ದಾವಣಗೆರೆ ಜೂ.28
ಜೂ.29 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಡಳಿತ ಭವನದ
ಅಪರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಾರತದ ಖ್ಯಾತ ಸಂಖ್ಯಾ

ಶಾಸ್ತ್ರಜ್ಞರಾದ ಪ್ರೋ ಪಿ.ಸಿ ಮಾಹಾಲನೊಬೀಸ್ ಜನ್ಮದಿನಚರಣೆ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬೆಂಗಳೂರು.
ಹಾಗೂ ಜಿಲ್ಲಾಡಳಿತ ಭವನ ದಾವಣಗೆರೆ ಇವರುಗಳ
ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಸುಸ್ಥಿರ ಅಭಿವೃದ್ದಿ,
ಮತ್ತು ಲಿಂಗ ಸಮಾನತೆ ಸಾಧಿಸಿ ಮಹಿಳೆ ಮತ್ತು ಹೆಣ್ಣು
ಮಕ್ಕಳನ್ನು ಸಶಕ್ತರನ್ನಾಗಿಸುವುದು ಈ ಉಪನ್ಯಾಸ
ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧ್ಯಕ್ಷತೆ
ವಹಿಸುವರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಮುಖ್ಯ ಕಾರ್ಯ
ನಿರ್ವಹಣಾಧಿಕಾರಿಗಳಾದ ಪದ್ಮಾ ಬಸವಂತಪ್ಪ, ಮಹಾನಗರ ಪಾಲಿಕೆ
ಆಯುಕ್ತರಾದ ವಿಶ್ವನಾಥ್ ಪಿ. ಮುದಜ್ಜಿ, ಜಿ.ಪಂ ಮುಖ್ಯ
ಯೋಜನಾಧಿಕಾರಿಗಳಾದ ಎನ್.ಲೋಕೇಶ್, ಜಂಟಿ ಕೃಷಿ
ನಿರ್ದೇಶಕರಾದ ಶರಣಪ್ಪ, ಜಗಳೂರು ತಾಲ್ಲೂಕು ಪಂಚಾಯತ್
ಕಾರ್ಯ ನಿರ್ವಹಣಾಧಿಕಾರಿಗಳಾದ ಬಿ. ಮಲ್ಲನಾಯ್ಕ, ಜಿ.ಪಂ
ಯೋ.ಅ.ಮೌ. ಅಧಿಕಾರಿ. ಶಾರದ ಜಿ. ದೊಡ್ಡಗೌಡರ್, ಮಹಿಳಾ ಮತ್ತು
ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರಾದ
ವಿಜಯಕುಮಾರ, ಜಿಲ್ಲಾ ಆರ್ಯೋಗ್ಯ ಕುಟುಂಬ
ಕಲ್ಯಾಣಾಧಿಕಾರಿಗಳಾದ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ
ಕೌಶಲ್ಯಾಭಿವೃದ್ದಿ ಅಧಿಕಾರಿಗಳಾದ ಎನ್. ಏಕನಾಥ್, ಜಿಲ್ಲಾ ಕಾರ್ಮಿಕ
ಅಧಿಕಾರಿಗಳಾದ ಇಬ್ರಾಹಿಂ ಸಾಬ್, ವಾರ್ತಾ ಮತ್ತು ಪ್ರಚಾರ ಇಲಾಖೆಯ
ಹಿ. ಸ. ನಿರ್ದೇಶಕರಾದ ಅಶೋಕ್ ಕುಮಾರ್ ಡಿ, ಪಾಲ್ಗೋಳುವರು
ಎಂದು ಜಿಲ್ಲಾ ಸಂಗ್ರಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *