ದಾವಣಗೆರೆ ಜೂ.26
ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಈ ಕೆಳಗಿನ
ನಗರಗಳಿಗೆ ಪಡಿತರ ಚೀಟಿದಾರರ ಹಿತದೃಷ್ಠಿಯಿಂದ ಮತ್ತು
ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ
ದೃಷ್ಠಿಯಿಂದ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು
ಮಂಜೂರು ಮಾಡಲು ನಿಯಮಾನುಸಾರ ನಿಗದಿತ
ನಮೂನೆಯಲ್ಲಿ ಅರ್ಜಿಗಳನ್ನು ಕರೆಯಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ
ಪ್ರಕಟಣೆ ಹೊರಡಿಸಿದ ದಿನಾಂಕದಿಂದ 30 ದಿವಸದೊಳಗಾಗಿ ಜಂಟಿ
ನಿರ್ದೇಶಕರು, ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ
ವ್ಯವಹಾರಗಳ ಇಲಾಖೆ, ಇವರಿಗೆ ಸಲ್ಲಿಸಬೇಕು. ಅವಧಿಯ ನಂತರ
ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಚನ್ನಗಿರಿ ಪಟ್ಟಣ ಹೊಸ
ನ್ಯಾಯಬೆಲೆ ಅಂಗಡಿ ಮಂಜೂರಾಗಿದೆ.
ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿ ಮಾಡಲಿರುವ
ದಾವಣಗೆರೆಯ ನಗರಗಳಾದ ಎಸ್.ಎಸ್.ಎಂ. ನಗರ ಅಂದಾಜು
ಪಡಿತರ ಚೀಟಿಗಳು, 53-ಅಂತ್ಯೋದಯ, 770-ಬಿಪಿಎಲ್(ಅಕ್ಷಯ),
ಎಪಿಎಲ್-04 ಒಟ್ಟು 827 ಹಾಗೂ ಭಾಷಾನಗರ ಪಡಿತರ ಚೀಟಿಗಳು, 95-
ಅಂತ್ಯೋದಯ, 830-ಬಿಪಿಎಲ್(ಅಕ್ಷಯ), ಎಪಿಎಲ್-02 ಒಟ್ಟು 927.
ಶಿವಾಜಿನಗರ ಪಡಿತರ ಚೀಟಿಗಳು, 66-ಅಂತ್ಯೋದಯ, 1000-
ಬಿಪಿಎಲ್(ಅಕ್ಷಯ), ಎಪಿಎಲ್-125 ಒಟ್ಟು 1191 ಮತ್ತು ಶ್ರೀ ದುರ್ಗಾಂಬಿಕ
ಬಡಾವಣೆ ನಿಟ್ಟುವಳ್ಳಿ ಪಡಿತರ ಚೀಟಿಗಳು, 35-ಅಂತ್ಯೋದಯ, 796-
ಬಿಪಿಎಲ್(ಅಕ್ಷಯ), ಎಪಿಎಲ್-169 ಒಟ್ಟು 1000, ಕೊಟ್ಟೂರೇಶ್ವರ ಬಡಾವಣೆ
ಸೇರ್ಪಡೆಗೊಳ್ಳುವ ಪಡಿತರ ಚೀಟಿಗಳು, 25-ಅಂತ್ಯೋದಯ,
925-ಬಿಪಿಎಲ್(ಅಕ್ಷಯ), ಎಪಿಎಲ್-50 ಒಟ್ಟು 1000.
ಎಸ್.ಜೆ.ಎಂ ನಗರ ಸೇರ್ಪಡೆಗೊಳ್ಳುವ ಪಡಿತರ ಚೀಟಿಗಳು, 60-
ಅಂತ್ಯೋದಯ, 85-ಬಿಪಿಎಲ್(ಅಕ್ಷಯ), ಎಪಿಎಲ್-05 ಒಟ್ಟು 915 ಬ್ಯಾಂಕ್
ಠೇವಣಿ ಮೊತ್ತ ಒಂದು ತಿಂಗಳಿಗೆ ಪಡಿತರ ಎತ್ತುವಳಿಗೆ ಬೇಕಾಗುವ
ಮೊತ್ತ ಕನಿಷ್ಠ ರೂ.50,000 ಇರುತ್ತದೆ
ರಾಜ್ಯ ಸರ್ಕಾರಿ ಸ್ವಾಮ್ಯದ ನಿಗಮಗಳು/ಸಂಸ್ಥೆಗಳು/ಗ್ರಾಮ
ಪಂಚಾಯತಿಗಳು ಮತ್ತು ಸ್ಥಳೀಯ ಸಂಸ್ಥೆಗಳು,
ತಾಲ್ಲೂಕು ವ್ಯವಸಾಯ ಉತ್ಪಾನ್ನ ಸಹಕಾರ ಸಂಘ/ವ್ಯವಸಾಯ
ಸೇವಾ ಸಹಕಾರ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ
ಸಂಘಗಳು ಅಥವಾ ವಿ.ಎಸ್.ಎಸ್.ಎಂ.ಎಸ್, (PಂಅS) ತೋಟಗಾರಿಕೆ
ಉತ್ಪಾನ್ನಗಳ (ಊಔPಅಔಒS) ಸಹಕಾರ ಸಂಘದ ಮಾರಾಟ ಮಂಡಳಿ
ನಿಯಮಿತ, ನೊಂದಾಯಿತ ಸಹಕಾರ ಸಂಘಗಳು, ದೊಡ್ಡ
ಪ್ರಮಾಣದ ಆದಿವಾಸಿಗಳ ವಿವಿದೋದ್ದೇಶ ಸಹಕಾರ ಸಂಘ,
ನೊಂದಾಯಿತ ನೇಕಾರರ ಮತ್ತು ಮಹಿಳಾ ವಿವಿದೋದ್ದೇಶ
ಸಂಘಗಳು, ಅಂಗವಿಕಲರ ಕಲ್ಯಾಣ ಸಹಕಾರ ಸಂಘಗಳು,
ಬ್ಯಾಂಕಿನಿಂದ ನಡೆಸಲ್ಪಡುವ ಸಹಕಾರ ಸಂಘಗಳು ಅಥವಾ
ಸಹಕಾರ ಬ್ಯಾಂಕ್ ಹಾಗೂ ವಿಕಲಚೇತನರು (ಸರ್ಕಾರ
ನಿಯಮಾನುಸಾರ), ತೃತೀಯ ಲಿಂಗಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಜಂಟಿ ನಿರ್ದೇಶಕರು ಆಹಾರ ನಾಗರಿಕ ಸರಬರಾಜು
ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಇವರಿಗೆ
ಸಲ್ಲಿಸತಕ್ಕದ್ದು, ಬೇರೆ ಕಚೇರಿಯಿಂದ ಅರ್ಜಿ ಸಲ್ಲಿಸಬಾರದು,
ನಿಗಧಿತ ಅರ್ಜಿ ನಮೂನೆಯನ್ನು ಕಚೇರಿ ಅಥವಾ ತಹಶೀಲ್ದಾರ್,
ಹೊನ್ನಾಳಿ ತಾಲ್ಲೂಕು ಕಚೇರಿಯಿಂದ ಪಡೆಯಬಹುದು. ಖಾಸಗಿ
ವ್ಯಕ್ತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು: ಅರ್ಜಿ ನಮೂನೆ ‘ಎ’
ಸಹಕಾರ ಸಂಘ/ಸಂಸ್ಥೆಗಳ ಮತ್ತು ಸ್ವಸಹಾಯ
ಸಂಘಗಳಾದರೆ ನೋದಾವಣೆ ಪತ್ರ, ಕಳೆದ 3 ವರ್ಷಗಳ
ದೃಡಿಕರಣ ಲೆಕ್ಕ ಪರಿಶೋಧನಾ ವರದಿ ಮತ್ತು
ಉಪನಿಯಮಗಳು(ಬೈಲಾ), ಹಾಗೂ ನ್ಯಾಯಬೆಲೆ ಅಂಗಡಿ
ನಡೆಸಲು ಮತ್ತು ಪ್ರಮಾಣ ಪತ್ರ ಸಲ್ಲಿಸಲು ಅಧಿಕಾರ
ಪಡೆದಿರುವ ಪ್ರತಿನಿಧಿಯನ್ನು ನೇಮಿಸಿರುವ ಬಗ್ಗೆ ನಿರ್ಣಯ,
ಕರ್ನಾಟಕ ಸೊಸೈಟೀಸ್ ರಿಜೀಸ್ಟ್ರೇಷನ್ ಆಕ್ಟ್ 1959 ಅಡಿ ವಿಚಾರಣೆ,
ಟ್ರಯಲ್ ಮತ್ತು ಲಿಕ್ವಿಟೇಷನ್ ನಡವಳಿ ನಡೆದಿರುವುದಿಲ್ಲ. ಎಂಬ
ಬಗ್ಗೆ ಸಕ್ಷಮ ಪ್ರಾಧಿಕಾರಿಯು ನೀಡಿರುವ ದೃಡೀಕರಣ ಪತ್ರ,
ವ್ಯಾಪಾರದ ಮಳಿಗೆಯ ಖಾತೆ ಅಥವಾ ಬಾಡಿಗೆ/ಕರಾರು ಪತ್ರ,
ಹಣಕಾಸು ಹೊಂದಿರುವ ಬಗ್ಗೆ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ,
ಸಹಕಾರ ಸಂಘದವರು ಅಧಿಕೃತವಾಗಿ ನೇಮಿಸಿರುವ
ಪ್ರತಿನಿಧಿಯ ಇತ್ತೀಚಿನ 3 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ,
ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವಾಗ ಕರ್ನಾಟಕ ಅಗತ್ಯ
ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ(ನಿಯಂತ್ರಣ) ಆದೇಶ
2018 ರಲ್ಲಿ ಆದ್ಯತೆಗಳನ್ನು ಪರಿಗಣಿಸಲಾಗುವುದು ಎಂದು
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ
ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.