ದಾವಣಗೆರೆ ಜೂ.25
ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ
ಗುರುವಾರ ನಗರದಲ್ಲಿನ ಪರೀಕ್ಷಾ ಕೆಂದ್ರಗಳಿಗೆ ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಗೆ
ಶುಭಾಷಯ ಕೋರಿದರು. ಹಾಗೂ ಯಾವುದೇ ಗೊಂದಲಕ್ಕೆ
ಒಳಗಾಗದೇ ನಿರ್ಭೀತಿಯಿಂದ ಪರೀಕ್ಷೆ ಬರೆಯಿರಿ ಎಂದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಇಂದಿನಿಂದ ರಾಜ್ಯದೆಲ್ಲೆಡೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭವಾಗಿದ್ದು,
ಪ್ರಥಮ ಇಂಗ್ಲೀಷ್ ಪರೀಕ್ಷೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಒಟ್ಟು 93
ಪರೀಕ್ಷಾ ಕೇಂದ್ರಗಳಿವೆ. ಬೆಳಿಗ್ಗೆಯಿಂದ 5 ಕೇಂದ್ರಗಳಿಗೆ ಭೇಟಿ
ನೀಡಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಸಹ ಸಾಮಾಜಿಕ
ಅಂತರ ಕಾಪಾಡಿಕೊಂಡು ಒಂದು ಚೂರು ಗೊಂದಲ ಆಗದ
ರೀತಿಯಲ್ಲಿ ವಿದ್ಯಾರ್ಥಿಗಳನ್ನು ಒಳಗೆ ಕಳುಹಿಸಿ ಕೂರಿಸುವ
ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ಯಾನಿಟೈಸರ್
ಹಾಗೂ ಮಾಸ್ಕ್ ವಿತರಿಸಲಾಗಿದೆ. ವಿದ್ಯಾರ್ಥಿಗಳು ತುಂಬಾ ವಿಶ್ವಾಸ ಹಾಗೂ
ಧೈರ್ಯದಿಂದ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಹೇಳಿದರು.
ಕಂಟೈನ್‍ಮೆಂಟ್ ಜೋನ್‍ನಲ್ಲಿರುವ ವಿದ್ಯಾರ್ಥಿಗಳಿಗೆ ವಿಶೇಷ
ವ್ಯವಸ್ಥೆ ಮಾಡಲಾಗಿದೆ. ಅವರಿಗಾಗಿ ಪರೀಕ್ಷೆ ಬರೆಯಲು ಪ್ರತ್ಯೇಕ
ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಎನ್-95 ಮಾಸ್ಕ್
ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಆರಾಮದಾಯಕವಾಗಿ ಪರೀಕ್ಷೆ
ಬರೆಯಲು ಆತ್ಮವಿಶ್ವಾಸ ತುಂಬಲಾಗಿದೆ ಎಂದರು.
ವಿದ್ಯಾರ್ಥಿಗಳು ತಮ್ಮ ತಮ್ಮ ಪರೀಕ್ಷಾ ಕೇಂದ್ರÀಗಳನ್ನು
ತಲುಪಲು ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ
ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಕೂಲ್ ಮತ್ತು ಖಾಸಗಿಯ 70
ಬಸ್‍ಗಳು ಹಾಗೂ ಸರ್ಕಾರದ ಕೆಎಸ್‍ಆರ್‍ಟಿಸಿಯ 16 ಬಸ್‍ಗಳು ಸೇರಿ
ಒಟ್ಟು 86 ಬಸ್‍ಗಳ ಸೌಲಭ್ಯವನ್ನು ವ್ಯವಸ್ಥಿತವಾಗಿ ಒದಗಿಸಲಾಗಿದೆ.
ಜೊತೆಗೆ ಪರೀಕ್ಷೆ ಮುಗಿದ ನಂತರವೂ ವಿದ್ಯಾರ್ಥಿಗಳಿಗೆ
ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಪರೀಕ್ಷಾ ಕೇಂದ್ರದದ ಸುತ್ತ ಕಟ್ಟುನಿಟ್ಟಿನ ವ್ಯವಸ್ಥೆ
ಮಾಡಲಾಗಿದೆ. ಬಹಳಷ್ಟು ದೂರದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.
ಇದರಿಂದಾಗಿ ಯಾವುದೇ ಪಾಲಕರು ಹಾಗೂ ಬೇರೆ ಯಾರೂ ಸಹ
ಒಳಗೆ ಬರುವ ಮತ್ತು ಹೋಗುವಂತಹ ಗೊಂದಲ ಆಗಿಲ್ಲ. ಶಿಕ್ಷಣ
ಸಚಿವರ ಆಶಯದಂತೆ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ
ಅಹಿತಕರ ಘಟನೆ ಸಂಭವಿಸದಂತೆ ಬಹಳ ಯಶಸ್ವಿಯಾಗಿ ಎಸ್‍ಎಸ್‍ಎಲ್‍ಸಿ
ಪರೀಕ್ಷೆ ನಡೆಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.