ದಾವಣಗೆರೆ ಜೂ.26
ಜೂ.30 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸೂತಿ ಸ್ತ್ರೀರೋಗ
ವಿಭಾಗ, ಜಿಲ್ಲಾ ಸಿ.ಜಿ.ಆಸ್ಪತ್ರೆ ದಾವಣಗೆರೆ. ಇಲ್ಲಿ “ಸುರಕ್ಷಿತ ರಕ್ತ ಜೀವ
ರಕ್ಷಕ ರಕ್ತ ನೀಡಿ ಮತ್ತು ಪ್ರಪಂಚವನ್ನು ಆರೋಗ್ಯಕರ
ಸ್ಥಳವನ್ನಾಗಿಸಿ” ಎಂಬ ಘೋಷಣೆಯ ಮೂಲಕ ವಿಶ್ವ
ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ-2020ರ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಬೆಂಗಳೂರು. ಜಿಲ್ಲಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್
ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ರಕ್ತ ಭಂಡಾರ,
ಜಿಲ್ಲಾ ಚಿಗಟೇರಿ ಆಸ್ಪತ್ರೆ ದಾವಣಗೆರೆ ಇವರುಗಳ
ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಈ
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಉದ್ಘಾಟಿಸುವರು. ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿ
ಡಾ.ಹೆಚ್.ಎಸ್.ರಾಘವೇಂದ್ರ ಸ್ವಾಮಿ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಪದ್ಮ ಬಸವಂತಪ್ಪ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರಾದ
ಡಾ.ನಾಗರಾಜ್, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ
ಅಧೀಕ್ಷಕರಾದ ಡಾ.ನೀಲಕಂಠ.ಜೆ.ಬಿ, ನಿವಾಸಿ ವೈದ್ಯಾಧಿಕಾರಿಗಳಾದ
ಡಾ.ಹೆಚ್.ಡಿ.ವಿಶ್ವನಾಥ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ
ಘಟಕದ ಜಿಲ್ಲಾ ಕಾರ್ಯಕ್ರಮದ ಅಧಿಕಾರಿ ಡಾ.ಕೆ.ಹೆಚ್.ಗಂಗಾಧರ,
ರಕ್ತ ಭಂಡಾರ ವೈದ್ಯಾಧಿಕಾರಿ ಡಾ.ಡಿ.ಹೆಚ್.ಗೀತಾ
ಪಾಲ್ಗೋಳುವರೆಂದು ಪ್ರಕಟಣೆ ತಿಳಿಸಿದೆ.