ದಾವಣಗೆರೆ ಜೂ.26
ಕೊರೋನಾ ವೈರಸ್ ವ್ಯಾಪಕವಾಗಿ ಹಡುತ್ತಿರುವ ಹಿನ್ನಲೆಯಲ್ಲಿ
ಸರ್ಕಾರವು ರಾಜ್ಯಾದ್ಯಂತ ಲಾಕ್‍ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ
ಮುಖ್ಯಮಂತ್ರಿಗಳು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ
ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಣಿಯಾದ
ಫಲಾನುಭವಿಗಳಿಗೆ ರೂ.5000 ಗಳ ಸಹಾಯ ಧನ ನೀಡಲು
ಘೋಷಿಸಿದ್ದು, ಫಲಾನುಭವಿಗಳ ಆಧಾರ್ ಕಾರ್ಡ್ ಮತ್ತು ಬ್ಯಾಂಕ್
ಖಾತೆಗಳ ವಿವರದ ಆಧಾರದ ಮೇಲೆ ಫಲಾನುಭವಿಗಳಿಗೆ
ಸಹಾಯ ಧನ ಬಿಡುಗಡೆ ನೀಡಲಾಗುವುದು.
ಫಲಾನುಭವಿಗಳ ಬ್ಯಾಂಕ್ ಖಾತೆ ವಿವರಗಳನ್ನು ಪಡೆದು
ಸಹಾಯ ಧನ ವಿತರಿಸಲು ಮಂಡಳಿಯಿಂದ ಜಿಲ್ಲಾ ಮಟ್ಟದ ಕಾರ್ಮಿಕ
ಅಧಿಕಾರಿಗಳನ್ನು ನೇಮಿಸಲಾಗಿದೆ. ಇದುವರೆಗೆ ದಾಖಲೆಗಳನ್ನು
ನೀಡದೇ ಹಾಗೂ ಸಹಾಯ ಧನ ಪಡೆಯದೇ ಇರುವವರು
ಜೂ.30 ರೊಳಗಾಗಿ ಅಗತ್ಯ ದಾಖಲೆಗಳಾದ ಗುರುತಿನ ಚೀಟಿ ಪ್ರತಿ,
ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳನ್ನು ಕಾರ್ಮಿಕ
ಅಧಿಕಾರಿಗಳ ಕಚೇರಿಗೆ ಖುದ್ದಾಗಿ ಅಥವಾ ಕಾರ್ಮಿಕ ಸಂಘಗಳ
ಮುಖಾಂತರ ತಲುಪಿಸತಕ್ಕದ್ದು. ತದನಂತರ ಬರುವ
ಅರ್ಜಿಗಳನ್ನು ಪುರಿಸ್ಕರಿಸುವುದಿಲ್ಲವೆಂದು ದಾವಣಗೆರೆ ಕಾರ್ಮಿಕ
ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.