ದಾವಣಗೆರೆ ಜೂ.24
2020-21ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಡಿ
ತಾಡಪಾಲು ವಿತರಣೆ ಕಾರ್ಯಕ್ರಮದಡಿ ದಾವಣಗೆರೆ ತಾಲ್ಲೂಕಿನ
ಕಸಬಾ ರೈತ ಸಂಪರ್ಕ ಕೇಂದ್ರದಿಂದ 750 ಸಂಖ್ಯೆ, ಆನಗೋಡು
ರೈತ ಸಂಪರ್ಕ ಕೇಂದ್ರದಿಂದ 590 ಸಂಖ್ಯೆ ಮತ್ತು
ಮಾಯಕೊಂಡ ರೈತ ಸಂಪರ್ಕ ಕೇಂದ್ರದಿಂದ 514 ಸಂಖ್ಯೆ
ತಾಡಪಾಲುಗಳನ್ನು ವಿತರಿಸಲಾಗುವುದು.
ಸಾಮಾನ್ಯ ವರ್ಗದ ರೈತರಿಗೆ ಒಂದುತಾಡಪಾಲಿಗೆ ಪರಿಕರ ಸೇರಿ
ರೂ.1200/-ಗಳ ದರದಲ್ಲಿ ವಿತರಿಸಲಾಗುವುದು. ಜೂ.25 ರಿಂದ ಜೂ.30
ರವರೆಗೆ ರೈತರುಗಳು ತಮ್ಮ ವ್ಯಾಪ್ತಿಯ ರೈತ ಸಂಪರ್ಕ
ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಜುಲೈ 04 ರಂದು
ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಲಾಟರಿ ಮೂಲಕ
ಫಲಾನುಭವಿಗಳನ್ನು ಆಯ್ಕೆ ಮಾಡಿ, ತಾಡಪಾಲುಗಳನ್ನು
ವಿತರಿಸಲಾಗುವುದು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು: ಪಹಣಿ, ಬ್ಯಾಂಕ್ ಪಾಸ್
ಪುಸ್ತಕದ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ನಕಲು ಪ್ರತಿ ಅಥವಾ
ಓಟರ್ ಐಡಿ ನಕಲು, ಫೋಟೋ ಸಲ್ಲಿಸಬೇಕೆಂದು ಕೃಷಿ ಇಲಾಖೆಯ
ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.