ದಾವಣಗೆರೆ ಜೂ.27
ಎಸ್.ಎಸ್.ಎಲ್.ಸಿ ದ್ವೀತಿಯ ಪರೀಕ್ಷೆ ಪ್ರಾರಂಭವಾಗಿದ್ದು ಶನಿವಾರ ನಗರದಲ್ಲಿನ ಸರ್ಕಾರಿ ಹೈಸ್ಕೂಲ್ ಮೈದಾನ, ಮತ್ತು ಸಿದ್ದಗಂಗಾ, ಗೋಪನಾಳ, ಬಾತಿ, ಗ್ರಾಮದ ಶಾಲೆಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶುಭಕೋರಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂದು ಎಸ್.ಎಸ್.ಎಲ್.ಸಿಯ ದ್ವೀತಿಯ ಗಣಿತ ವಿಷಯ ಪರೀಕ್ಷೆ ಪ್ರಾರಂಭವಾಗಿದ್ದು ಜಿಲ್ಲೆಯಲ್ಲಿ ಒಟ್ಟು 93 ಪರೀಕ್ಷಾ ಕೇಂದ್ರಗಳಿವೆ ಅಂಧ ಹಾಗೂ ಮೂಗ ಮಕ್ಕಳು ಪರೀಕ್ಷೆ ಬರೆಯುವ ಪರಿ ನೋಡಿ ನನ್ನ ಆತ್ಮವಿಶ್ವಾಸ ಹೆಚ್ಚಿಗೆಯಾಗಿದೆ ಎಂದರು.
ಹಾಗೂ ಸಾಮಾಜಿಕ ಅಂತರ ಕಾಪಡಿಕೊಂಡು ಯಾವುದೇ ರೀತಿಯ ಗೊಂದಲ ಆಗದಂತೆ ವಿದ್ಯಾರ್ಥಿಗಳನ್ನು ಒಳಗೆ ಕಳುಹಿಸಿ ಕೂರಿಸುವ ವ್ಯವಸ್ಥೆ ಮಾಡಲಾಗಿದೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಥರ್ಮಲ್ ಸ್ಕಾನಿಂಗ್, ಮಾಡಲಾಗಿದೆಬ ವಿದ್ಯಾರ್ಥಿಗಳು ತುಂಬ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುತ್ತಿದ್ದಾರೆ ಎಂದರು.
ಕಂಟೈನ್‍ಮೆಂಟ್ ಜೋನ್‍ನಲ್ಲಿರುವ ವಿದ್ಯಾರ್ಥಿಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಇಬ್ಬರು ಎನ್.ಸಿ.ಸಿ ಕಮಾಂಡರ್‍ಗಳ ನೇಮಕ ಮಾಡಲಾಗಿದೆ. ರೆಡ್‍ಕ್ರಾಸ್, ಸ್ಕೌಟ್ಸ್ ಅಂಡ್ ಗೈಡ್ಸ್‍ನವರು ನಮಗೆ ನೆರವಾಗಿದ್ದಾರೆ.
ಪರೀಕ್ಷಾ ಕೇಂದ್ರದ ಸುತ್ತಮುತ್ತ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ. ಬಹಳಷ್ಟು ದೂರದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಇದರಿಂದಾಗಿ ಯಾವುದೆ ಪಾಲಕರು ಹಾಗೂ ಬೇರೆ ಯಾರು ಸಹ ಒಳಗೆ ಬರುವ ಮತ್ತು ಹೋಗುವ ಸಮಸ್ಯೆ ಆಗಿಲ್ಲ ಶಿಕ್ಷಣ ಸಚಿವರ ಆದೇಶದಂತೆ ಜಿಲ್ಲೆಯಲ್ಲಿ ಯಾವುದೆ ಅಹಿತಕರ ಘಟನೆ ನಡೆಯುದಂತೆ ಬಹಳ ಯಶಸ್ವಿಯಾಗಿ ಇಂದು ಎಸ್.ಎಸ್.ಎಲ್.ಸಿ ದ್ವೀತಿಯ ಪರೀಕ್ಷೆ ನಡೆಯುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶೀಕ್ಷಣಾಧಿಕಾರಿಗಳಾದ ಪರಮೇಶ್ವರಪ್ಪ, ಬಿ.ಇ.ಓ ಸಿದ್ದಪ್ಪ, ಮುಖ್ಯ ಅಧೀಕ್ಷಕರು, ಎನ್.ಸಿ.ಸಿ. ಕಮಾಂಡರ್‍ಗಳು ಉಪಸ್ಥಿತರಿದ್ದರು.