ದಾವಣಗೆರೆ ಜೂ.30
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ವಿವಿಧ ದತ್ತಿನಿಧಿ
ಪ್ರಶಸ್ತಿಗಳಿಗೆ 2019 ರಲ್ಲಿ ಪ್ರಕಟವಾದ ಕನ್ನಡ
ಪುಸ್ತಕಗಳನ್ನು ಕಳುಹಿಸಬಹುದಾಗಿದೆ.
ಪುಸ್ತಕಗಳನ್ನು ಕಳುಹಿಸುವವರು ಜುಲೈ 31
ರೊಳಗೆ ಪ್ರತಿ ಪ್ರವೇಶಕ್ಕೆ ತಲಾ ಮೂರು
ಪುಸ್ತಕಗಳನ್ನು ತಮ್ಮ ವಿಳಾಸ, ದೂರವಾಣಿ ಹಾಗೂ ಮೊಬೈಲ್
ಸಂಖ್ಯೆಗಳನ್ನು ನಮೂದಿಸಿ ಗೌರವ ಕಾರ್ಯದರ್ಶಿ, ಕನ್ನಡ
ಸಾಹಿತ್ಯ ಪರಿಷತ್ತು, ಬೆಂಗಳೂರು-560018 ಈ ವಿಳಾಸಕ್ಕೆ
ಕಳುಹಿಸಬೇಕು ಹಾಗೂ ತಡವಾಗಿ ಬಂದಂತಹ
ಪುಸ್ತಕಗಳನ್ನು ಸ್ಪರ್ಧೆಯಲ್ಲಿ ಪರಿಗಣಿಸಲಾಗುವುದಿಲ್ಲ.
ಸ್ಪರ್ಧೆಯಲ್ಲಿ ಅನ್ವಯಿಸುವ ನಿಯಮಗಳು: ಪರಿಶೀಲನೆಗೆ
ಬಂದಂತಹ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ ಹಾಗೂ
ಬಹುಮಾನದ ಬಗ್ಗೆ ಪರಿಷತ್ತು ನೇಮಿಸುವ ತೀರ್ಪುಗಾರರು
ನೀಡುವ ಶಿಫಾರಸು ಗಮನಿಸಿ ಪರಿಷತ್ತು ಅಂತಿಮ ನಿರ್ಧಾರ
ಕೈಗೊಳ್ಳುವುದು.
ಯಾವುದೇ ವರ್ಷ ಪ್ರಶಸ್ತಿಗೆ ಅರ್ಹ ಗ್ರಂಥಗಳು
ಬಾರದಿದ್ದಾಗ ಆ ವರ್ಷ ಪ್ರಶಸ್ತಿಯನ್ನು ನೀಡದಿರವ ಹಕ್ಕು
ಪರಿಷತ್ತಿಗೆ ಇರುತ್ತದೆ ಹಾಗೂ ಒಂದಕ್ಕಿಂತ ಹೆಚ್ಚು
ಗ್ರಂಥಗಳು ಅತ್ಯುತ್ತಮವೆಂದು ಪರಿಗಣಿತವಾದರೆ
ಬಹುಮಾನದ ಹಣವನ್ನು ಹಂಚಿ ವಿತರಿಸುವ ಹಕ್ಕು ಪರಿಷತ್ತಿಗೆ
ಇರುತ್ತದೆ.
ಪಿ.ಹೆಚ್.ಡಿ ಗ್ರಂಥಗಳನ್ನು ಸ್ಪರ್ಧೆಗೆ
ಪರಿಗಣಿಸಲಾಗುವುದಿಲ್ಲ ಹಾಗೂ ಭಾಗವಹಿಸುತ್ತಿರುವ
ಸ್ಪರ್ಧೆಯ ದತ್ತಿ ಹೆಸರನ್ನು ಪುಸ್ತಕದ ಮೊದಲ ಒಳಪುಟದಲ್ಲಿ
ಸ್ಪಷ್ಟವಾಗಿ ಸೂಚಿಸಬೇಕು ಹಾಗೂ ಹೆಚ್ಚಿನ ವಿವರಗಳಿಗೆ ಸ್ವ-
ವಿಳಾಸದ ಸ್ಟ್ಯಾಂಪ್ ಹಚ್ಚಿದ ಲಕೋಟೆಯನ್ನು ಇಟ್ಟು ಪತ್ರ
ಬರೆಯಬಹುದು.
ಹೆಚ್ಚಿನ ಮಾಹಿತಿಯನ್ನು ತಿತಿತಿ.ಞಚಿsಚಿಠಿಚಿ.iಟಿ ಈ ವೆಬ್‍ಸೈಟ್‍ನಲ್ಲಿ
ಪಡೆಯಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ
ಕಾರ್ಯದರ್ಶಿ ವ.ಚ ಚನ್ನೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.