ದಾವಣಗೆರೆ ಜೂ.26
    ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಕಾರ್ಯ
ನಿರ್ವಹಿಸುತ್ತಿರುವ ಎನ್‍ಜಿಒ ಸಂಸ್ಥೆಗಳಿಗೆ 2020-21ನೇ ಸಾಲಿನಲ್ಲಿ
ಕೇಂದ್ರ ಸರ್ಕಾರದ ಅನುದಾನ ಕೋರಿ ಎನ್‍ಜಿಒಗಳು ವೆಬ್‍ಸೈಟ್
ವಿಳಾಸ ತಿತಿತಿ.ಟಿgogಡಿಚಿಟಿಣsmoಣಚಿ.gov.iಟಿ/bo-ಟogiಟಿ ನಲ್ಲಿ ಪ್ರಸ್ತಾವನೆಗಳನ್ನು
ಸಲ್ಲಿಸಲು ನಿರ್ದೇಶನ ನೀಡಲಾಗಿದ್ದು, ಅದರಂತೆ ಆನ್‍ಲೈನ್ ಮೂಲಕ
ಅರ್ಜಿ ಸಲ್ಲಿಸಬಹುದಾಗಿದೆ.
    ಈಗಾಗಲೇ ನೋಂದಾಯಿಸಿರುವ ಸಂಸ್ಥೆಗಳು ಈ ವೆಬ್‍ಸೈಟ್
ವಿಳಾಸದಲ್ಲಿ ಅರ್ಜಿ ಸಲ್ಲಿಸಬಹುದು. ಹಾಗೂ ಹೊಸ ಎನ್‍ಜಿಒ ಸಂಸ್ಥೆಗಳು
ಹೊಸದಾಗಿ ಅನುದಾನ ಕೋರಿ ಪ್ರಸ್ತಾವನೆಗಳನ್ನು ಆನ್‍ಲೈನ್
ಮುಖಾಂತರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಇಚ್ಛಿಸಿದಲ್ಲಿ ಈ
ಎನ್‍ಜಿಒಗಳು ವೆಬ್‍ಸೈಟ್ ವಿಳಾಸ ತಿತಿತಿ.ಟಿgogಡಿಚಿಟಿಣsmoಣಚಿ.gov.iಟಿ/bo-ಟogiಟಿ ನಲ್ಲಿ
ನೋಂದಾಯಿಸಬಹುದು.
     ಎನ್‍ಜಿಒ ಸಂಸ್ಥೆಗಳು ಕೇಂದ್ರ ಸರ್ಕಾರದಿಂದ ಕಾಲಕಾಲಕ್ಕೆ
ಹೊರಡಿಸುವ ಮಾರ್ಗಸೂಚಿಯನ್ವಯ ಅರ್ಜಿ ಸಲ್ಲಿಸುವಂತೆ
ಕೋರಿದೆ. ಹೀಗೆ ನೋಂದಾಯಿಸಿದ ನಂತರ ಸಿಗುವ ಓಉಔ Useಡಿ
Iಆ ಯನ್ನು ಸಕ್ರಿಯಗೊಳಿಸಲು ಈ ಕಚೇರಿಯ ಮೂಲಕ
ಕೇಂದ್ರ ಕಚೇರಿಯ ಮೂಲಕ ಕೇಂದ್ರ ಕಚೇರಿಗೆ ಪತ್ರ
ಬರೆಯಲು ಪ್ರಸ್ತಾವನೆ ಸಲ್ಲಿಸುವುದು. ನಂತರ ಸದರಿ Useಡಿ
Iಆ ಯನ್ನು ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ
ನಿರ್ದೇಶನಾಲಯ, ಬೆಂಗಳೂರು ರವರು ಸಕ್ರಿಯಗೊಳಿಸಿದ
ನಂತರವಷ್ಟೇ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ವೀಕೃತವಾದ ಎನ್‍ಜಿಒ
ಅರ್ಜಿಗಳನ್ನು  ಆನ್‍ಲೈನ್ ಮೂಲಕ ಪರಿಶೀಲಿಸಿ ಜಿಲ್ಲಾಧಿಕಾರಿಗಳ
ಅನುಮೋದನೆ ಪಡೆದು ಆನ್‍ಲೈನ್‍ನಲ್ಲಿ ಅನುಮೋದಿಸಿ ರಾಜ್ಯಮಟ್ಟದ
ಲಾಗಿನ್‍ಗೆ ವರ್ಗಾಯಿಸಲಾಗುವುದು.
    2020-21ನೇ ಸಾಲಿಗೆ ಎನ್‍ಜಿಒಗಳು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು
ಕೊನೆಯ ದಿನಾಂಕ ಅ.15 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ
ವೆಬ್‍ಸೈಟ್ ವಿಳಾಸ: ತಿತಿತಿ.ಟಿgogಡಿಚಿಟಿಣsmoಣಚಿ.gov.iಟಿ/bo-ಟogiಟಿ ನಲ್ಲಿ

ಪರಿಶೀಲಿಸಬಹುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Leave a Reply

Your email address will not be published. Required fields are marked *