ದಾವಣಗೆರೆ ಜೂ.26
2020-21ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ತ್ರೀಯ
ತೋಟಗಾರಿಕೆ ಮಿಷನ್ ಯೋಜನೆಯಡಿ ಈ ಕೆಳ ಕಾಣಿಸಿದ
ಘಟಕಗಳಿಗೆ ಅರ್ಹ ಹಾಗೂ ಆಸಕ್ತ ರೈತ ಫಲಾನುಭವಿಗಳಿಂದ
ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸ್ವೀಕರಿಸಲು ಜುಲೈ 17 ಕೊನೆಯ
ದಿನಾಂಕವಾಗಿದೆ.
ಘಟಕಗಳು: ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಅಡಿ,
ಕಂದುಬಾಳೆ, ಅಂಗಾಂಶ ಬಾಳೆ, ತರಕಾರಿ, ಕಟ್ ಪ್ಲವರ್ಸ್ ಪ್ರದೇಶ
ವಿಸ್ತರಣೆ. ವೈಯಕ್ತಿಕ ಕೃಷಿಹೊಂಡ, ಸಮುದಾಯ
ಕೃಷಿಹೊಂಡ, ಪಾಳಿಮನೆ, ನೆರಳು ಪರದೆ, ಪಕ್ಷಿ ನಿರೋಧಕ
ಬಲೆ, ಮಿನಿ ಟ್ರಾಕ್ಟರ್, ಪ್ಯಾಕ್ ಹೌಸ್, ಸಂಸ್ಕರಣಾ ಘಟಕ, ತಳ್ಳುವ ಗಾಡಿ,
ಜೇನು ಪೆಟ್ಟಿಗೆ, ಪ್ಲಾಸ್ಟಿಕ್ ಮಲ್ಚಿಂಗ್, ಈರುಳ್ಳಿ ಶೇಖರಣಾ
ಘಟಕಗಳಿಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ: ಕಸಬಾ ರೈತ ಸಂಪರ್ಕ ಕೇಂದ್ರದ
ಸಹಾಯಕ ತೋಟಗಾರಿಕೆ ಅಧಿಕಾರಿ ಎಚ್.ಎಸ್.ಪವನ್ ಕುಮಾರ್ ಮೊ.ಸಂ-
7022244152, ಆನಗೋಡು ರೈತ ಸಂಪರ್ಕ ಕೇಂದ್ರದ
ಸಹಾಯಕ ತೋಟಗಾರಿಕೆ ಅಧಿಕಾರಿ ರವಿ ಮೊ.ಸಂ-7019819101,
ಮಾಯಕೊಂಡ-1 ರೈತ ಸಂಪರ್ಕ ಕೇಂದ್ರದ ಸಹಾಯಕ
ತೋಟಗಾರಿಕೆ ಅಧಿಕಾರಿ ಏಕಾಂತ್ ಮೊ.ಸಂ-7899445111,
ಮಾಯಕೊಂಡ-2 ರೈತ ಸಂಪರ್ಕ ಕೇಂದ್ರದ ಸಹಾಯಕ
ತೋಟಗಾರಿಕೆ ಅಧಿಕಾರಿ ಪಿ.ಎಲ್.ಅರುಣ್ ರಾಜ್ ಮೊ.ಸಂ-8722551293 ಹಾಗೂ
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಲ್ಲಾ
ಪಂಚಾಯತ್) ದಾವಣಗೆರೆ ಮೊ.ಸಂ-9632650864 ಇವರನ್ನು
ಸಂಪರ್ಕಿಸಬಹುದು.
ಈ ಮೇಲಿನ ಯೋಜನೆಯಡಿ ಗುರಿ ಹಾಗೂ ಅನುದಾನದ ಲಭ್ಯತೆ
ಅನುಗುಣವಾಗಿ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಸರ್ಕಾರದ
ಮಾರ್ಗಸೂಚಿಯನ್ವಯ ಜೇಷ್ಠತೆ ಆಧಾರದ ಮೇಲೆ ಅರ್ಹ
ಅರ್ಜಿಗಳನ್ನು ಸಹಾಯಧನಕ್ಕಾಗಿ ಪರಿಗಣಿಸಲಾಗುವುದು.
ಮೊದಲು ಬಂದ ಅರ್ಹ ಫಲಾನುಭವಿಗಳಿಗೆ ಆದ್ಯತೆ
ನೀಡಲಾಗುವುದು. ಕೊನೆಯ ದಿನಾಂಕದ ನಂತರ ಬರುವ
ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ರೈತ ಬಾಂಧವರು ಅರ್ಜಿ
ಸಲ್ಲಿಸುವ ಮೂಲಕ ಯೋಜನೆಯ ಸದುಪಯೋಗ
ಪಡೆದುಕೊಳ್ಳಬೇಕೆಂದು ಜಿಲ್ಲಾ ಸಹಾಯಕ ತೋಟಗಾರಿಕೆ
ನಿರ್ದೇಶಕರಾದ ಟಿ.ಆರ್.ಶಶಿಕಲಾ ಅವರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.