ದಾವಣಗೆರೆ ಜಿಲ್ಲೆ ಜೂ 24 ಹೊನ್ನಾಳಿ ತಾಲೂಕಿನಲ್ಲಿ ನಾಳೆ ನಡೆಯುವ 25/6/2020 ರಂದು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿಕ್ಕೆ ತಯಾರಿಯಾಗಿರುವ ಎಲ್ಲಾ ಮಕ್ಕಳಿಗೆ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರು ಶುಭಾಷಯವನ್ನು ಕೋರಿದ್ದಾರೆ.
ನಂತರ ಮಾತನಾಡಿದ ಅವರು 10ನೇ ತರಗತಿಯ ಮಕ್ಕಳು ಪರೀಕ್ಷೆಯನ್ನು ಧೈರ್ಯದಿಂದ ಬರೆಯಬೇಕು, ಆದರೆ ಕೊರೋನಾ ವೈರಸ್ ಇರುವ ಕಾರಣ ಮಾಸ್ಕ್ ಮತ್ತು ಸ್ಯಾನಿಟೈಸರನ್ನು ಪ್ರತಿಯೊಬ್ಬರು ಬಳಸಿ ಅಂತರವನ್ನು ಕಾಯ್ದುಕೊಂಡು ಭಯಬೇಡ ಎಚ್ಚರ ಇರಲಿ ಎಂದು ಹೇಳುತ್ತ ಧೈರ್ಯದಿಂದ ಪರೀಕ್ಷೆಯನ್ನು ಬರೆಯಬೇಕೆಂದು ತಿಳಿಸಿದರು.