ದಾವಣಗೆರೆ ಜೂ.29 
ರಾಜ್ಯಾದ್ಯಂತ ಕೋವಿಡ್ 19 ಸೋಂಕು ಪ್ರಕರಣಗಳು
ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ
ದಾವಣಗೆರೆ ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕು
ಹರಡದಂತೆ ತಡೆಯುವ ಸಲುವಾಗಿ, ಸಾರ್ವಜನಿಕರ ಆರೋಗ್ಯದ
ಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಸೂಕ್ತ ಮುಂಜಾಗ್ರತಾ
ಕ್ರಮಗಳನ್ನು ಕೈಗೊಳ್ಳಲು ಸಿಆರ್‍ಪಿಸಿ 1973 ರ ಕಲಂ 144
ರನ್ವಯ ಪ್ರತಿ ದಿನ ರಾತ್ರಿ 8 ರಿಂದ ಬೆಳಿಗ್ಗೆ 5 ಗಂಟೆಯವರೆಗೆ
ರಾತ್ರಿ ಕಫ್ರ್ಯೂವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು
ಜಾರಿಗೊಳಿಸಿರುತ್ತಾರೆ.
ಈ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ,
ಅವಶ್ಯಕವಲ್ಲದ ಚಟುವಟಿಕೆಗಳ, ವ್ಯಕ್ತಿಗಳ ಹಾಗೂ
ವಾಹನಗಳ ಸಂಚಾರವನ್ನು ಕಟ್ಟುನಿಟ್ಟಾಗಿ
ನಿಷೇಧಿಸಲಾಗಿರುತ್ತದೆ. ದಿನಾಂಕ: 05-07-2020 ರ ಭಾನುವಾರದಿಂದ
ಮುಂದಿನ ನಾಲ್ಕು ಭಾನುವಾರಗಳು ಕಟ್ಟುನಿಟ್ಟಾಗಿ
ನಿಷೇಧಿಸಲಾಗಿರುತ್ತದೆ. ಅಂದರೆ ದಿನಾಂಕ: 02-08-2020 ರವರೆಗೆ
ಎಲ್ಲಾ ಭಾನುವಾರಗಳಂದು ಪೂರ್ಣ ದಿನದ ಲಾಕ್‍ಡೌನ್ ಎಂದು
ಘೋಷಿಸಲಾಗಿರುತ್ತದೆ. ಆದರೆ ಲಾಕ್‍ಡೌನ್ ಅವಧಿಯಲ್ಲಿ ಅಗತ್ಯ
ಸರಕು ಸರಂಜಾಮುಗಳ ಸಾಗಾಣಿಕೆಗೆ ಯಾವುದೇ
ನಿರ್ಬಂಧವಿರುದಿಲ್ಲ.
ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ದ ಭಾರತೀಯ
ದಂಡ ಸಂಹಿತೆಯ ಕಲಂ 188 &ಚಿmಠಿ; 270 ಹಾಗೂ ವಿಪತ್ತು ನಿರ್ವಹಣಾ
ಕಾಯ್ದೆ 2005 ರ ಸೆಕ್ಷನ್ 51 ರಿಂದ 60 ರ ಪ್ರಕಾರ ಕ್ರಮ
ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *