಗಳಿಗೆ ವೈದ್ಯಾಧಿಕಾರಿಗಳಿಂದ/ಆರೋಗ್ಯ
ಇಲಾಖೆಯಿಂದ ಸರಬರಾಜು ಮಾಡಲಾಗಿದೆ.
ಮಾಸ್ಕ್ ವಿತರಣೆ ಬಗ್ಗೆ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ
ಸಂಸ್ಥೆ, ದಾವಣಗೆರೆ ವತಿಯಿಂದ ಪ್ರತಿ ವಿದ್ಯಾರ್ಥಿಗೆ ಒಂದರಂತೆ
ಒಟ್ಟು 22,000 ಮಾಸ್ಕ್‍ಗಳನ್ನು ವಿತರಿಸಲಾಘಿದೆ. ತಾಲ್ಲೂಕುವಾರು
ತಹಶೀಲ್ದಾರ್ ಮತ್ತು ದಾನಿಗಳು ಉಚಿತವಾಗಿ ವಿದ್ಯಾರ್ಥಿಗಳಿಗೆ
ಹಾಗೂ ಸಿಬ್ಬಂದಿಗೆ ನೀಡಿರುತ್ತಾರೆ. ಒಟ್ಟು 30,000 ಮಾಸ್ಕ್‍ಗಳನ್ನು
ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ವಿತರಿಸಲಾಗಿದೆ.
ಕಂಟೈನ್‍ಮೆಂಟ್ ಜೋನ್‍ಗಳಿಂದಬಂದಂತಹ 96 ಮಕ್ಕಳಿಗೆ
ಆರೋಗ್ಯ ಇಲಾಖೆಯಿಒಂದ ಈಗಾಗಲೇ 90 ಎನ್-95
ಮಾಸ್ಕ್‍ಗಳನ್ನು ವಿತರಿಸಲಾಗಿದೆ.
ಆರೋಗ್ಯ ತಪಾಸಣಾ ಕೌಂಟರ್ ವ್ಯವಸ್ಥೆ: 200 ವಿದ್ಯಾರ್ಥಿಗಳಿಗೆ
ಒಂದರಂತೆ ಆರೋಗ್ಯ ತಪಾಸಣಾ ಕೌಂಟರ್ ತೆರೆಯಲಾಗಿದ್ದು,
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಿದ ಕೂಡಲೇ
ಆರೋಗ್ಯ ತಪಾಸಣಾ ಕೌಂಟರ್‍ನಲ್ಲಿ ತಪಾಸಣೆಗೆ ಒಳಪಟ್ಟ
ನಂತರ ನಿಗಧಿಪಡಿಸಿದ ಕೊಠಡಿಯೊಳಗೆ
ಕುಳಿತುಕೊಳ್ಳಲು ಲೌಡ್‍ಸ್ಪೀಕರ್ ಹಾಗೂ ಸ್ವಯಂ
ಸೇವಕರ ಮೂಲಕ ಸೂಚನೆ ನೀಡಲು
ಕ್ರಮಕೈಗೊಳ್ಳಲಾಗಿದೆ. ಒಂದು ವೇಳೆ ಮಳೆ
ಪ್ರಾರಂಭವಾದಲ್ಲಿ ಪರ್ಯಾಯವಾಗಿ ಪ್ರವೇಶ ದ್ವಾರಕ್ಕೆ
ಹತ್ತಿರವಿರುವ ಒಂದು ಹೆಚ್ಚುವರಿ ಕೊಠಡಿಯನ್ನು
ಆರೋಗ್ಯ ತಪಾಸಣಾ ಕೌಂಟರ್‍ಗಾಗಿ ಮೀಸಲಿಡಲಾಗಿದೆ.
ಸಾರಿಗೆ ವ್ಯವಸ್ಥೆ: ಪರೀಕ್ಷೆಗೆ ಹಾಜರಾಗುವಂತಹ ಎಲ್ಲಾ
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ಬಗ್ಗೆ ಶಾಲಾ
ಮುಖ್ಯ ಶಿಕ್ಷಕರುಗಳು ಪೋಷಕರಿಗೆ ದೂರವಾಣಿ
ಮೂಲಕ ಮಾಹಿತಿಯನ್ನು ಸಂಗ್ರಹಿಸಿದ್ದು, ಅದರಂತೆ
ಕಾಲ್ನಡಿಗೆ ಮೂಲಕ 6174 ಮಕ್ಕಳು, ಪೋಷಕರ
ಸಹಾಯದಿಂದ 12345 ಮಕ್ಕಳು, ಕೆಎಸ್‍ಆರ್‍ಟಿಸಿ ಬಸ್ ಮೂಲಕ 408,
ಖಾಸಗಿ ಶಾಲಾ ವಾಹನಗಳ ವ್ಯವಸ್ಥೆ ಮೂಲಕ 335, ಹಾಸ್ಟೆಲ್‍ನಲ್ಲಿ
ತಂಗಿ ಪರೀಕ್ಷೆ ಬರೆಯುವ ಮಕ್ಕಳು 674 ಹಾಗೂ ವ್ಯಾಸಂಗ
ಮಾಡುತ್ತಿರುವ ಶಾಲಾ ವಾಹನಗಳ ಮೂಲಕ 1747
ಮಕ್ಕಳು ಪರೀಕ್ಷೆಗೆ ಹಾಜರಾಗುತ್ತಾರೆ. ಒಟ್ಟು 21683
ವಿದ್ಯಾರ್ಥಿಗಳು ಕೆಎಸ್‍ಆರ್‍ಟಿಸಿ ಹೊನ್ನಾಳಿ ಡಿಪೋ 07 ಬಸ್, ದಾವಣಗೆರೆ
ಡಿಪೋ 09 ಬಸ್‍ಗಳುಯ, 70 ಖಾಸಗಿ ಬಸ್‍ಗಳ ಸಂಖ್ಯೆ 86 ಹಾಗೂ
ಒಟ್ಟು 82 ಮಾರ್ಗಗಳ ವ್ಯವಸ್ಥೆ ಮಾಡಲಾಗಿದೆ.
ಇತರೆ ಇಲಾಖೆಯ ಅಧಿಕಾರಿಗಳನ್ನು ವೀಕ್ಷಕರಾಗಿ
ನೇಮಕ ಮಾಡುವ ಬಗ್ಗೆ: ಈಗಾಗಲೇ ರೊಟೇಷನ್
ಪದ್ದತಿಯಲ್ಲಿ ಇತರೆ ಇಲಾಖೆಯ ಜಿಲ್ಲಾ ಹಗೂ ತಾಲ್ಲೂಕು
ಮಟ್ಟದ ಅಧಿಕಾರಿಗಳನ್ನು 93 ಕೇಂದ್ರಗಳಿಗೆ
ವೀಕ್ಷಕರನ್ನು ನೇಮಿಸಲಾಗಿದ್ದದು, ಮಾನ್ಯ ಅಧಿಕಾರಿಗಳಿಗೆ
ಆದೇಶಗಳನ್ನು ತಲುಪಿಸಲಾಗಿದೆ.
ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಸಿಬ್ಬಂದಿಗೆ
ಕರಪತ್ರಗಳನ್ನುಹಾಗೂ ಪರೀಕ್ಷಾ ಕೇಂದ್ರಗಳಿಗೆ
ಪೋಸ್ಟರ್‍ಗಳನ್ನು ಮುದ್ರಿಸಿ ಈಗಾಗಲೇ ವಿತರಿಸಲಾಗಿದೆ.
ಮಂಡಳಿಯಿಂದ ಆದೇಶದನ್ವಯ ಪ್ರತಿ ಪರೀಕ್ಷಾ
ಕೇಂದ್ರಗಳಿಗೆ 5 ಜನ ದೈಹಿಕ ಶಿಕ್ಷಣ ಶಿಕ್ಷಕರನ್ನು
ನಿಯೋಜಿಸಲಾಗಿದೆ. ಇವರು ನಿರ್ವಹಿಸಬೇಕಾದ ಕರ್ತವ್ಯಗಳ
ಬಗ್ಗೆ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ತಾಲ್ಲೂಕುವಾರು
ಸಭೆ ಕರೆದು ಮಾಹಿತಿ ನೀಡಲಾಗಿದೆ.
ಮಂಡಳಿಯ ಎಸ್‍ಒಪಿ ಅನುಪಾಲನೆಯ ಬಗ್ಗೆ ಈಗಾಗಲೇ ಎಲ್ಲಾ
ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಸಭೆ
ಕರೆದು ಮಾರ್ಗಸೂಚಿಗಳನ್ನು ನೀಡಲಾಗಿದೆ.
ಪೊಲೀಸ್ ಸಿಬ್ಬಂದಿ/ಹೋಮ್ ಗಾರ್ಡ್ ನಿಯೋಜನೆ: ಜಿಲ್ಲೆಯಲ್ಲಿನ
ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ 2 ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ
ಹೋಮ್ ಗಾರ್ಡ್ (2+1)ನ್ನು ಸಿಬ್ಬಂದಿಯನ್ನು ನಿಯೋಜಿಸಲು
ಕ್ರಮವಹಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಸಿಬ್ಬಂದಿಗಳು
ಬೆಳಿಗ್ಗೆ 7.30 ರೊಳಗಾಗಿ ಹಾಜರಿರಲು ಕ್ರಮವಹಿಸಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಸಹಾಯಕರನ್ನು
ನೇಮಿಸುವ ಬಗ್ಗೆ: ಒಟ್ಟು 93 ಪರೀಕ್ಷಾ ಕೇಂದ್ರಗಳು ಇದ್ದು,
ಸದರಿ ಪರೀಕ್ಷಾ ಕೇಂದ್ರಗಳಿಗೆ ಒಬ್ಬ ಆರೋಗ್ಯ
ಸಹಾಯಕರನ್ನು ಹಾಗೂ ಒಬ್ಬರು ಆಶಾ
ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ನಿಯೋಜಿತ
ಆದೇಶಗಳು ಈಗಾಗಲೇ ಕೇಂದ್ರಗಳಿಗೆ ತಲುಪಿರುತ್ತದೆ.
ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಸಹಾಯಕರು ಬೆಳಿಗ್ಗೆ
7.30 ರೊಳಗಾಗಿ ಹಾಜರಿರಲು ಕ್ರಮವಹಿಸಲಾಗಿದೆ.
ಸ್ಕೌಟ್ಸ್ ಅಂಡ್ ಗೈಡ್ಸ್‍ನಿಂದ ಸ್ವಯಂಸೇವಕರನ್ನು
ನಿಯೋಜಿಸುವ ಬಗ್ಗೆ: ಸ್ಕೌಟ್ಸ್ ಅಂಡ್ ಗೈಡ್‍ನಿಂದ
ಸ್ವಯಂಸೇವಕರನ್ನು 93+2=186 ಪರೀಕ್ಷಾ ಕೇಂದ್ರಗಳಿಗೆ
ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಸ್ಕೌಟ್ಸ್ ಅಂಡ್
ಗೈಡ್ಸ್‍ನಿಂದ ಸಹಾಯಕರು ಬೆಳಿಗ್ಗೆ 7.30 ರೊಳಗಾಗಿ
ಹಾಜರಿರಲು ಕ್ರಮವಹಿಸಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳವ ಬಗ್ಗೆ: ಎಸ್‍ಒಪಿ
ಅನ್ವಯ ಪರೀಕ್ಷಾ ಕೇಂದ್ರಗಳ ಸಾಮಾನ್ಯ ಮತ್ತು
ವಿಶೇಷ ಕೊಠಡಿಗಳಲಿ ಸಾಮಾಜಿಕ ಅಂತರ
ಕಾಯ್ದುಕೊಳ್ಳುವಂತೆ ಆಸನ ವ್ಯವಸ್ಥೆ ಮಾಡಲಾಗಿದೆ.
ಮುಂಚಿತವಾಗಿಯೇ ವಿದ್ಯಾರ್ಥಿಗಳಿಗ ಕೊಠಡಿ
ಸಂಖ್ಯೆಗಳನ್ನು ತಿಳಿಸಿರುವುದರಿಂದ ವಿದ್ಯಾರ್ಥಿಗಳಾಗಲಿ,
ಪೋಷಕರಾಗಲೀ ಗುಂಪುಗೂಡುವುದನ್ನು
ತಡೆಯಲಾಗುವುದು. ಪರೀಕ್ಷಾ ಕೇಂದ್ರದ 200 ಮೀ
ದೂರದಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ವಾಹನದಟ್ಟಣೆ ಹಾಗೂ
ಜನದಟ್ಟಣೆಯನ್ನು ನಿಯಂತ್ರಿಸಲು
ಕ್ರಮಕೈಗೊಳ್ಳಲಾಗಿದೆ. ಜೊತೆಗೆ ಪರೀಕ್ಷಾ
ಕೇಂದ್ರಗಳಲ್ಲಿ ಲೌಡ್‍ಸ್ಪೀಕರ್ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳಿಗೆ
ತೆರಳುವ ಮಾರ್ಗಗಳನ್ನು ಸೂಚಿಸಲು ಕ್ರಮ
ಕೈಗೊಳ್ಳಲಾಗಿದೆ.
ಪರೀಕ್ಷಾ ಕೇಂದ್ರದ 200 ಮೀ ಸುತ್ತ 144 ಸೆಕ್ಷನ್
ನಿಷೇದಾಜ್ಞೆ ಜಾರಿಗೊಳಿಸುವುದು ಹಾಗೂ ಜೆರಾಕ್ಸ್, ಸೈಬರ್ ಕೆಫೆ
ಹಾಗೂ ಕಂಪ್ಯೂಟರ್ ಸೆಂಟರ್‍ಗಳನ್ನು ಮುಚ್ಚಿಸಲು
ಕ್ರಮವಹಿಸಲಾಗಿದೆ.
ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ಹಾಗೂ
ಅವಶ್ಯವಿದ್ದಲ್ಲಿ ಊಟದ ಡಬ್ಬಿ, ಬ್ಯಾಗ್‍ಗಳಿಗೆ ನೋಂದಣಿ
ಸಂಖ್ಯೆಯನ್ನು ನಮೂದಿಸಿ ಹಾಗೂ ಛತ್ರಿಯನ್ನು (ಕೊಡೆ)
ತರಲು ಸೂಚಿಸಲಾಗಿದೆ ಹಾಗೂ ಪರೀಕ್ಷಾ ಕೇಂದ್ರದಲ್ಲಿ ಶುದ್ಧ
ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.
ಕಾಯ್ದಿರಿಸಿದ ಪರೀಕ್ಷಾ ಕೆಂದ್ರಗಳ ವ್ಯವವಸ್ಥೆ
ಬಗ್ಗೆ: ಜಿಲ್ಲೆಯಲ್ಲಿ ಒಟ್ಟು 12 ಹೆಚ್ಚುವರಿ ಕಾಯ್ದಿರಿಸಿದ ಪರೀಕ್ಷಾ
ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಸಂಬಂಧಿಸಿದ ಪೂರಕ
ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗಿದೆ.
ಕಂಟೈನ್‍ಮೆಂಟ್ ವಲಯಗಳಿಂದ ಬರುವಂತಹ 96
ವಿದ್ಯಾರ್ಥಿಗಳಿಗೆ ಎನ್-95 ಮಾಸ್ಕ್ ವಿತರಣೆ ಹಾಗೂ ವಿಶೇಷ
ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಕ್ರಮ
ಕೈಗೊಳ್ಳಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ, ಉತ್ತರ
ಪತ್ರಿಕೆಗಳನ್ನು ತಲುಪಿಸಲು 33 ಮಾರ್ಗಗಳನ್ನು
ಮಾಡಲಾಗಿದ್ದು, ಅದರಂತೆ ಪ್ರಶ್ನೆ ಪತ್ರಿಕೆ
ಬಂಡಲ್‍ಗಳನ್ನು ಸಾಗಾಣಿಕೆಗೆ ಸೂಕ್ತ ಭದ್ರತೆ ಒದಗಿಸಲು
ಕ್ರಮ ಕೈಗೊಳ್ಳಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಇರುವುದರಿಂದ ಪರೀಕ್ಷಾ
ದಿನಗಳಂದು ವಿದ್ಯುತ್‍ನ್ನು ಕಡಿತಗೊಳಿಸದಂತೆ
ಬೆಸ್ಕಾಂನವರಿಗೆ ಮನವಿ ಸಲ್ಲಿಸಲಾಗಿದೆ.
ಮಂಡಳಿಯಿಂದ ಸರಬರಾಜಾದ ವಲಸೆ ವಿದ್ಯಾರ್ಥಿಗಳ ಪ್ರಶ್ನೆ
ಪತ್ರಿಕೆಗಳನ್ನು ಆಯಾ ತಾಲ್ಲೂಕುಗಳ ಖಜಾನೆಗಳಲ್ಲಿ
ಸಂರಕ್ಷಿಸಲಾಗಿದೆ.
ಪರೀಕ್ಷಾ ಕೇಂದ್ರಗಳ ಮೂಲಭೂತ ಸೌಲಭ್ಯಗಳ
ಬಗ್ಗೆ: ಈಗಾಗಲೇ ಪರೀಕ್ಷಾ ಕೆಂದ್ರಗಳ ಮೂಲಭೂತ
ಸೌಕರ್ಯದ ಬಗ್ಗೆ ಚೆಕ್-ಲಿಸ್ಟ್ ಪ್ರಕಾರ ಪರಿಶೀಲಿಸಿ ದೃಢೀಕರಣ
ಪಡೆಯಲಾಗಿದೆ ಎಂದು ಡಿಡಿಪಿಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.